AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Assembly Session: ಅಕ್ರಮ ನಿವೇಶನಗಳ ಹಂಚಿಕೆಯಲ್ಲಿ ಯಾರೇ ಲಾಭಾರ್ಥಿಗಳಾಗಿದ್ದರೂ ತನಿಖೆಯಾಗಲಿ: ಬಸನಗೌಡ ಯತ್ನಾಳ್

Assembly Session: ಅಕ್ರಮ ನಿವೇಶನಗಳ ಹಂಚಿಕೆಯಲ್ಲಿ ಯಾರೇ ಲಾಭಾರ್ಥಿಗಳಾಗಿದ್ದರೂ ತನಿಖೆಯಾಗಲಿ: ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 24, 2024 | 3:37 PM

Share

Assembly Session: ಸದನದಲ್ಲಿ ಆರೋಗ್ಯಕರ ಚರ್ಚೆ ನಡೆಯದಿರುವುದು ಪದೇಪದೆ ಬೆಳಕಿಗೆ ಬರುತ್ತಿದೆ. ಆದರೆ, ಪ್ರತಿಬಾರಿ ಗದ್ದಲ, ಗಲಾಟೆ ನಡೆಯುತ್ತದೆ ಅಂತೇನಿಲ್ಲ, ವಿರೋಧ ಪಕ್ಷ ನಾಯಕರು ಅರೋಪ ಮಾಡಿದಾಗ ಆಡಳಿತ ಪಕ್ಷದ ನಾಯಕರು ಉತ್ತರ ಹೇಳುವ ಬದಲು ಪ್ರತ್ಯಾಪರೋಪ ಮಾಡುತ್ತಾರೆ, ಅಗಲೇ ಗಲಾಟೆ ಶುರುವಾಗುತ್ತದೆ. ಸ್ಪೀಕರ್ ಸುಮ್ಮನಿರಲು ಹೇಳಿದರೂ ಗದ್ದಲ ಮುಂದುವರಿಯುತ್ತದೆ.

ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಯಾರು ಹೆಚ್ಚು ಸೈಟು ಇಲ್ಲವೇ ಜಮೀನುಗಳನ್ನು ಲೂಟಿ ಮಾಡಿದ್ದಾರೆ ಅನ್ನೋದೇ ಇವತ್ತು ಸದನದಲ್ಲಿ ನಡೆದ ಚರ್ಚೆಗಳ ಮುಖ್ಯಾಂಶ! ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸದನದಲ್ಲಿ ಮಾತಾಡಿ, ಪರಸ್ಪರ ಅರೋಪಗಳನ್ನು ಮಾಡುತ್ತಾ ಕಚ್ಚಾಡುವುದು ಬೇಡ, ನಡೆದಿರುವ ಹಗರಣಗಳ ದಾಖಲೆಗಳನ್ನೆಲ್ಲ ಮುಂದಿಟ್ಟುಕೊಂಡು ತನಿಖೆ ನಡೆಸಲಿ, ಯಾರೇ ಲೂಟಿ ಮಾಡಿದ್ದರೂ ಶಿಕ್ಷೆಯಾಗಲಿ, ತಾರತಮ್ಯ ಬೇಡ, ಒಂದು ಮಾನದಂಡವನ್ನು ಫಿಕ್ಸ್ ಮಾಡಿ ಲೂಟಿ ಮಾಡಿದವರು ಅಥವಾ ಅಕ್ರಮ ಎಸಗಿದವರು ಕಾಂಗ್ರೆಸ್ ನಾಯಕರಾಗಿರಲಿ, ಬಿಜೆಪಿ ಇಲ್ಲವೇ ಜೆಡಿಎಸ್ ನಾಯಕರಾಗಿರಲಿ, ತನಿಖೆಯಾಗಲಿ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ಹೇಳಿದರು. ಅವರು ಕುಳಿತ ಮೇಲೆ ಎದ್ದು ನಿಂತು ಮಾತಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಒಂದಷ್ಟು ಕಾಗದಗಳ ಬಂಡಲ್ ಅನ್ನು ಸಭಾಧ್ಯಕ್ಷರಿಗೆ ತೋರಿಸಿ, ಬಿಜೆಪಿ ನಾಯಕರು ಎಕರೆಗಟ್ಟಲೆ ಲೂಟಿ ಮಾಡಿದ್ದರೆ, ನೀವು ಅನುಮತಿ ನೀಡಿದರೆ ಎಲ್ಲ ದಾಖಲೆಗಳನ್ನು ಸದನದ ಮುಂದಿಡ್ತೀನಿ ಅನ್ನುತ್ತಾರೆ. ಸರಿ ಇಡಿ, ತಡೆದಿದ್ದು ಯಾರು? ಅಂತ ಬಿಜೆಪಿ ಶಾಸಕರು ಹೇಳಿದಾಗ ಸ್ಪೀಕರ್ ಮಧ್ಯೆ ಪ್ರವೇಶಿಸಿ ಸುರೇಶ್ ರನ್ನು ಕೂತುಕೊಳ್ಳಲು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: MUDA Scam: ಪತ್ರಿಕಾ ವರದಿಗಳು ನಿಜವಾಗಿದ್ದರೆ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಜಿಟಿ ದೇವೇಗೌಡ