Bengaluru Mysuru Expressway: ವಿರುದ್ಧ ಲೇನ್ನಲ್ಲಿ ಬಂದ ಆಟೊ ರಿಕ್ಷಾ; ತಪ್ಪಿದ ದುರಂತ
ಸಂಚಾರ ನಿಯಮ ಉಲ್ಲಂಘಿಸುವವರ ಚಾಲನಾ ಪರವಾನಗಿ ರದ್ದುಗೊಳಿಸುವಂತೆ ಶಿಫಾರಸು ಮಾಡಲಾಗುವುದು ಎಂದು ಅಲೋಕ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸಂಬಂಧಿತ ಪ್ರದೇಶದ ವ್ಯಾಪ್ತಿಯ ಪೊಲೀಸರು ಇಂತಹ ನಿಯಮ ಉಲ್ಲಂಘನೆಗಳನ್ನು ನಿಗ್ರಹಿಸಲು ಮತ್ತು ಅಪಘಾತಗಳನ್ನು ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕುಮಾರ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ (Bengaluru Mysuru Expressway) ಹಲವಾರು ಅಪಘಾತಗಳು ಸಂಭವಿಸುತ್ತಿದ್ದು, ಈ ಕುರಿತು ವ್ಯಾಪಕ ಚರ್ಚೆಯಾಗುತ್ತಿರುವ ಮಧ್ಯೆಯೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಅನೇಕ ಪ್ರಕರಣಗಳೂ ವರದಿಯಾಗುತ್ತಿವೆ. ಎಕ್ಸ್ಪ್ರೆಸ್ ವೇ ಹೆದ್ದಾರಿಯ ತಪ್ಪು ಲೇನ್ನಲ್ಲಿ ಬಂದ ಆಟೊ ರಿಕ್ಷಾವೊಂದಕ್ಕೆ ಡಿಕ್ಕಿಹೊಡೆಯುವುದರಿಂದ ವೇಗವಾಗಿ ಸಾಗುತ್ತಿದ್ದ ಕಾರು ಸ್ವಲ್ಪದರಲ್ಲೇ ಬಚಾವಾದ ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಘಟನೆಯ ವೀಡಿಯೊ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದ್ದು, ಅದನ್ನು ಥರ್ಡ್‌ಐ ಎಂಬ ಟ್ವಿಟರ್ ಖಾತೆಯಲ್ಲಿ ಗುರುವಾರ ಹಂಚಿಕೊಳ್ಳಲಾಗಿದೆ.
‘ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ರಾಂಗ್ ಸೈಡ್ ಚಾಲನೆಯ ಮತ್ತೊಂದು ಘಟನೆ’ ಎಂದು ಥರ್ಡ್ಐ ಟ್ವೀಟ್ ಮಾಡಿದೆ. ಈ ಬಾರಿ ಆಟೋ ಅಪಘಾತಕ್ಕೆ ಕಾರಣವಾಗುತ್ತಿತ್ತು. ಈ ವೀಡಿಯೊವನ್ನು ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಹಿಡಿಯಲಾಗಿದೆ ಮತ್ತು ಒಬ್ಬರು ನನಗೆ ಕಳುಹಿಸಿದ್ದಾರೆ. ದುರದೃಷ್ಟವಶಾತ್, ನಂಬರ್ ಪ್ಲೇಟ್ ಅನ್ನು ಓದಲು ಸಾಧ್ಯವಾಗುತ್ತಿಲ್ಲ’ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ. ರಾಮನಗರ ಎಸ್ಪಿ, ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಟ್ಯಾಗ್ ಮಾಡಲಾಗಿದೆ.
Another incident of wrong side driving at Bengaluru-Mysuru expressway. This time an auto almost caused a crash. Video caught on dashcam and sent to me by one of the followers. @alokkumar6994 @spramanagara Unfortunately, number plate cannot be read pic.twitter.com/9F1wxlxvop
— ThirdEye (@3rdEyeDude) July 13, 2023
ವೀಡಿಯೊ ಇತ್ತೀಚಿನದು ಎನ್ನಲಾಗಿದ್ದು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗಿದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಸಂಚಾರ ನಿಯಮ ಉಲ್ಲಂಘಿಸುವವರ ಚಾಲನಾ ಪರವಾನಗಿ ರದ್ದುಗೊಳಿಸುವಂತೆ ಶಿಫಾರಸು ಮಾಡಲಾಗುವುದು ಎಂದು ಅಲೋಕ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸಂಬಂಧಿತ ಪ್ರದೇಶದ ವ್ಯಾಪ್ತಿಯ ಪೊಲೀಸರು ಇಂತಹ ನಿಯಮ ಉಲ್ಲಂಘನೆಗಳನ್ನು ನಿಗ್ರಹಿಸಲು ಮತ್ತು ಅಪಘಾತಗಳನ್ನು ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕುಮಾರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇಯಲ್ಲಿ ತಪ್ಪಿತು ಭಾರೀ ದುರಂತ; ಸಿಸಿಟಿವಿಯಲ್ಲಿ ಸೆರೆಯಾಯ್ತು ಅಪಘಾತದ ದೃಶ್ಯ
ಇಂತಹ ನಿಯಮ ಉಲ್ಲಂಘನೆಯು ಇತರ ರಸ್ತೆ ಬಳಕೆದಾರರಿಗೂ ಅಪಾಯವಾಗಿದೆ. ಉಲ್ಲಂಘನೆಗಳನ್ನು ರೆಕಾರ್ಡ್ ಮಾಡುವಾಗ ದಯವಿಟ್ಟು ನಂಬರ್ ಪ್ಲೇಟ್ ಅನ್ನು ಸಹ ಸೆರೆಹಿಡಿಯಿರಿ. ಇಂಥವರ ಪಚಾಲನಾ ರವಾನಗಿ ರದ್ದುಗೊಳಿಸಲು ನಾವು ಶಿಫಾರಸು ಮಾಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.
ಸರ್ಕಾರದ ಅಂದಾಜಿನ ಪ್ರಕಾರ, ಎಕ್ಸ್‌ಪ್ರೆಸ್‌ವೇಯಲ್ಲಿ ಜೂನ್ 30 ರವರೆಗೆ 100 ಜನರು ಸಾವನ್ನಪ್ಪಿದ್ದಾರೆ ಮತ್ತು 335 ಜನರು ಗಾಯಗೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ, ರಾಮನಗರ ಪೊಲೀಸರು ಮೂರು ಮೊಬೈಲ್ ಸ್ಪೀಡ್ ರಾಡಾರ್‌ಗಳನ್ನು ನಿಯೋಜಿಸಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಆರಂಭಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Thu, 13 July 23