ಒಬ್ಬ ಮಿನಿಸ್ಟರ್ PA ಆಗಿ.. ಲಂಚ ಕೇಳಲು ನಾಚಿಕೆ ಆಗಲ್ವೇನ್ರೀ? -ಸಚಿವ ಅಶೋಕ್ PA ವಿರುದ್ಧ ಅಧಿಕಾರಿಯ ಗಂಭೀರ ಆರೋಪ
ಚೆಲುವರಾಜ್ ಅಶೋಕ್ PA ಗಂಗಾಧರ್ರನ್ನು ಲಂಚ ಕೇಳಲು ನಾಚಿಕೆ ಆಗಲ್ವೇನ್ರೀ ಅಂತಾ ಫುಲ್ ಚಾರ್ಜ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಒಬ್ಬ ಮಿನಿಸ್ಟರ್ PA ಆಗಿ ಲಂಚ ಕೇಳ್ತೀರಾ ಅಂತಾ ಕ್ಲಾಸ್ ತಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಅವರ PA ತಮ್ಮ ಬಳಿ ಲಂಚಕ್ಕೆ ಬೇಡಿಕೆಯಿಟ್ಟರು ಎಂದು ಶೃಂಗೇರಿ ಸಬ್ ರಿಜಿಸ್ಟ್ರಾರ್ ಆರೋಪಿಸಿದ್ದಾರೆ. ಸದ್ಯ, ಆರ್.ಅಶೋಕ್ PA ಗಂಗಾಧರ್ ಸಬ್ ರೆಜಿಸ್ಟ್ರಾರ್ ಚೆಲುವರಾಜ್ ಜೊತೆ ಈ ಕುರಿತು ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಅಶೋಕ್ PA ಗಂಗಾಧರ್ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಕಂದಾಯ ಸಚಿವ ಆರ್.ಅಶೋಕ್ PA ಗಂಗಾಧರ್ ತಮ್ಮ ಬಳಿ ಎಷ್ಟು ತಂದಿದ್ದೀರಾ? ಕೊಡಿ ಅಂತಾ ಕೇಳಿದ್ದಾರೆ ಎಂದು ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಆರೋಪಿಸಿದ್ದಾರೆ.
ಇದಕ್ಕೆ, ಚೆಲುವರಾಜ್ ನನಗೆ ಅಭ್ಯಾಸ ಇಲ್ಲ ಎಂದು ಉತ್ತರಿಸಿದ್ದಾರಂತೆ. ಅದಕ್ಕೆ ಗಂಗಾಧರ್, ನಾನು ಹಣ ಕೊಡು ಅಂತಾ ಕೇಳಿಲ್ಲವೆಂದು ಹೇಳಿದರಂತೆ. ಸದ್ಯ, ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಮತ್ತು ಅಶೋಕ್ ಪಿಎ ಗಂಗಾಧರ್ ನಡುವಿನ ಈ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
‘ಲಂಚ ಕೇಳಲು ನಾಚಿಕೆ ಆಗಲ್ವೇನ್ರೀ’ ಜೊತೆಗೆ ಆಡಿಯೋದಲ್ಲಿ, ಚೆಲುವರಾಜ್ ಅಶೋಕ್ PA ಗಂಗಾಧರ್ರನ್ನು ಲಂಚ ಕೇಳಲು ನಾಚಿಕೆ ಆಗಲ್ವೇನ್ರೀ ಅಂತಾ ಫುಲ್ ಚಾರ್ಜ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಒಬ್ಬ ಮಿನಿಸ್ಟರ್ PA ಆಗಿ ಲಂಚ ಕೇಳ್ತೀರಾ ಅಂತಾ ಕ್ಲಾಸ್ ತಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದಲ್ಲದೆ, ನೀವು ಸಚಿವ ಆರ್.ಅಶೋಕ್ಗೆ ಅಫೀಷಿಯಲ್ PA ಅಲ್ವಾ? ಎಂದು ಮೊಬೈಲ್ ಸಂಭಾಷಣೆಯಲ್ಲಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಗಂಗಾಧರ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರಂತೆ.
ಇನ್ನು, ಈ ಬಗ್ಗೆ ಶೃಂಗೇರಿ ಸಬ್ರಿಜಿಸ್ಟ್ರಾರ್ ಚಲುವರಾಜ್ ಟಿವಿ9ಗೆ ಪ್ರತಿಕ್ರಿಯಿಸಿದ್ದು ಕಾರ್ಯಕ್ರಮವೊಂದು ಮುಗಿದ ಬಳಿಕ ಗಂಗಾಧರ್ ನನಗೆ ವಾಟ್ಸಾಪ್ ಕರೆ ಮಾಡಿದ್ದರು. ಬಳಿಕ ಬೆಳಗ್ಗೆ ನಾನು ಕರೆ ಮಾಡಿ ಮಾತಾಡಿದಾಗ ಪ್ಯಾಚ್ ಅಪ್ ಮಾಡೋಕೆ ಯತ್ನಿಸಿದರು ಎಂದು ಹೇಳಿದ್ದಾರೆ.
ಲಂಚ ಕೇಳಿದ ಬಗ್ಗೆ ಮಾತಾಡದೆ ಪ್ಯಾಚ್ ಅಪ್ಗೆ ಯತ್ನ ಮಾಡಿದರು. ಅದಾದ ಬಳಿಕ R.ಅಶೋಕ್ PA ಗಂಗಾಧರ್ ನನಗೆ ಕರೆ ಮಾಡಿಲ್ಲ ಎಂದು ಸಬ್ ರೆಜಿಸ್ಟ್ರಾರ್ ಚೆಲುವರಾಜ್ ಟಿವಿ9ಗೆ ಹೇಳಿದ್ದಾರೆ.
ಪರೀಕ್ಷೆಗೂ ಮುನ್ನ FDA ಆನ್ಸರ್ ಕೀ ಸೋರಿಕೆ ಪ್ರಕರಣ: BE ಮುಗಿಸಿ ನೇರವಾಗಿ SDA ಹುದ್ದೆಗೆ ಸೇರಿದ್ದ ರಮೇಶ್ ಹೆರಕಲ್