ಕೊಡಗು: ಕಸ ಹಾಕುವ ವಿಚಾರದಲ್ಲಿ 2 ಅಂಗಡಿ ಮಾಲೀಕರು ಕಿರಿಕ್ ಮಾಡಿಕೊಂಡು ಓರ್ವ ಮಾಲೀಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಎರಡು ಅಂಗಡಿ ಮಧ್ಯೆ ಕಸ ಹಾಕೋ ವಿಚಾರದಲ್ಲಿ ಮೊದಲಿಗೆ ಜಗಳ ಶುರುವಾಗಿದೆ. ಆಗ ಎರಡು ಅಂಗಡಿ ಮಾಲೀಕರ ನಡುವೆ ಗಲಾಟೆಯಾಗಿದೆ.
ಮಡಿಕೇರಿ ನಗರದ ಕೋಲ್ಡ್ ಸ್ಟೋರೇಜ್ ಅಂಗಡಿ ಮಾಲೀಕ ಅಬೀಬ್ ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಫರ್ನೀಚರ್ ಅಂಗಡಿಯ ಕಲೀಂ, ಸಮೀರ್, ಹರ್ಷದ್, ಸಮೀರ್ ಎಂಬುವರು ಅಬೀಬ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.