ನಮ್ಮ ಮೋಕ್ಷ ನಮ್ಮ ಭಾಷೆಯಲ್ಲೇ ಇದೆ ಅನ್ನೋದನ್ನ ಯುವಕರು ತಿಳಿದುಕೊಳ್ಳಬೇಕು.. ಆಗ ಕನ್ನಡ ಗಟ್ಟಿಮುಟ್ಟಾಗಿರುತ್ತೆ -ಡಾ.ಚಂದ್ರಶೇಖರ ಕಂಬಾರ
ಇದು ಕನ್ನಡ ಸರಸ್ವತಿಗೆ ಸಿಕ್ಕ ಪ್ರಶಸ್ತಿ. ಇದನ್ನ ನಾನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಪದ್ಮಭೂಷಣ ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಟಿವಿ9ಗೆ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಪ್ರತಿಕ್ರಿಯಿಸಿದರು.
ಬೆಂಗಳೂರು: ಇದು ಕನ್ನಡ ಸರಸ್ವತಿಗೆ ಸಿಕ್ಕ ಪ್ರಶಸ್ತಿ. ಇದನ್ನ ನಾನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಪದ್ಮಭೂಷಣ ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಟಿವಿ9ಗೆ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಪ್ರತಿಕ್ರಿಯಿಸಿದರು.
ಕನ್ನಡ ಭಾಷೆ, ಕನ್ನಡ ಅಸ್ಮಿತೆಯ ಬಗ್ಗೆ ಗೌರವ ಹಾಗೂ ಪ್ರೀತಿಯ ಭಾವನೆ ಇಟ್ಟುಕೊಂಡು ಅದನ್ನು ಬೆಳೆಸಿ. ಕನ್ನಡವನ್ನು ಗಟ್ಟಿಗೊಳಿಸಿದಷ್ಟು ಒಳ್ಳೇದಾಗುತ್ತೆ ಅಂತಾ ಅಂದುಕೊಂಡಿದ್ದೇನೆ ಎಂದು ಕಂಬಾರರು ಹೇಳಿದರು.
ಜೊತೆಗೆ, ನಮ್ಮ ಮೋಕ್ಷ ನಮ್ಮ ಭಾಷೆಯಲ್ಲೇ ಇದೆ ಅನ್ನೋದನ್ನ ಯುವಕರು ತಿಳಿದುಕೊಳ್ಳಬೇಕು. ಆಗ ನಮ್ಮ ಭಾಷೆಯೂ ಗಟ್ಟಿಮುಟ್ಟಾಗಿರುತ್ತೆ ಎಂದು ಡಾ.ಚಂದ್ರಶೇಖರ ಕಂಬಾರ ಹೇಳಿದರು.