ಮೃತ ಎಂದು ಶವಾಗಾರಕ್ಕೆ ಹೋಗಿ ಬದುಕಿ ಬಂದಿದ್ದ ಬಾಗಲಕೋಟೆ ಯುವಕ ಸಾವು
ಯುವಕನೋರ್ವ ಮೃತಪಟ್ಟಿದ್ದಾನೆಂದು ಭಾವಿಸಿ ಪೋಸ್ಟ್‌ಮಾರ್ಟಮ್‌ಗೆ ವೈದ್ಯರು ಸಿದ್ಧತೆ ಮಾಡಿಕೊಂಡಿದ್ದು ಯುವಕ ಬದುಕಿರುವುದು ಅರಿವಿಗೆ ಬಂದ ಮೇಲೆ ಆತನಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಕಳಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಮಾರ್ಚ್ 7ರಂದು ಮಧ್ಯರಾತ್ರಿ 12 ಗಂಟೆಗೆ ಯುವಕ ಮೃತಪಟ್ಟಿದ್ದಾನೆ.
ಬಾಗಲಕೋಟೆ: ಕೆಲ ದಿನಗಳ ಹಿಂದೆ ಜೀವ ಇರುವಾಗಲೇ ಯುವಕನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದ ಮಹಾ ಎಡವಟ್ಟೊಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಯ ವೈದ್ಯರಿಂದ ನಡೆದಿತ್ತು. ಯುವಕನೋರ್ವ ಮೃತಪಟ್ಟಿದ್ದಾನೆಂದು ಭಾವಿಸಿ ಪೋಸ್ಟ್‌ಮಾರ್ಟಮ್‌ಗೆ ವೈದ್ಯರು ಸಿದ್ಧತೆ ಮಾಡಿಕೊಂಡಿದ್ದು ಯುವಕ ಬದುಕಿರುವುದು ಅರಿವಿಗೆ ಬಂದ ಮೇಲೆ ಆತನಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಕಳಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಮಾರ್ಚ್ 7ರಂದು ಮಧ್ಯರಾತ್ರಿ 12 ಗಂಟೆಗೆ ಯುವಕ ಮೃತಪಟ್ಟಿದ್ದಾನೆ. ಶಂಕರ್ ಗೊಂಬಿ(27) ಮೃತ ಯುವಕ.
ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರದ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಯುವಕನನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಮಾರ್ಚ್ 7 ರಂದು ಮಧ್ಯರಾತ್ರಿ 12 ಗಂಟೆಗೆ ಶಂಕರ್ ಮೃತಪಟ್ಟಿದ್ದಾನೆ. ಶಂಕರ್ ಗೊಂಬಿಗೆ ಫೆಬ್ರುವರಿ 27 ರಂದು ಅಪಘಾತವಾಗಿತ್ತು. ತಾವು ಹೊರಟಿದ್ದ ಬೈಕ್ಗೆ ಕಾರು ಡಿಕ್ಕಿಯಾಗಿ ತಲೆಗೆ ಗಂಭೀರ ಗಾಯವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬದುಕುವ ಸಾಧ್ಯತೆ ಕಡಿಮೆ ಅಂತ ವಾಪಸ್ ಕಳಿಸಲಾಗಿತ್ತು.
ಮಾರ್ಚ್ 1 ರಂದು ವಾಪಸ್ ಬರುವ ವೇಳೆ ಯುವಕ ಮೃತಪಟ್ಟಿದ್ದಾನೆ ಎಂದು ಸುದ್ದಿಯಾಗಿತ್ತು. ನಂತರ ಮಹಾಲಿಂಗಪುರ ಸರಕಾರಿ ಆಸ್ಪತ್ರೆಯಲ್ಲಿ ಶವಾಗಾರಕ್ಕೆ ಸಾಗಿಸಲಾಗಿತ್ತು. ಜಮಖಂಡಿ ತಾಲೂಕು ಆರೋಗ್ಯಾಧಿಕಾರಿ ಜಿಎಸ್ ಗಲಗಲಿ ಪಿಎಮ್ ಕೋಣೆಗೆ ಹೋದಾಗ ಅಚ್ಚರಿ ನಡೆದಿತ್ತು. ಶಂಕರ್ ಗೊಂಬಿ ಉಸಿರಾಡುತ್ತಿರುವುದು ಕಂಡು ಬಂದಿತ್ತು. ದೇಹದಲ್ಲಿ ಚಲನವಲನ ಗಮನಿಸಿ ಬದುಕಿರೋದಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಷ್ಟು ದಿನದ ಸಾವು-ಬದುಕಿನ ಹೋರಾಟದ ನಡುವೆ ಮಾರ್ಚ್ 07ಕ್ಕೆ ಶಂಕರ್ ತಮ್ಮ ಹೋರಾಟವನ್ನು ನಿಲ್ಲಿಸಿದ್ದಾರೆ. ಜಯ ಸಿಗುವ ಮುನ್ನವೇ ಎಲ್ಲರಿಂದ ದೂರಾಗಿದ್ದಾರೆ.
ಇದನ್ನೂ ಓದಿ: ಸಾವಿಗೂ ಮುನ್ನ ಪೋಸ್ಟ್‌ಮಾರ್ಟಮ್‌ಗೆ ಸಿದ್ಧತೆ.. ಗೆದ್ದು ಬಾ ಗೆಳೆಯ ಪೋಸ್ಟ್ಗಳನ್ನು ಡಿಲೀಟ್ ಮಾಡಿದ ಸ್ನೇಹಿತರು
Published On - 9:00 am, Wed, 10 March 21