ಅಪರ್ಣ ಮತ್ತು ವಸ್ತಾರೆಯವರದ್ದು ಅರ್ಥಪೂರ್ಣ ದಾಂಪತ್ಯ: ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕ

ಅಪರ್ಣ ಮತ್ತು ವಸ್ತಾರೆಯವರದ್ದು ಅರ್ಥಪೂರ್ಣ ದಾಂಪತ್ಯ: ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 13, 2024 | 6:29 PM

ನಿರೂಪಣೆ ಸುಲಭವಾದ ಕೆಲಸವಲ್ಲ, ಅದಕ್ಕಾಗಿ ಹಲವಾರು ಆಯಾಮಗಳಲ್ಲಿ ಪರಿಣಿತಿ ಸಾಧಿಸಿರಬೇಕು, ಕಾಂಪೇರಿಂಗ್ ಈಸ್ ಆಲ್ಸೋ ಎನ್ ಌಕ್ಟಿಂಗ್ ಎಂದು ಹೇಳುವ ಚಂದ್ರಶೇಖರ್, ನಿರೂಪಕರಿಗೆ ನಟನೆ ಜೊತೆ, ಸಾಹಿತ್ಯ, ಸಂಗೀತ, ಭಾಷೆ ಮತ್ತು ಅದರ ಸೊಬಗು, ಮಾತಿನಲ್ಲಿ ಏರಿಳಿತ ಎಲ್ಲ ಗೊತ್ತಿರಬೇಕು, ಮತ್ತು ಸಭಾಂಗಣದ ಕಟ್ಟಕಡೆಯಲ್ಲಿ ಕೂತಿರುವ ವ್ಯಕ್ತಿಗೂ ಅವರ ಧ್ವನಿ ಸ್ಫುಟವಾಗಿ ಕೇಳಿಸಬೇಕು ಎಂದರು.

ಬೆಂಗಳೂರು: ಗುರವಾರದಂದು ಇಹಲೋಕ ಯಾತ್ರೆ ತ್ಯಜಿಸಿ ಕಣ್ಮರೆಯಾದ ಬಹುಮುಖ ಪ್ರತಿಭೆಯ ಅಪರ್ಣ ಅವರ ಬಗ್ಗೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬಹಳ ಆಪ್ತವಾಗಿ ಮಾತಾಡಿದ್ದಾರೆ. ತಮ್ಮ ಕಚೇರಿಯಲ್ಲಿಂದು ನಮ್ಮ ವರಗಾರ್ತಿಯೊಂದಿಗೆ ಮಾತಾಡಿರುವ ಅವರು, ಅಪರ್ಣ ತನ್ನ ನೋವನ್ನು ತಾನೇ ನುಂಗಿಕೊಂಡು ಬದುಕಿದರು, ಸಾವು ತನ್ನೆದಿರು ನಿಂತಿದೆ, ಅದರಿಂದ ತಪ್ಪಿಸಿಕೊಳ್ಳಲಾಗಲ್ಲ ಅಂತ ಗೊತ್ತಿದ್ದ ಅವರು ದಿಟ್ಟತನದಿಂದ ಅದನ್ನು ಎದುರಿಸಿದರು, ಸಾವಿಗೆ ಹೆದರಿ ಅಂಜುಬುರುಕಿಯಾಗಿ ಬದುಕಲಿಲ್ಲ, ಸಾವನ್ನು ಗೌರವಯುತವಾಗಿ ಬರಮಾಡಿಕೊಳ್ಳುವುದು ಒಂದು ವಿಶೇಷವಾದ ಶಕ್ತಿ, ಶವಪಟ್ಟಿಗೆಯಲ್ಲಿ ಅವರು ತಲೆತುಂಬಾ ಹೂ ಮುಡಿದು, ಹಣೆಗೆ ದೊಡ್ಡ ಕುಂಕುಮವಿಟ್ಟುಕೊಂಡು, ಅದ್ಭುತವಾಗಿ ಸೀರಯುಟ್ಟುಕೊಂಡು ಹಸನ್ಮುಖಿಯಾಗಿ ಅವರು ಮಲಗಿದ್ದರು, ಈಗೇನು ಕಾರ್ಯಕ್ರಮವೊಂದನ್ನು ನಡೆಸಲು ಹೋಗುತ್ತಾರೆನೋ ಎಂದು ಭಾಸವಾಗುತಿತ್ತು ಎಂದು ಚಂದ್ರಶೇಖರ್ ಹೇಳಿದರು.

ಅಪರ್ಣ ಮತ್ತು ನಾಗರಾಜ್ ವಸ್ತಾರೆ ಅವರ ದಾಂಪತ್ಯದ ಬಗ್ಗೆ ಮಾತಾಡಿದ ನಿರ್ದೇಶಕ, ವಸ್ತಾರೆ ವೃತ್ತಿಯಿಂದ ಆರ್ಕಿಟೆಕ್ಟ್ ಆಗಿದ್ದರೂ ಒಬ್ಬ ಲೇಖಕ, ಕತೆಗಾರ, ಕಾದಂಬರಿಕಾರ ಕೂಡ ಆಗಿದ್ದಾರೆ. ಬದುಕಿನ ವಿನ್ಯಾಸಗಳನ್ನೂ ಈ ಆರ್ಕಿಟೆಕ್ಟ್ ಚೆನ್ನಾಗಿ ಅರಿತಿದ್ದಾರೆ, ಒಂದು ಪ್ರಾಜೆಕ್ಟ್ ನಲ್ಲಿ ಅವರಿಂದ ಸಹಾಯ ಪಡೆದಿದ್ದೆ, ಖುದ್ದು ವಸ್ತಾರೆಯವರೇ ಹೇಳಿದ ಹಾಗೆ ಅಪರ್ಣ ಜೊತೆ ಅವರದ್ದು ಅರ್ಥಪೂರ್ಣ ದಾಂಪತ್ಯ ಎಂದು ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವ್ಯಾಕರಣಬದ್ಧವಾಗಿ ಕನ್ನಡ ಮಾತಾಡುತ್ತಿದ್ದ ಅಪರ್ಣಾ ನನಗಾಗಿ ಹಲವಾರು ಕಾರ್ಯಕ್ರಮ ನಡೆಸಿಕೊಟ್ಟಿದ್ದರು: ಇಂದ್ರಜಿತ್ ಲಂಕೇಶ್