ಮುಂದಿನ ವಿಧಾನಸಭೆ ಚುನಾವಣೆಗೆ ವಿಜಯೇಂದ್ರ ಸ್ಪರ್ಧಿಸ್ತಾರೆ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ

ಮುಂದಿನ ವಿಧಾನಸಭೆ ಚುನಾವಣೆಗೆ ವಿಜಯೇಂದ್ರ ಸ್ಪರ್ಧಿಸ್ತಾರೆ. ಎಲ್ಲಿ ನಿಂತರೂ ವಿಜಯೇಂದ್ರ ಗೆದ್ದು‌ ಬರ್ತಾರೆ. ವಿಜಯಪುರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಗೆ ವಿಜಯೇಂದ್ರ ಸ್ಪರ್ಧಿಸ್ತಾರೆ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jun 08, 2022 | 10:36 AM

ವಿಜಯಪುರ: ಮುಂದಿನ ವಿಧಾನಸಭೆ ಚುನಾವಣೆಗೆ ವಿಜಯೇಂದ್ರ ಸ್ಪರ್ಧಿಸುತ್ತಾರೆ. ಎಲ್ಲಿ ನಿಂತರೂ ವಿಜಯೇಂದ್ರ ಗೆದ್ದು‌ ಬರ್ತಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಗರದಲ್ಲಿ ಹೇಳಿಕೆ ನೀಡಿದ್ದಾರೆ. ಯುವಕನಿದ್ದು ಕೆಲಸ ಮಾಡುತ್ತಿದ್ದಾನೆ. ಯುವಕರಲ್ಲಿ ದೊಡ್ಡ ವಿಶ್ವಾಸ ಅಭಿಮಾನ ಇದೆ. ಬರೋ ದಿನಗಳಲ್ಲಿ ಜನರ ನಿಮ್ಮೆಲ್ಲರ ಆಶೀರ್ವಾದದಿಂದ ಒಳ್ಳೆ ಅವಕಾಶ ಸಿಗುತ್ತದೆ. ಭವಿಷ್ಯದಲ್ಲಿ ಬೆಳಿತಾನೆ ಎಂಬ ವಿಶ್ವಾಸವಿದೆ. ಎಂದು ಹೇಳಿದರು. ವಾಯವ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಪರಿಷತ್ ಚುನಾವಣಾ ಪ್ರಚಾರಕ್ಕೆ ನಿನ್ನೆ ವಿಜಯಪುರಕ್ಕೆ  ಬಿ.ಎಸ್. ಯಡಿಯೂರಪ್ಪ​ ಆಗಮಿಸಿದ್ದಾರೆ. ಪರಿಷತ್​ನಲ್ಲಿ ನಮಗೆ ಸ್ಪಷ್ಟ ಬಹುಮತ ಸಿಗುತ್ತದೆ. ರಾಜ್ಯಸಭಾ ಚುನಾವಣೆಯಲ್ಲಿ ಮೂರರಲ್ಲಿ ಸ್ಪರ್ದೆ ಮಾಡಿದ್ದು ಮೂರೂ ಸ್ಥಾನದಲ್ಲಿ ಗೆಲ್ಲುತ್ತೇವೆ. ಲೆಗರಸಿಂಗ್ ಅವರು ಮೊದಲ ಹಾಗೂ ಎರಡನೇ ಪ್ರಾಶಸ್ತ್ಯ ಮತಗಳನ್ನು ಪಡೆದು ಗೆಲ್ಲುತ್ತಾರೆ. ವಿಜಯೇಂದ್ರ ಅವರು ಸಿಎಂ ಆಗೋ ಅರ್ಹತೆಯಿದೆ ಎಂದು ಸಚಿವ ನಾರಾಯಣಗೌಡ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ಅದರ ಬಗ್ಗೆ ಟೀಕೆ ಟಿಪ್ಪಣಿ ಮಾಡಲ್ಲಾ ಎಂದಿದ್ದಾರೆ.

ಇದನ್ನೂ ಓದಿ: Cancer Drug Trial: ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಚಲನ: ಪ್ರಾಯೋಗಿಕ ಔಷಧಿಯಿಂದಲೇ ಕ್ಯಾನ್ಸರ್ ಮಾಯ

ಸಿದ್ದರಾಮಯ್ಯ ಹೇಳಿಕೆಗೆ ಯಡಿಯೂರಪ್ಪ ತಿರುಗೇಟು

ಯಡಿಯೂರಪ್ಪ ಮತ್ತು ಕುಟುಂಬವನ್ನು ಬಿಜೆಪಿ ಪಕ್ಕಕ್ಕೆ ಸರಿಸಿದೆ‌ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿರುಗೇಟು ನೀಡಿದ್ದು, ಸಿದ್ದರಾಮಯ್ಯರಿಂದ ನನಗೆ ಯಾವುದೇ ಸರ್ಟಿಫಿಕೆಟ್ ಬೇಕಿಲ್ಲ. ಬಿಜೆಪಿ‌ ನನಗೆ ಕೊಟ್ಟಿರುವ ಸ್ಥಾನಮಾನ ಬೇರೆ ಯಾರಿಗೂ‌ ಸಿಕ್ಕಿಲ್ಲ. ನಾನು 4 ಬಾರಿ ಮುಖ್ಯಮಂತ್ರಿ ಆಗಿದ್ದೆ ಎಲ್ಲಾ ಅವಕಾಶ ಸಿಕ್ಕಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ನಾನೇ ರಾಜೀನಾಮೆ‌ ಕೊಟ್ಟು ಬಂದಿದ್ದೇನೆ. ಆದರೂ ಅದೇ ಗೌರವವನ್ನ ರಾಜ್ಯದ ಜನ ಮತ್ತು ಪಕ್ಷ ಇಟ್ಟುಕೊಂಡಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವುದೋ ಭ್ರಮೆಯಲ್ಲಿದ್ದಾರೆ ಎಂದು ಹೇಳಿದರು.

ವಿಜಯೇಂದ್ರಗೆ ಟಿಕೆಟ್ ಕೊಡಿಸಲಾಗಲಿಲ್ಲ ಎಂಬ ಹೇಳಿಕೆ ವಿಚಾರ ಹಿನ್ನೆಲೆ ಒಂದೇ ಕುಟುಂಬದವರಿಗೆ ಟಿಕೆಟ್ ಕೊಡಬಾರದು ಅಂತಾ ತೀರ್ಮಾನ ಮಾಡಿದ್ದು, ಪ್ರಧಾನಿ ಮೋದಿ‌ ತೀರ್ಮಾನ ತೆಗೆದುಕೊಂಡಿದ್ದು‌ ಎಲ್ಲರಿಗೂ ಗೊತ್ತಿದೆ ಎಂದರು. ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಬೇಕೆಂದು ನಿಶ್ಚಯಿಸಿದ್ದೇನೆ. ಆರೋಗ್ಯ ಚೆನ್ನಾಗಿದ್ದರೆ ಇನ್ನೂ 10 ವರ್ಷ ಪ್ರವಾಸ ಮಾಡುತ್ತೇನೆ. ರಾಜ್ಯದಲ್ಲಿ ಪ್ರವಾಸ ಮಾಡಿ ಪಕ್ಷ ಕಟ್ಟುವ ಕೆಲಸ ಮಾಡುವೆ. ಸಾಮೂಹಿಕ ನಾಯಕತ್ವದಲ್ಲಿ ವಿಧಾನಸಭಾ ಚುನಾವಣೆಗೆ ಹೋಗುತ್ತೇವೆ. 2023ರ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ವಿಜಯಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ‌ಹೇಳಿಕೆ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada