ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಪತ್ನಿ ಸ್ಥಳದಲ್ಲೇ ದುರ್ಮರಣ

ಬಾಗಲಕೋಟೆ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಲಾರಿ ಮತ್ತು ಬೈಕ್​ ಆಕ್ಸಿಡೆಂಟ್​ ಆಗಿದ್ದು, ಬೈಕ್​ನಲ್ಲಿ ಹೊರಟಿದ್ದ ದಂಪತಿ ಪೈಕಿ ಪತ್ನಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಪತ್ನಿ ಸ್ಥಳದಲ್ಲೇ ದುರ್ಮರಣ
ಬಾಗಲಕೋಟೆ ಬೈಕ್ ಅಪಘಾತ
Updated By: ganapathi bhat

Updated on: Apr 07, 2022 | 5:38 PM

ಬಾಗಲಕೋಟೆ: ಜಿಲ್ಲೆಯ ಸಂಗಮ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಬೈಕ್​ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಬಾಗಲಕೋಟೆ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಮೂಲತಃ ಆಂಧ್ರ ಪ್ರದೇಶದವರಾದ ಲತಾ ಮತ್ತು ಸೂರ್ಯಬಾಬು ಬೈಕ್​ನಲ್ಲಿ ಹುನಗುಂದ ಪಟ್ಟಕ್ಕೆ ಹೊರಟ್ಟಿದ್ದ ವೇಳೆ ಈ ಘಟನೆ ನಡೆದಿದ್ದು, ಸೂರ್ಯಬಾಬು ಗಂಭೀರವಾಗಿ ಗಾಯಗೊಂಡಿದ್ದಾನೆ ಮತ್ತು ಆತನ ಪತ್ನಿ ಲತಾ(35) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಸೂರ್ಯಬಾಬುವನ್ನು ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗದೆ.

ಲಾರಿ ಹರಿದು ಬೈಕ್‌ನಲ್ಲಿದ್ದ ಯುವತಿ ಸ್ಥಳದಲ್ಲೇ ದುರ್ಮರಣ, ಇಬ್ಬರು ಗಂಭೀರ

Published On - 12:47 pm, Mon, 7 December 20