Rahul Gandhi tiger cub adoption: ಹಂಪಿಯಲ್ಲಿ ಹುಲಿ ಮರಿ ದತ್ತು ಪಡೆದ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ

 ಹಂಪಿಯ ಅಟಲ್ ಬಿಹಾರಿ ಜಿಯೋಲಾಜಿಕಲ್ ಪಾರ್ಕ್ ನಲ್ಲಿರುವ ಬಿಳಿ ಹುಲಿ ಮರಿಯನ್ನು ರಾಹುಲ್​ ಗಾಂಧಿ ಅವರ ಹೆಸರಿನಲ್ಲಿ ಒಂದು ವರ್ಷಕ್ಕೆ (ಜೂನ್​ 19ರಂದು) ದತ್ತು ಪಡೆಯಲಾಗಿದೆ.

Rahul Gandhi tiger cub adoption: ಹಂಪಿಯಲ್ಲಿ ಹುಲಿ ಮರಿ ದತ್ತು ಪಡೆದ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಸಾಧು ಶ್ರೀನಾಥ್​

Updated on: Jun 24, 2021 | 1:09 PM

ಬಳ್ಳಾರಿ: ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ ಅವರು ಮೂರು ದಿನಗಳ ಹಿಂದೆ ತಮ್ಮ 51ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚಿರಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ವತಿಯಿಂದ ಸೇವಾ ದಿವಸ್​ ಆಚರಣೆ ಸಹ ನಡೆಯಿತು. ಇದೆಲ್ಲದರ ಮಧ್ಯೆ, ರಾಹುಲ್ ಗಾಂಧಿ (Rahul Gandhi) ಹೆಸರಿನಲ್ಲಿ ಹಂಪಿಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಹುಲಿ ಮರಿಯನ್ನು ದತ್ತು ಪಡೆದಿದ್ದಾರೆ.

ಹಂಪಿಯ ಅಟಲ್ ಬಿಹಾರಿ ಜಿಯೋಲಾಜಿಕಲ್ ಪಾರ್ಕ್ ನಲ್ಲಿರುವ ಬಿಳಿ ಹುಲಿ ಮರಿಯನ್ನು (tiger cub) ರಾಹುಲ್​ ಗಾಂಧಿ ಅವರ ಹೆಸರಿನಲ್ಲಿ ಒಂದು ವರ್ಷಕ್ಕೆ (ಜೂನ್​ 19ರಂದು) ದತ್ತು ಪಡೆಯಲಾಗಿದೆ. ಅರ್ಜುನ (Arjuna) ಎಂಬ ಹೆಸರಿನ ಬಿಳಿ ಹುಲಿ ಮರಿ ಇದಾಗಿದ್ದು, ಒಂದು ಲಕ್ಷ ರೂ ಹಣ ನೀಡಿ ಒಂದು ವರ್ಷಕ್ಕೆ ದತ್ತು ಪಡೆಯಲಾಗಿದೆ. ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರು ಈ ದತ್ತು ಸ್ವೀಕರಿಸಿದ್ದಾರೆ. ಅಟಲ್ ಬಿಹಾರಿ ಜಿಯೋಲಾಜಿಕಲ್ ಪಾರ್ಕ್ (Atal Bihari Vajpayee Zoological Park in Hampi) ನಲ್ಲಿರುವ ಬಿಳಿ ಹುಲಿ ಮರಿ ಇದಾಗಿದೆ.

ಹಂಪಿಯ ಪ್ರಾಣಿ ಸಂಗ್ರಹಾಲಯದಲ್ಲಿರುವ ಬಿಳಿ ಹುಲಿ ಮರಿ

ಹುಲಿ ಸಂತತಿ ಸಂರಕ್ಷಣೆಗಾಗಿ ಪ್ರಾಜೆಕ್ಟ್​ ಹುಲಿ (Project Tiger) ಎಂಬ ಯೋಜನೆಯನ್ನು 1973ರಲ್ಲಿ ಅಂದಿನ ಪ್ರಧಾನ ಮಂತ್ರಿ, ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ (Indira Gandhi) ಅವರು ಕೇಂದ್ರ ಸರ್ಕಾರದ ವತಿಯಿಂದ ಜಾರಿಗೆ ತಂದಿದ್ದರು ಎಂಬುದು ಗಮನಾರ್ಹ.

ನಮ್ಮ ನಾಯಕ ರಾಹುಲ್​ ಗಾಂಧಿ ಅವರ 51ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳಬೇಕು ಅಂತಾ ತೀರ್ಮಾನಿಸಿದ್ದೆವು. ಹಾಗಾಗಿ ನಮ್ಮ ಕಾರ್ಯಕರ್ತರು 1 ಲಕ್ಷ ರೂಪಾಯಿಯನ್ನು ಸಂಗ್ರಹಿಸಿ ಜೂನ್​ 19ರಂದು ಅಟಲ್ ಬಿಹಾರಿ ಜಿಯೋಲಾಜಿಕಲ್ ಪಾರ್ಕ್ ಅಧಿಕಾರಿಗಳಿಗೆ (Zoo Authority of Karnataka) ಆನ್​ಲೈನ್​ ಮೂಲಕ ಮನವಿ ಮಾಡಿಕೊಂಡು, ದತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆವು ಎಂದು ಬಳ್ಳಾರಿ ಮತ್ತು ವಿಜಯನಗರ ಗ್ರಾಮೀಣ ಭಾಗದ ಯುವ ಕಾಂಗ್ರೆಸ್​ ಅಧ್ಯಕ್ಷ ಸಿದ್ದು ಹಳ್ಳೇಗೌಡ ಅವರು ತಿಳಿಸಿದ್ದಾರೆ.

ಕೊರೊನಾ ಕಾಟದಿಂದ ಎಲ್ಲೆಡೆ ಪ್ರಾಣಿ ಸಂಗ್ರಹಾಲಯಗಳಲ್ಲಿ ಪ್ರಾಣಿ ಸಂಕುಲ ಬಳಲುತ್ತಿದೆ. ಇದನ್ನು ಮನಗಂಡು, ಸಾಮಾಜಿಕ ಕಾಳಜಿಯಿಂದ ನಮ್ಮ ನಾಯಕ ರಾಹುಲ್​ ಗಾಂಧಿ ಅವರ ಹೆಸರಿನಲ್ಲಿ ಈ ಕೆಲಸ ಮಾಡಿದೆವು. ಇದು ನಮಗೆ ಅತೀವ ಸಂತೋಷ ತಂದುಕೊಟ್ಟಿದೆ ಎಂದು ಸಿದ್ದು ಹಳ್ಳೇಗೌಡ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

(ಹರೀಶ್, ಟಿವಿ9, ದೆಹಲಿ)

ತಿಹಾರ್ ಜೈಲಿನಲ್ಲಿ ನೆರವಿಗೆ ನಿಂತವನ ಕೈಬಿಡದ ಕಾಂಗ್ರೆಸ್ ನಾಯಕ; ಡಿ.ಕೆ‌. ಶಿವಕುಮಾರ್ ಮಾನವೀಯ ಮುಖ ಇಲ್ಲಿದೆ ನೋಡಿ!

(Arjuna the white tiger cub adopted in the name of Rahul Gandhi at Atal Bihari Vajpayee Zoological Park in Hampi at Ballari)

Published On - 12:44 pm, Thu, 24 June 21

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us