Bagalkot Accident: ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಟ್ರ್ಯಾಕ್ಟರ್ ಪಲ್ಟಿ, ಇಬ್ಬರ ಸಾವು

Bagalkot Accident: ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಟ್ರ್ಯಾಕ್ಟರ್ ಪಲ್ಟಿ, ಇಬ್ಬರ ಸಾವು
ಪಲ್ಟಿಯಾದ ಟ್ರ್ಯಾಕ್ಟರ್

Tractor accident: ಟ್ರ್ಯಾಕ್ಟರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಕ್ಕದ ಹೊಲದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದಿತ್ತು. ಹೊಲದಲ್ಲಿ ಟ್ರ್ಯಾಕ್ಟರ್ ಬಿದ್ದ ಪರಿಣಾಮ ತಡರಾತ್ರಿ ನಡೆದ ಘಟನೆ ಬೆಳಗ್ಗೆ ಬೆಳಕಿಗೆ ಬಂದಿದೆ.

sandhya thejappa

| Edited By: sadhu srinath

Feb 22, 2021 | 3:25 PM


ಬಾಗಲಕೋಟೆ: ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತುಂಬ ಕ್ರಾಸ್ ಬಳಿ ಸಂಭವಿಸಿದೆ. ಜಿಲ್ಲೆಯ ಸಿಂಧನೂರು ಪಟ್ಟಣದ ಶಿವು ಕಿಡದೂರ (30) ಹಾಗೂ ಪ್ರಭುಸ್ವಾಮಿ ಹೊಸಮಠ (40) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಟ್ರ್ಯಾಕ್ಟರ್​ ವಿದ್ಯುತ್ ಕಂಬ ತುಂಬಿಸಿಕೊಂಡು ಸಿಂಧನೂರನಿಂದ ಬೀಳಗಿ ಕಡೆಗೆ ಹೊರಟಿತ್ತು. ಟ್ರ್ಯಾಕ್ಟರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಕ್ಕದ ಹೊಲದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದಿತ್ತು. ಹೊಲದಲ್ಲಿ ಟ್ರ್ಯಾಕ್ಟರ್ ಬಿದ್ದ ಪರಿಣಾಮ ತಡರಾತ್ರಿ ನಡೆದ ಘಟನೆ ಇಂದು (ಫೆಬ್ರವರಿ 22) ಬೆಳಗ್ಗೆ ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣ ಸಂಬಂಧ ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಟಂಟಂ ಡಿಕ್ಕಿ ವಿದ್ಯಾರ್ಥಿ ಕಾಲಿಗೆ ಗಂಭೀರ ಗಾಯ
ಗದಗ ನಗರದ ಧೋಬಿ ಘಾಟ್ ಬಳಿ ಟಂಟಂ ಡಿಕ್ಕಿ ಹೊಡೆದು ವಿದ್ಯಾರ್ಥಿಗೆ ಗಂಭೀರ ಗಾಯವಾಗಿದೆ. ಗಾಯಾಳು 4ನೇ ತರಗತಿ ಪಾರ್ಶ್ವನಾಥ್‌ ಎಂದು ತಿಳಿದುಬಂದಿದೆ. ಪಾರ್ಶ್ವನಾಥ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯ ಓದುತ್ತಿದ್ದ.  1 ರಿಂದ 5ನೇ ತರಗತಿಗಳ ಆರಂಭಕ್ಕೆ ಅನುಮತಿ ನೀಡದಿದ್ದರೂ ಶಾಲೆ ಆರಂಭ ಮಾಡಿದ್ದಾರೆಂಬ ಆರೋಪಕ್ಕೆ ಖಾಸಗಿ ಶಾಲೆ ಗುರಿಯಾಗಿದೆ.

ಟ್ರ್ಯಾಕ್ಟರ್ ಪಲ್ಟಿಯಾದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು

ಇದನ್ನೂ ಓದಿ:

Hassan Accident | ಅವೈಜ್ಞಾನಿಕ ಹಂಪ್: ಟಾಟಾ ಸುಮೋಗೆ ಕ್ವಾಲಿಸ್ ಡಿಕ್ಕಿ, ಐವರ ಸಾವು, 11 ಮಂದಿಗೆ ಗಂಭೀರ ಗಾಯ

Road Accident: ಪೆಟ್ರೋಲ್ ಹಾಕಿಸಿ ತೆರಳುವಾಗ ಸಚಿವ ಕೋಟ ಶ್ರೀನಿವಾಸ್​ ಪೂಜಾರಿ ಕಾರ್​ಗೆ KSRTC ಬಸ್​ ಡಿಕ್ಕಿ

 

Follow us on

Related Stories

Most Read Stories

Click on your DTH Provider to Add TV9 Kannada