ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ಶಾಸಕರಿಗೆ ತಾರತಮ್ಯ ಮಾಡಿದ್ದಾರೆ ಎಂದು ಅರವಿಂದ ಲಿಂಬಾವಳಿ ತಿರುಗೇಟು ಕೊಟ್ಟಿದ್ದಾರೆ.
ಹಿಂದೆ ಇತಿಹಾಸ ನೋಡಿದ್ರೆ ಯಾರು ಯಾರಿಗೆ ಕಾಟ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತದೆ, ಧರಂ ಸಿಂಗ್ ಸರ್ಕಾರ ಇದ್ದಾಗ ಧರಂಸಿಂಗ್ ಗೆ ಕಾಟ ಕೊಟ್ಟಿದ್ಯಾರು? ಯಡಿಯೂರಪ್ಪನವರ ಜೊತೆ ಸೇರಿ ಸರ್ಕಾರ ಮಾಡಿದಾಗ ಸ್ಥಾನ ಬಿಟ್ಟುಕೊಡದೇ ಕಾಟ ಕೊಟ್ಟಿದ್ಯಾರು? ಈಗ ಕಾಂಗ್ರೆಸ್ ಜೊತೆ ಅತಿ ಕಡಿಮೆ ಸ್ಥಾನ ಬಂದಾಗಲೂ ಸರ್ಕಾರ ಮಾಡಿ ತಾರತಮ್ಯ ಮಾಡಿದ್ಯಾರು?
ಕಾಂಗ್ರೆಸ್ ಶಾಸಕರಿಗೆ ತಾರತಮ್ಯ ಮಾಡಿದ್ದರ ಪರಿಣಾಮ ಸರ್ಕಾರ ಬೀಳುವಂತಾಯ್ತು. ಭ್ರಷ್ಟ ಸರ್ಕಾರದ ವಿರುದ್ಧ, ಅಭಿವೃದ್ಧಿ ಮಾಡದೆ ತಾರತಮ್ಯ ಮಾಡಿದ್ದರಿಂದ ಎಲ್ಲಾ ಶಾಸಕರು ಹೊರಗೆ ಬಂದಿದ್ದಾರೆ ವಿನಹ ಬೇರೆನಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿಗೆ ಕೆ ಆರ್ ಪುರಂ ನಲ್ಲಿ ಲಿಂಬಾವಳಿ ಹೇಳಿದ್ದಾರೆ.
Published On - 1:34 pm, Mon, 18 November 19