ಚಿಕ್ಕಬಳ್ಳಾಪುರ: ನಾಮಕರಣದ ತಂಗಳು ಮಶ್ರೂಮ್ ಬಿರಿಯಾನಿ ಸೇವಿಸಿ 25 ಜನರು ಅಸ್ವಸ್ಥ
ನಾಮಕರಣದ ತಂಗಳು ಊಟ ಸೇವಿಸಿ 25 ಜನರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ರೆಡ್ಡಿಗೊಲ್ಲರಹಳ್ಳಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ: ನಾಮಕರಣದ ತಂಗಳು ಮಶ್ರೂಮ್ ಬಿರಿಯಾನಿ ಸೇವಿಸಿ 25 ಜನರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ರೆಡ್ಡಿಗೊಲ್ಲರಹಳ್ಳಿಯಲ್ಲಿ ನಡೆದಿದೆ.
ಸದ್ಯ, ಅಸ್ವಸ್ಥಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್, ಅಸ್ವಸ್ಥಗೊಂಡ 25 ಜನರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭೇಟಿ ಕೊಟ್ಟು ಅಸ್ವಸ್ಥರ ಆರೋಗ್ಯದ ಬಗ್ಗೆ ವಿಚಾರಿಸಿದರು. ಜೊತೆಗೆ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.
ಒಬ್ಬ ಮಿನಿಸ್ಟರ್ PA ಆಗಿ.. ಲಂಚ ಕೇಳಲು ನಾಚಿಕೆ ಆಗಲ್ವೇನ್ರೀ? -ಸಚಿವ ಅಶೋಕ್ PA ವಿರುದ್ಧ ಅಧಿಕಾರಿಯ ಗಂಭೀರ ಆರೋಪ
Published On - 10:23 pm, Mon, 25 January 21