Sign In

By signing in or creating an account, you agree with Associated Broadcasting Company's Terms & Conditions and Privacy Policy.

Siddaramaiah: ನವ ಸರ್ಕಾರದ ನಿರಾಸಕ್ತಿ, ನಾಡಿನ ಶ್ರೀಮಂತ ರಂಗ ಸಂಸ್ಕೃತಿ ಅವನತಿ? ರಂಗ ಚಟುವಟಿಕೆ ಇಲ್ಲದೇ ಭಣಗುಡುತ್ತಿದೆ ಧಾರವಾಡ ರಂಗಾಯಣ

Dharwad Rangayana: ನಾಡಿನ ರಂಗ ಸಂಸ್ಕೃತಿ ಶ್ರೀಮಂತಗೊಳಿಸಲು 12 ವರ್ಷ ಹಿಂದೆ ಶುರುವಾದ ಧಾರವಾಡ ರಂಗಾಯಣಕ್ಕೆ ಅನುದಾನದ ಕೊರತೆ ಕಾಡುತ್ತಿದೆ. ಚುನಾವಣೆ ನಂತರ ಹೊಸ ಸರ್ಕಾರ ಬಂದಾಗಿನಿಂದ ಈವರೆಗೂ ನೂತನ ನಿರ್ದೇಶಕರ ನೇಮಕವಾಗಿಲ್ಲ. ಅನುದಾನ ಇಲ್ಲದೆ ಐದು ತಿಂಗಳಿಂದ ಯಾವುದೇ ರಂಗ ಚಟುವಟಿಕೆ ಇಲ್ಲದೇ ರಂಗಾಯಣ ಭಣಗುಡುತ್ತಿದೆ.

Siddaramaiah: ನವ ಸರ್ಕಾರದ ನಿರಾಸಕ್ತಿ, ನಾಡಿನ ಶ್ರೀಮಂತ ರಂಗ ಸಂಸ್ಕೃತಿ ಅವನತಿ? ರಂಗ ಚಟುವಟಿಕೆ ಇಲ್ಲದೇ ಭಣಗುಡುತ್ತಿದೆ ಧಾರವಾಡ ರಂಗಾಯಣ
ನಾಡಿನ ಶ್ರೀಮಂತ ರಂಗ ಸಂಸ್ಕೃತಿ ಅವನತಿ? ರಂಗ ಚಟುವಟಿಕೆ ಇಲ್ಲದೇ ಭಣಗುಡುತ್ತಿದೆ ಧಾರವಾಡ ರಂಗಾಯಣ!
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಸಾಧು ಶ್ರೀನಾಥ್​

Updated on:Sep 25, 2023 | 12:42 PM

ನಾಡಿನ ರಂಗ ಸಂಸ್ಕೃತಿ ಶ್ರೀಮಂತಗೊಳಿಸಲು 12 ವರ್ಷಗಳ ಹಿಂದೆ ಶುರುವಾದ ಧಾರವಾಡ ರಂಗಾಯಣಕ್ಕೆ ಇದೀಗ ಅನುದಾನದ ಕೊರತೆ ತೀವ್ರವಾಗಿ ಕಾಡುತ್ತಿದೆ. ಕಳೆದ ಐದು ತಿಂಗಳಿನಿಂದ ರಂಗಾಯಣ ತನ್ನ ರಂಗ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ವಿಧಾನಸಭಾ ಚುನಾವಣೆ ನಂತರ ಹೊಸ ಸರ್ಕಾರ ಬಂದಾಗಿನಿಂದ ಈವರೆಗೂ ನೂತನ ನಿರ್ದೇಶಕರ ನೇಮಕವಾಗಿಲ್ಲ. ಜೊತೆಗೆ ನಯಾ ಪೈಸಾ ಅನುದಾನವೂ ಇಲ್ಲದ ಹಿನ್ನೆಲೆಯಲ್ಲಿ ಐದು ತಿಂಗಳಿಂದ ಯಾವುದೇ ರಂಗ ಚಟುವಟಿಕೆಗಳು ಇಲ್ಲದೇ ರಂಗಾಯಣದ ಆವರಣ ಭಣಗುಡುತ್ತಿದೆ.

ಹಿರಿಯ ರಂಗ ಚೇತನ ಬಿ. ಎ. ಕಾರಂತರ ಕನಸಿನ ಕೂಸಾಗಿ ಮೈಸೂರು ರಂಗಾಯಣ ಆರಂಭವಾಯಿತು. ಅದರ ಭಾಗವಾಗಿ ಧಾರವಾಡದಲ್ಲಿ 2006ರಲ್ಲಿ ರಂಗಾಯಣ ಶುರುವಾದರೂ 2011ರಲ್ಲಿ ಸ್ವಾಯತ್ತತೆ ಪಡೆಯಿತು. ನಟರಾಜ ಏಣಗಿ ಪ್ರಥಮ ನಿರ್ದೇಶಕರಾಗಿ ರಂಗಾಟ ಶುರು ಮಾಡಿದ ಧಾರವಾಡ ರಂಗಾಯಣವು ಚಿಣ್ಣರ ಮೇಳ, ಯುವ ರಂಗೋತ್ಸವ, ನವರಾತ್ರಿ ರಂಗೋತ್ಸವ, ರಂಗಧ್ವನಿ ರಾಷ್ಟ್ರೀಯ ರಂಗಸಂಗೀತ ಕಾರ್ಯಾಗಾರ ಸೇರಿದಂತೆ ಹತ್ತು ಹಲವು ನಾಟಕಗಳನ್ನು ಹೊರ ತಂದಿದೆ.

ಜೊತೆಗೆ 50ಕ್ಕೂ ಹೆಚ್ಚು ರೆಪರ್ಟರಿ ಕಲಾವಿದರು ರಂಗಾಯಣದಿಂದ ಹೊರ ಬ೦ದಿದ್ದಾರೆ. ಇಂಥ ರಂಗಾಯಣದ ನಿರ್ದೇಶಕರಾಗಿದ್ದ ರಮೇಶ ಪರವೀನಾಯ್ಕರ್ ಸಮಯದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮಳ ಜೀವನ ಆಧಾರಿತ ಚೆನ್ನಮ್ಮ ನಾಟಕವೇ ರಂಗಾಯಣದ ಕೊನೆಯ ನಾಟಕ. ಅಲ್ಲಿಂದ ಯಾವುದೇ ಕಾರ್ಯಕ್ರಮ, ನಾಟಕದ ಸಿದ್ಧತೆಗಳೂ ನಡೆದಿಲ್ಲ. ಪ್ರತಿ ವರ್ಷ ಅಕ್ಟೋಬರ್‌ ತಿ೦ಗಳಲ್ಲಿ ದಸರಾ ನಿಮಿತ್ತ ನವರಾತ್ರಿ ರಂಗೋತ್ಸವ ನಡೆಯುತ್ತಿತ್ತು. ಇದೀಗ ಅದು ಕನಸು ಮಾತ್ರ.

ಆರಂಭದಲ್ಲಿ ಪ್ರತಿ ವರ್ಷ ಒಂದು ಕೋಟಿ ಅನುದಾನ ಪಡೆಯುತ್ತಿದ್ದ ಧಾರವಾಡ ರಂಗಾಯಣಕ್ಕೆ ನಿಧಾನವಾಗಿ ರೂ. 75 ಲಕ್ಷ, ರೂ. 50 ಲಕ್ಷದಿಂದ ಇದೀಗ ಕಳೆದ ಬಾರಿ ರೂ. 40 ಲಕ್ಷ ಅನುದಾನ ಬಂದಿದ್ದು, ಈ ವರ್ಷವಂತೂ ಅನುದಾನವೇ ಇಲ್ಲದಾಗಿದೆ. ಬೇಸರದ ಸಂಗತಿ ಏನೆಂದರೆ, ಕಳೆದ ಮೂರು ತಿಂಗಳಿಂದ ಸಿಬ್ಬಂದಿ ಹಾಗೂ ರೆಪರ್ಟರಿ ಕಲಾವಿದರಿಗೆ ಸಂಬಂಳವೇ ಬಂದಿಲ್ಲ. ಇನ್ನೂ ವಿಚಿತ್ರವೆಂದರೆ, ಕಳೆದ ಒಂದು ವರ್ಷದಿಂದ ಆಡಳಿತಾಧಿಕಾರಿಗೂ ಸಂಬಳ ಬಂದಿಲ್ಲ.

ಇದನ್ನೂ ಓದಿ: ಮಂಗಳೂರಿನಲ್ಲಿ ಕ್ರೈಸ್ತ ಧರ್ಮೀಯರ ಜೊತೆ ಸಾಮರಸ್ಯಕ್ಕೆ ಅಡಿಪಾಯ ಹಾಕಿದೆ RSS

ಹೀಗಾಗಿ, ರಂಗಾಯಣ ಬೇರೆ ಬೇರೆ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ ಸಭಾಭವನ ಬಾಡಿಗೆ ನೀಡುವ ಸಂಸ್ಥೆಯಾಗಿದ್ದು, ಬಾಡಿಗೆ ನೀಡಿದ್ದಕ್ಕೆ ಅವರ ಬ್ಯಾನರ್‌ನಲ್ಲಿ ರಂಗಾಯಣದ ಸಹಕಾರ ಎಂದು ಹೆಸರು ಹಾಕಿಕೊಳ್ಳುವ ಸ್ಥಿತಿಗೆ ಬಂದಿದೆ. ಇನ್ನು ಸರಕಾರ ರಂಗಾಯಣ ಮಾತ್ರವಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನೂ ಸರ್ಕಾರ ಕಡೆಗಣಿಸಿದೆ. ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳು, ರಂಗ ಕಾರ್ಯಕ್ರಮಗಳು ಎಲ್ಲಿಯೂ ನಡೆಯುತ್ತಿಲ್ಲ. ಹೀಗಾಗಿ ಕೂಡಲೇ ಸರಕಾರ ಇತ್ತ ಗಮನ ಹರಿಸಬೇಕು ಅನ್ನೋದು ರಂಗಾಸಕ್ತರ ಆಗ್ರಹ.

ಸದ್ಯಕ್ಕೆ ರಂಗಾಯಣದಲ್ಲಿ ಯಾವುಏ ಚಟುವಟಿಕೆ ನಡೆಯುತ್ತಿಲ್ಲವಾದ್ದರಿಂದ ರೆಪರ್ಟರಿ ಕಲಾವಿದರು, ಸಿಬ್ಬಂದಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಹೀಗಾಗಿ ಸರಕಾರ ಕೂಡಲೇ ರಂಗಾಯಣ ಮತ್ತೆ ಕ್ರಿಯಾಶೀಲವಾಗಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿದೆ. ಒಟ್ಟಿನಲ್ಲಿ ನಾಡಿನ ರಂಗ ಕಲೆಗೆ ಶಕ್ತಿ ತುಂಬಲು ಆರಂಭವಾದ ರಂಗಾಯಣಗಳ ಬಗ್ಗೆ ಸರಕಾರ ಇಷ್ಟೊಂದು ನಿರ್ಲಕ್ಷವಹಿಸುತ್ತಿರೋದು ವಿಪರ್ಯಾಸದ ಸಂಗತಿಯೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:41 pm, Mon, 25 September 23

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು