ಬಾಗಲಕೋಟೆಯಲ್ಲಿ ದಾಖಲೆಯ 11.50 ಲಕ್ಷ ರೂ. ಗೆ ಎತ್ತು ಮಾರಾಟ

| Updated By: sandhya thejappa

Updated on: Jun 08, 2022 | 10:45 AM

ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ರೈತರೊಬ್ಬರು ತಾವು ಸಾಕಿದ ಎತ್ತನ್ನು ದಾಖಲೆಯ ಬರೋಬ್ಬರಿ 11.50 ಲಕ್ಷ ರೂ. ಗೆ ಮಾರಾಟ ಮಾಡಿದ್ದಾರೆ. 11.50 ಲಕ್ಷ ರೂ.ಗೆ ಮಾರಟವಾಗಿರುವ ಎತ್ತು ತೆರೆದ ಬಂಡಿ ಎತ್ತಿನ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದೆ.

ಬಾಗಲಕೋಟೆಯಲ್ಲಿ ದಾಖಲೆಯ 11.50 ಲಕ್ಷ ರೂ. ಗೆ ಎತ್ತು ಮಾರಾಟ
11.50 ಲಕ್ಷ ರೂ. ಗೆ ಮಾರಾಟವಾದ ಎತ್ತು
Follow us on

ಬಾಗಲಕೋಟೆ: ಸಾಕಿ ಬೆಳೆಸಿದ ಎತ್ತನ್ನು (Ox) ಹೆಚ್ಚೆಂದರೆ 50 ಸಾವಿರ ಅಥವಾ 1 ಲಕ್ಷ ರೂಪಾಗಿಗೆ ಮಾರಾಟ (Sale) ಮಾಡಬಹುದು. ಆದರೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ರೈತರೊಬ್ಬರು ತಾವು ಸಾಕಿದ ಎತ್ತನ್ನು ದಾಖಲೆಯ ಬರೋಬ್ಬರಿ 11.50 ಲಕ್ಷ ರೂ. ಗೆ ಮಾರಾಟ ಮಾಡಿದ್ದಾರೆ. 11.50 ಲಕ್ಷ ರೂ.ಗೆ ಮಾರಟವಾಗಿರುವ ಎತ್ತು ತೆರೆದ ಬಂಡಿ ಎತ್ತಿನ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದೆ. ರೈತ ಕುಟುಂಬ ಆರು ವರ್ಷಗಳ ಹಿಂದೆ 45 ಸಾವಿರ ರೂಪಾಯಿಗೆ ಈ ಎತ್ತನ್ನು ಖರೀದಿ ಮಾಡಿದ್ದರು.

ಸೂರ್ಯ ಹೆಸರಿನ ಕಿಲಾರಿ ಎತ್ತು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಚಿಮ್ಮಡ ಗ್ರಾಮದ ಶಿವಲಿಂಗಪ್ಪ ಹಾಗೂ ಮಾಯಪ್ಪ ಸಹೋದರರು ಎತ್ತನ್ನು ಜೋಪಾನವಾಗಿ ಸಾಕಿದ್ದರು. ಇನ್ನು ಎತ್ತಿಗೆ 9 ವರ್ಷ. ರೈತ ಸಹೋದರರು ಆರು ವರ್ಷಗಳ ಹಿಂದೆ 45 ಸಾವಿರ ರೂಪಾಯಿಗೆ ವಿಜಯಪುರ ಜಿಲ್ಲೆಯ ಹೊರ್ತಿ ಜಾತ್ರೆಯಲ್ಲಿ ಮೂರು ವರ್ಷದ ಸೂರ್ಯನನ್ನು ಖರೀದಿಸಿ ತಂದಿದ್ದರು. ಇದೀಗ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಇಟ್ನಳ್ಳಿ ಗ್ರಾಮದ ಸದಾಶಿವ ಡಂಗೆ ಮಾರಾಟ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಹೊರವಲಯಗಳಲ್ಲಿ ಪುಂಡರ ವ್ಹೀಲಿಂಗ್ ಸ್ಟಂಟ್ ಅವ್ಯಾಹತವಾಗಿ ಮುಂದುವರಿದಿದೆ

ಇದನ್ನೂ ಓದಿ
ಬೆಂಗಳೂರಿನ ಹೊರವಲಯಗಳಲ್ಲಿ ಪುಂಡರ ವ್ಹೀಲಿಂಗ್ ಸ್ಟಂಟ್ ಅವ್ಯಾಹತವಾಗಿ ಮುಂದುವರಿದಿದೆ
Gallery Collapse: ಕೇರಳ: ಫುಟ್​ಬಾಲ್ ಪಂದ್ಯದ ವೇಳೆ ದುರಂತ, ಪ್ರೇಕ್ಷಕರ ಗ್ಯಾಲರಿ ಕುಸಿದು ಹಲವರಿಗೆ ಗಾಯ
ಮುಂದಿನ ವಿಧಾನಸಭೆ ಚುನಾವಣೆಗೆ ವಿಜಯೇಂದ್ರ ಸ್ಪರ್ಧಿಸ್ತಾರೆ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
Cancer Drug Trial: ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಚಲನ: ಪ್ರಾಯೋಗಿಕ ಔಷಧಿಯಿಂದಲೇ ಕ್ಯಾನ್ಸರ್ ಮಾಯ

ಸೂರ್ಯ ಕಳೆದ ಮೂರು ವರ್ಷಗಳಲ್ಲಿ ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ತೆರೆದ ಬಂಡಿ ಜಗ್ಗುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು. ಸ್ಪರ್ಧೆಗೆ ಭಾಗಿಯಾದರೆ ಸೂರ್ಯನಿಗೆ ಬಹುಮಾನ ಕಟ್ಟಿಟ್ಟ ಬುತ್ತಿ. ಮೂರು ವರ್ಷಗಳಲ್ಲಿ ಅಂದಾಜು 8 ಲಕ್ಷ ರೂ. ಬೈಕ್, ಚಿನ್ನ, ಬೆಳ್ಳಿ, ನಗದು ಹಣ ಗೆದ್ದು ತಂದಿದೆ. ನಿನ್ನೆ (ಜೂನ್ 7) ಸಂಜೆ ಚಿಮ್ಮಡ ಗ್ರಾಮದಲ್ಲಿ ಗ್ರಾಮಸ್ಥರು ಅದ್ದೂರಿ ಮೆರವಣಿಗೆ ಮಾಡಿ ಪ್ರೀತಿಯ ಸೂರ್ಯನನ್ನು‌ ಬೀಳ್ಕೊಟ್ಟಿದ್ದಾರೆ. ಗ್ರಾಮದಲ್ಲಿ ವಾದ್ಯ ವೈಭವಗಳೊಂದಿಗೆ ಎತ್ತನ್ನು ಮೆರವಣಿಗೆ ಮಾಡಿದ್ದಾರೆ.

ಈಗ ಎತ್ತು ಖರೀದಿ ಮಾಡಿರುವ ಸದಾಶಿವ ಅವರ ಬಳಿ 9 ಲಕ್ಷದ ಮತ್ತೊಂದು ಎತ್ತು ಇದೆ. ಸೂರ್ಯ ಹಾಗೂ ತಮ್ಮ ಕಿಲಾರಿ ಎತ್ತು ಜೋಡಿಯಾಗಿ ಸ್ಪರ್ಧೆಗೆ ಬಿಡುವ ಹುಮ್ಮಸ್ಸಿನಲ್ಲಿದ್ದಾರೆ. ಈ ಮೊದಲು ಸಹ ಈ ಜೋಡಿ ಅನೇಕ ಸ್ಪರ್ಧೆಗಳಲ್ಲಿ ಜೋಡೆತ್ತಾಗಿ ಗೆದ್ದು ಬೀಗಿವೆಯಂತೆ. ಹೀಗಾಗಿಯೇ ಸದಾಶಿವ ಅವರು ಸೂರ್ಯನನ್ನು 11.50 ಲಕ್ಷ ರೂ. ಕೊಟ್ಟು ಖರೀದಿ ಮಾಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:39 am, Wed, 8 June 22