‘ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ..ಯಾವುದೇ ಅಡೆತಡೆಗಳೂ ಇಲ್ಲ’

‘ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ..ಯಾವುದೇ ಅಡೆತಡೆಗಳೂ ಇಲ್ಲ’
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ

ಆರ್​ಸಿಸಿಯ ಒಂದು ಪದರ ಹಾಕಲು 4-5ದಿನ ತೆಗೆದುಕೊಳ್ಳುತ್ತದೆ. ಸದ್ಯ ಸ್ಥಳದಲ್ಲಿ ಹಲವು ಇಂಜಿನಿಯರ್​​ಗಳು, ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರೆಲ್ಲ ಸುರಕ್ಷಿತವಾಗಿದ್ದಾರೆ ಎಂದು ಟ್ರಸ್ಟ್​ ತಿಳಿಸಿದೆ.

Lakshmi Hegde

|

Jun 01, 2021 | 8:58 AM

ದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಮಾಹಿತಿ ನೀಡಿದೆ. ರಾಮಮಂದಿರದ ಅಡಿಪಾಯ ನಿರ್ಮಿಸುವ ಕೆಲಸವನ್ನು ರೋಲರ್​ ಕಂಪಾಕ್ಟ್​ ಕಾಂಕ್ರೀಟ್​ ತಂತ್ರ ಬಳಸಿ ಮಾಡಲಾಗುವುದು. ಹಾಗೇ, ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಎಲ್ಲ ಕೆಲಸಗಾರರ ಸುರಕ್ಷತೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದೂ ಟ್ರಸ್ಟ್​ ತಿಳಿಸಿದೆ.

ರಾಮಮಂದಿರ ನಿರ್ಮಾಣಕ್ಕೆ ಯಾವುದೇ ವಿಘ್ನಗಳೂ ಇಲ್ಲ. ಅಡೆತಡೆಯಿಲ್ಲದೆ ಕೆಲಸ ಮುಂದುವರಿದಿದೆ. ಈಗಾಗೇ ಸುಮಾರು 1,20,000 ಘನ ಮೀಟರ್​ ವಿಸ್ತಾರದ ಪ್ರದೇಶದಲ್ಲಿ ಪುಡಿಕಲ್ಲುಗಳನ್ನು ತೆಗೆದು, ಸ್ವಚ್ಛಗೊಳಿಸಲಾಗಿದೆ. ಆರ್​ಸಿಸಿಯ ಒಂದು ಪದರ ಹಾಕಲು 4-5ದಿನ ತೆಗೆದುಕೊಳ್ಳುತ್ತದೆ. ಸದ್ಯ ಸ್ಥಳದಲ್ಲಿ ಹಲವು ಇಂಜಿನಿಯರ್​​ಗಳು, ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರೆಲ್ಲ ಸುರಕ್ಷಿತವಾಗಿದ್ದಾರೆ. ಆರೋಗ್ಯವಾಗಿಯೂ ಇದ್ದಾರೆ. ಅಕ್ಟೋಬರ್​ ಒಳಗೆ ಆರ್​ಸಿಸಿ ಹಾಕುವ ಕೆಲಸ ಮುಗಿಯುವ ಭರವಸೆ ಇದೆ ಎಂದೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ವೀಟ್ ಮಾಡಿದೆ.

ರೋಲರ್​ ಕಾಂಪಾಕ್ಟ್​ ಮೂಲಕ ರಾಮಮಂದಿರಕ್ಕೆ ಅಡಿಪಾಯ ಹಾಕುವುದನ್ನು ತಜ್ಞರೊಂದಿಗೆ ಚರ್ಚಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗಿದೆ. ಹೀಗೆ ಮಾಡಿದರೆ 1,20,000 ಚದರ ಅಡಿ ವಿಸ್ತೀರ್ಣಕ್ಕೆ, 4 ಲೇಯರ್​​ಗಳಷ್ಟು ಅಡಿಪಾಯ ಹಾಕಲು 40-45 ದಿನಗಳು ಬೇಕು ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ವೀಟ್ ಮಾಡಿದೆ.

Follow us on

Related Stories

Most Read Stories

Click on your DTH Provider to Add TV9 Kannada