ಮೈಸೂರು: ಶ್ರೀರಾಮಮಂದಿರಕ್ಕೆ ಸಂಗ್ರಹಿಸಿರುವ ದೇಣಿಗೆ ಸಂಗ್ರಹದ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ. ಭಕ್ತಿ, ಗೌರವದಿಂದ ಹಲವರು ದೇಣಿಗೆಯನ್ನು ನೀಡಿರುತ್ತಾರೆ. ದೇಣಿಗೆ ಹಣ ಅವ್ಯವಹಾರದ ಬಗ್ಗೆ ಆರೋಪ ಕೇಳಿಬರುತ್ತಿದೆ. ಹೀಗಾಗಿ ರಾಮಮಂದಿರ ಟ್ರಸ್ಟ್ ದೇಣಿಗೆ ಹಣದ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಸಾಮಾನ್ಯ ಜನರಿಂದ ಹಿಡಿದು ದೊಡ್ಡ ವ್ಯಾಪಾರಸ್ಥರವರಗೆ ದುಡಿಮೆಯ ಹಣವನ್ನು ನೀಡಿದ್ದಾರೆ. ದೇಣಿಗೆ ಹಣ ಅವ್ಯವಹಾರವಾಗಿರುವುದು ನಿಜವಾಗಿದ್ದರೆ, ರಾಮನ ಭಕ್ತರೆಂದು ಹೇಳಿಕೊಂಡು ದೇಣಿಗೆ ಸಂಗ್ರಹ ಮಾಡಿರುವವರು ರಾಮನ ವಿರೋಧಿಗಳಾಗಿರುತ್ತಾರೆ. ಈ ಕಾರಣಗಳಿಂದ ಲೆಕ್ಕ ಪತ್ರ ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ.
ಭರದಿಂದ ಸಾಗುತ್ತಿದೆ ಕೆಲಸ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ರಾಮಮಂದಿರದ ಅಡಿಪಾಯ ನಿರ್ಮಿಸುವ ಕೆಲಸವನ್ನು ರೋಲರ್ ಕಂಪಾಕ್ಟ್ ಕಾಂಕ್ರೀಟ್ ತಂತ್ರ ಬಳಸಿ ಮಾಡಲಾಗುವುದು. ಜೊತೆಗೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಎಲ್ಲ ಕೆಲಸಗಾರರ ಸುರಕ್ಷತೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗಿದೆ.
ಇದನ್ನೂ ಓದಿ
Ram Mandir: ರಾಮಮಂದಿರಕ್ಕೆ ದೇಣಿಗೆ; ಬೆಳ್ಳಿ ಇಟ್ಟಿಗೆ ಬೇಡ, ಲಾಕರ್ನಲ್ಲಿ ಇಡಲು ಜಾಗವಿಲ್ಲ ಎಂದ ಟ್ರಸ್ಟ್
‘ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ..ಯಾವುದೇ ಅಡೆತಡೆಗಳೂ ಇಲ್ಲ’
(Badagalapura Nagendra urged donations collected for the construction of Srirama Mandir be disclosed)