ಬೆಂಗಳೂರು: ರಾಜ್ಯ ಅಲ್ಪಸಂಖ್ಯಾತರ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ವಕ್ಫ್ ಮಂಡಳಿಯಲ್ಲಿ ನಡೆದಿರುವ ಎಲ್ಲ ಹಗರಣಗಳನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್, ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರಕ್ಕೆ ವಕ್ಫ್ ಮಂಡಳಿಯಲ್ಲಿ ನಡೆಯುವ ಹಗರಣಗಳ ಬಗ್ಗೆ ದೂರುಗಳು ಬರುತ್ತ್ತಿದ್ದು, ಇಲ್ಲಿವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದ ಅನ್ವರ್ ಮಾಣಿಪ್ಪಾಡಿ, ಮಂಡಳಿಯಲ್ಲಿ ನಡೆಯುವ ಅವ್ಯವಹಾರವನ್ನು ಪತ್ತೆ ಹಚ್ಚಲು ಸಿಬಿಐ ತನಿಖೆಗೆ ನೀಡಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
2004ರಲ್ಲಿ ಮೈಸೂರಿನ ಮುಸ್ಲಿಂ ಬಾಲಕಿ ಮತ್ತು ಬಾಲಕರ ಅನಾಥಾಶ್ರಮಕ್ಕೆ ತಾತ್ಕಾಲಿಕ ಆಡಳಿತ ಸಮಿತಿಯನ್ನು ನೇಮಕ ಮಾಡಲಾಗಿತ್ತು. ನಂತರ ಹೊಸ ಆಡಳಿತ ಸಮಿತಿ 2011ರ ವೇಳೆಗೆ ಬಂದಿತ್ತು. ಆದರೆ 2008ರಲ್ಲಿ ತಾತ್ಕಾಲಿಕ ಆಡಳಿತ ಸಮಿತಿ ಸಂಸ್ಥೆಯ ಆಸ್ತಿಗಳನ್ನು ಕೆನರಾ ಬ್ಯಾಂಕ್ನಲ್ಲಿ ಅಡವಿಟ್ಟು 8.5 ಕೋಟಿ ರೂ. ಹಣವನ್ನು ಸಾಲ ಪಡೆದು ದರ್ಬಳಕೆ ಮಾಡಿಕೊಂಡಿದ್ದಾರೆಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಹಗರಣಕ್ಕೆ ಶಾಸಕರಾದ ತನ್ವೀರ್ ಸೇಠ್ ಮತ್ತು ಅವರ ತಂದೆ ಕಾರಣವೆಂದು ಆರೋಪಿಸಿದ ಅನ್ವರ್ ಮಾಣಿಪ್ಪಾಡಿ, ಅಸಲು ಮತ್ತು ಬಡ್ಡಿ ಸೇರಿ ಒಟ್ಟು 32 ಕೋಟಿ ರೂ ಬಾಕಿಯಿದ್ದು, ಕೆನರಾ ಬ್ಯಾಂಕ್ ಆಸ್ತಿ ಹರಾಜಿಗೆ ನೋಟಿಸ್ ನೀಡಿದೆ ಎಂದಿದ್ದಾರೆ.
ಇದನ್ನೂ ಓದಿ..
‘ಸಿಎಂ B.S.ಯಡಿಯೂರಪ್ಪ ಒಬ್ಬ ಚಿಕ್ಕ ನರೇಂದ್ರ ಮೋದಿ.. ಬರೀ ಸುಳ್ಳುಗಳನ್ನೇ ಹೇಳ್ತಾನೆ’
Published On - 6:18 pm, Sat, 28 November 20