ತಲೆಗೆ ಬಣ್ಣ ಹಚ್ಚಲು ರೇಟ್ ವಿಚಾರಕ್ಕೆ ವಾಗ್ವಾದ; ಕತ್ತರಿಯಿಂದ ಇರಿದು ಗ್ರಾಹಕನ ಕೊಲೆ ಮಾಡಿದ ಕ್ಷೌರಿಕ
ಗಾಯಾಳು ಸಾಗರನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾಗರ ಅವಟಿ ಮೃತಪಟ್ಟಿದ್ದಾನೆ. ಆರೋಪಿ ಸದಾಶಿವ ನಾವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ: ಸಲೂನ್ನಲ್ಲಿ ತಲೆಗೆ ಬಣ್ಣ ಹಚ್ಚಲು ರೇಟ್ ವಿಚಾರಕ್ಕೆ ವಾಗ್ವಾದ ನಡೆದಿದ್ದು ಕತ್ತರಿಯಿಂದ ಇರಿದು ಗ್ರಾಹಕನನ್ನು ಕ್ಷೌರಿಕ ಬರ್ಬರವಾಗಿ ಕೊಂದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮದ ಸಲೂನ್ನಲ್ಲಿ ನಡೆದಿದೆ. ಸಾಗರ ಅವಟಿ(22) ಕೊಲೆಯಾದ ಗ್ರಾಹಕ.
ಪ್ರಜ್ವಲ್ ಜೆಂಟ್ಸ್ ಪಾರ್ಲರ್ನ ಸದಾಶಿವ ನಾವಿ ಎಂಬ ಕ್ಷೌರಿಕ ಈ ಕೃತ್ಯ ಎಸಗಿದ್ದಾನೆ. ನಿನ್ನೆ ಸಂಜೆ ಸಾಗರ ಎಂಬ ಯುವಕ ತಲೆಗೆ ಕಲರ್ ಮಾಡಿಸಲು ಸಲೂನ್ಗೆ ಬಂದಿದ್ದ. ಈ ವೇಳೆ ಸಲೂನ್ ಮಾಲೀಕ ಲಕ್ಷ್ಮಣ ಕಲರ್ ಹಚ್ಚೋದಕ್ಕೆ ಮುಂದಾಗಿದ್ದ. ಆಗ ತಲೆಗೆ ಬಣ್ಣ ಹಚ್ಚಲು 20 ರೂ. ಕೊಡುವುದಾಗಿ ಬಣ್ಣ ಹಚ್ಚುತ್ತಿದ್ದ ಸಲೂನ್ ಮಾಲೀಕ ಲಕ್ಷ್ಮಣಗೆ ಸಾಗರ ಹೇಳಿದ್ದ. ಮತ್ತೊಬ್ಬ ಗ್ರಾಹಕನಿಗೆ ಕ್ಷೌರ ಮಾಡುತ್ತಿದ್ದ ಸದಾಶಿವ ನಾವಿ ಗರಂ ಆಗಿದ್ದಾನೆ. ಗ್ರಾಹಕ ಸಾಗರ ಅವಟಿ ಜತೆ ಜಗಳಕ್ಕೆ ಇಳಿದಿದ್ದಾನೆ. ಈ ಹಿಂದೆಯೂ ಸದಾಶಿವ ನಾವಿಯನ್ನು ಸಾಗರ ರೇಗಿಸುತ್ತಿದ್ದ. ಹೀಗಾಗಿ ತನ್ನ ಎಲ್ಲ ಕೋಪವನ್ನು ವ್ಯಕ್ತಪಡಿಸಿ ಈ ಬಾರಿ ಜಗಳಕ್ಕೆ ಇಳಿದಿದ್ದ ಸದಾಶಿವ ನಾವಿ, ಸಾಗರನ ಎದೆಯ ಎಡಭಾಗಕ್ಕೆ ಕತ್ತರಿಯಿಂದ ಇರಿದು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ‘ಡಾನ್ಸಿಂಗ್ ಚಾಂಪಿಯನ್’ ಫಿನಾಲೆಯಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್; ಶೋ ಗೆದ್ದವರಿಗೆ ಇದೆ ವಿಶೇಷ ಬಹುಮಾನ
ಗಾಯಾಳು ಸಾಗರನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾಗರ ಅವಟಿ ಮೃತಪಟ್ಟಿದ್ದಾನೆ. ಆರೋಪಿ ಸದಾಶಿವ ನಾವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಕೆಲಸ ಮಾಡುತ್ತಿದ್ದ ವೇಳೆ ಗೋಡೆ ಕುಸಿದು ವ್ಯಕ್ತಿ ಸಾವು ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಗೋಡೆ ಕುಸಿದು ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಪರಶಿವಮೂರ್ತಿ(60) ಮೃತ ದುರ್ದೈವಿ. ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಗೋಡೆ ಕುಸಿದು ಬಿದ್ದಿದ್ದು ಗಂಭೀರ ಗಾಯಗೊಂಡಿದ್ದ ಪರಶಿವಮೂರ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಪರಶಿವಮೂರ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ರತ್ನಾಂಬಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಯಾದ ದಲಿತ ಯುವಕನ ಮನೆಗೆ ಭೇಟಿ ನೀಡಲಿರುವ ಸಿದ್ದಲಿಂಗ ಸ್ವಾಮೀಜಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದ್ದ ಪ್ರೀತಿ ವಿಚಾರಕ್ಕೆ ದಲಿತ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾದ ವಿಜಯ್ ಕಾಂಬಳೆ ಮನೆಗೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಭೇಟಿ ನೀಡಲಿದ್ದಾರೆ. ಇಂದು ಮುಂಜಾನೆ ಹತ್ತು ಗಂಟೆ ಸುಮಾರಿಗೆ ಭೇಟಿ ನೀಡಲಿದ್ದಾರೆ. ಎರಡು ದಿನದ ಹಿಂದೆ ಮುಸ್ಲಿಂ ಯುವಕರಿಂದ ವಿಜಯ್ ಕಾಂಬಳೆ ಅನ್ನೋ ಯುವಕನ ಕೊಲೆಯಾಗಿತ್ತು. ಮುಸ್ಲಿಂ ಯುವತಿಯನ್ನು ಪ್ರೀತಿಸಿದ ವಿಚಾರಕ್ಕೆ ಕೊಲೆ ಮಾಡಲಾಗಿತ್ತು. ಮುಸ್ಲಿಂ ಯುವಕರಿಂದ ದಲಿತ ಯುವಕನ ಕೊಲೆಯನ್ನು ಖಂಡಿಸಿದ್ದ ಸಿದ್ದಲಿಂಗ ಸ್ವಾಮೀಜಿಯವರು ಇಂದು ಮನೆಗೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಮೋಟೋ E32s: ಏನು ವಿಶೇಷತೆ?, ಬೆಲೆ ಎಷ್ಟು?
ಎಸಿಬಿ ಬಲೆಗೆ ಬಿದ್ದ ಸರ್ವೇಯರ್ ರಾಯಚೂರು ತಹಶೀಲ್ದಾರ್ ಕಚೇರಿಯ ಎಡಿಎಲ್ ಆರ್ ಕಚೇರಿಯ ಮೇಲೆ ಎಸಿಬಿ ದಾಳಿ ನಡೆಸಿದ್ದು ಸರ್ವೆಯರ್ ಎನ್ ಮಹೇಶ ಎಸಿಬಿ ಬಲೆಗೆ ಬಿದ್ದಿದ್ದಾರೆ. ವೆಂಕಟೇಶ ವರಲು ಎಂಬುವವರು ಎಸಿಬಿಗೆ ದೂರು ನೀಡಿದ್ದರು. ಈ ಆಧಾರದ ಮೇಲೆ ದಾಳಿ ನಡೆಸಿದ ಎಸಿಬಿ, ಜಮೀನು ಪೋಡಿ ಮಾಡಲು 35 ಸಾವಿರ ಲಂಚ ಕೇಳಿದ್ದ ಮಹೇಶ10 ಸಾವಿರ ಮುಂಗಡ ಪಡೆಯುವ ವೇಳೆ ಎಸಿಬಿ ದಾಳಿ ನಡೆಸಿದೆ.
ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಹಾಲಾಪುರ ಬಳಿ ಬ್ರೇಕ್ ಫೇಲ್ಯೂರ್ ಆದ್ರೂ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ನಿನ್ನೆ ಸಂಜೆ ಮಸ್ಕಿಯಿಂದ ಕವಿತಾಳಕ್ಕೆ ಹೊರಟಿದ್ದ ಈಶಾನ್ಯ ಕರ್ನಾಟಕ ಸಾರಿಗೆಗೆ ಸೇರಿದ ಬಸ್ ಹಾಲಾಪುರ ಗ್ರಾಮದ ಹೊರ ಭಾಗದಲ್ಲಿ ಬ್ರೇಕ್ ಫೆಲ್ಯೂರ್ ಆಗಿದೆ. ಆಗ ಸಮಯ ಪ್ರಜ್ಞೆ ಮೆರೆದಿದ್ದ ಬಸ್ ಚಾಲಕ ಮಂಜುನಾಥ್, ಅದೇ ಮಾರ್ಗದಲ್ಲಿ ಬರ್ತಿದ್ದ ಆಟೋ, ಟಾಟಾ ಸುಮೋ ಸೇರಿ ಕೂಡಲೇ ಎರಡು ವಾಹನಗಳಿಗೆ ಡಿಕ್ಕಿ ಆಗೋದನ್ನ ತಪ್ಪಿಸಿದ್ದಾರೆ. ಕೂಡಲೇ ರಸ್ತೆ ಪಕ್ಕದ ಜಮೀನಿಗೆ ಬಸ್ ನುಗ್ಗಿಸಿ ಅನಾಹುತ ತಡೆದಿದ್ದಾರೆ. ಇದೇ ಬಸ್ನಲ್ಲಿ 20ಕ್ಕೂ ಹೆಚ್ಚು ಶಾಲಾ ಮಕ್ಕಳು, ಜನ ಪ್ರಯಾಣಿಸುತ್ತಿದ್ದರು. ಬಸ್ ಚಾಲಕ ಮಂಜುನಾಥ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದ್ದು ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ‘ಡಾನ್ಸಿಂಗ್ ಚಾಂಪಿಯನ್’ ಫಿನಾಲೆಯಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್; ಶೋ ಗೆದ್ದವರಿಗೆ ಇದೆ ವಿಶೇಷ ಬಹುಮಾನ
Published On - 7:18 am, Fri, 27 May 22