ಲಂಚ ಆರೋಪ: ಶೃಂಗೇರಿ ಸಬ್ ರಿಜಿಸ್ಟ್ರಾರ್ನಿಂದ ಸಚಿವ ಆರ್.ಅಶೋಕ್ ಪಿಎ ವಿರುದ್ಧ ದೂರು ದಾಖಲು
ಜನವರಿ 24ರಂದು ಸಚಿವ ಆರ್ ಅಶೋಕ್ ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದರು. ಈ ವೇಳೆ ಸಚಿವ ಆರ್ ಅಶೋಕ್ ಪಿಎ ಗಂಗಾಧರ್ ನನ್ನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಚೆಲುವರಾಜ್ ಗಂಭೀರ ಆರೋಪ ಮಾಡಿದ್ದು ಈ ಸಂಬಂಧ ಶೃಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚಿಕ್ಕಮಗಳೂರು: ಕಂದಾಯ ಸಚಿವ ಆರ್.ಅಶೋಕ್ ಪಿಎ ಗಂಗಾಧರ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್, ಗಂಗಾಧರ್ ವಿರುದ್ಧ ದೂರು ದಾಖಲಿಸಿದ್ದಾರೆ.
ಇನ್ನು ದೂರಿನ ಪ್ರತಿಯಲ್ಲಿ ಗಂಗಾಧರ್ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜೊತೆಗೆ ತನಗೂ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಜನವರಿ 24ರಂದು ಸಚಿವ ಆರ್ ಅಶೋಕ್ ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದರು. ಈ ವೇಳೆ ಸಚಿವ ಆರ್ ಅಶೋಕ್ ಪಿಎ ಗಂಗಾಧರ್ ನನ್ನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಚೆಲುವರಾಜ್ ಗಂಭೀರ ಆರೋಪ ಮಾಡಿದ್ದು ಈ ಸಂಬಂಧ ಶೃಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಬ್ಬ ಮಿನಿಸ್ಟರ್ PA ಆಗಿ.. ಲಂಚ ಕೇಳಲು ನಾಚಿಕೆ ಆಗಲ್ವೇನ್ರೀ? -ಸಚಿವ ಅಶೋಕ್ PA ವಿರುದ್ಧ ಅಧಿಕಾರಿಯ ಗಂಭೀರ ಆರೋಪ




