Gallery Collapse: ಕೇರಳ: ಫುಟ್ಬಾಲ್ ಪಂದ್ಯದ ವೇಳೆ ದುರಂತ, ಪ್ರೇಕ್ಷಕರ ಗ್ಯಾಲರಿ ಕುಸಿದು ಹಲವರಿಗೆ ಗಾಯ
Gallery Collapses :ಕೇರಳದ ಮಲಪ್ಪುರಂನ ಪೂಕೊಟ್ಟುಂಪಾದಂನಲ್ಲಿ ಫುಟ್ಬಾಲ್ ಪಂದ್ಯ ವೀಕ್ಷಣೆ ವೇಳೆ ಭೀಕರ ದುರಂತವೊಂದು ಸಂಭವಿಸಿದ್ದು, ಪ್ರೇಕ್ಷಕರ ಗ್ಯಾಲರಿ ಕುಸಿದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಕೊಚ್ಚಿ: ಕೇರಳದ ಮಲಪ್ಪುರಂನ ಪೂಕೊಟ್ಟುಂಪಾದಂನಲ್ಲಿ ಫುಟ್ಬಾಲ್ ಪಂದ್ಯ ವೀಕ್ಷಣೆ ವೇಳೆ ಭೀಕರ ದುರಂತವೊಂದು ಸಂಭವಿಸಿದ್ದು, ಪ್ರೇಕ್ಷಕರ ಗ್ಯಾಲರಿ ಕುಸಿದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಮಲಪ್ಪುರಂನ ಪೂಕೊಟ್ಟುಂಪಾದಂನಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೀಕ್ಷಣೆಗೆ ತಾತ್ಕಾಲಿಕ ಪ್ರೇಕ್ಷಕರು ಕುಳಿತುಕೊಳ್ಳಲು ನಿರ್ಮಿಸಿದ್ದ ಗ್ಯಾಲರಿ ಕುಸಿದು ಬಿದ್ದ ಪರಿಣಾಮ ಹಲವು ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಫುಟ್ಬಾಲ್ ಪಂದ್ಯದ ಮಧ್ಯಂತರದಲ್ಲಿ ಗ್ಯಾಲರಿ ಕುಸಿತವಾಗಿತ್ತು. ಎರಡು ಸ್ಥಳೀಯ ತಂಡಗಳ ನಡುವೆ ಫುಟ್ಬಾಲ್ ಸ್ಪರ್ಧೆ ಏರ್ಪಟ್ಟಿತ್ತು. ಗಾಯಗೊಂಡವರನ್ನು ಶೀಘ್ರವೇ ನೀಲಂಬೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯು ಸೋಮವಾರ ರಾತ್ರಿ 9.30ರ ವೇಳೆ ಸಂಭವಿಸಿದೆ.
ಮಾರ್ಚ್ ತಿಂಗಳಲ್ಲಿ ಮತ್ತೊಂದು ಘಟನೆ ಫುಟ್ ಬಾಲ್ ಪಂದ್ಯಾವಳಿಯ ವೇಳೆ ತಾತ್ಕಾಲಿಕ ವಾಗಿ ನಿರ್ಮಿಸಲಾಗಿದ್ದ ಪ್ರೇಕ್ಷಕರ ಗ್ಯಾಲರಿ ಕುಸಿದು ಬಿದ್ದು ಕನಿಷ್ಠ 200 ಮಂದಿ ಗಾಯಗೊಂಡ ಘಟನೆ ಕೇರಳದ ಪೂನ್ ಗೋಡ್ ಎಂಬಲ್ಲಿ ಮಾರ್ಚ್ ತಿಂಗಳಲ್ಲಿ ಸಂಭವಿಸಿತ್ತು. 5 ಮಂದಿಯ ಸ್ಥಿತಿ ಗಂಭೀರವಾಗಿತ್ತು.
ಜಿದ್ದಾಜಿದ್ದಿನ ಪಂದ್ಯಾವಳಿಯ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರಿಂದ ಭಾರ ತಾಳಲಾರದೇ ಏಕಾಏಕಿ ಗ್ಯಾಲರಿ ಕುಸಿದು ಬಿದ್ದಿತ್ತು.
ಸ್ಥಳೀಯ ಯುವಕರ ಸಂಘಟನೆ ಪಂದ್ಯಾವಳಿಯನ್ನು ಆಯೋಜಿಸಿದ್ದು, ನೀರಿಕ್ಷೆಗೂ ಮೀರಿ ಜನ ಸೇರಿದ್ದರು ಎಂದು ಹೇಳಲಾಗಿತ್ತು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:38 am, Wed, 8 June 22