ಬಾಗಲಕೋಟೆ: ಚಾಕುವಿನಿಂದ ಇರಿದು ಬರ್ಬರವಾಗಿ ಯೋಧನ (yodha) ಹತ್ಯೆ (murder) ಮಾಡಿರುವಂತಹ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ. ಬಾಮೈದನಿಂದಲೇ ಭಾವ ಕರಿಸಿದ್ದಪ್ಪ ಕಳಸದ(25) ಕೊಲೆಯಾಗಿದೆ. ರಜೆ ಮೇಲೆ ಊರಿಗೆ ಬಂದಿದ್ದಾಗ ಯೋಧ ಕರಿಸಿದ್ದಪ್ಪ ಹತ್ಯೆಯಾಗಿದೆ. ಊಟ ನೀಡುವ ವಿಚಾರವಾಗಿ ದಂಪತಿ ಜಗಳವಾಡಿಕೊಂಡಿದ್ದು, ಗಲಾಟೆ ಬಳಿಕ ಸಹೋದರನಿಗೆ ಕರೆ ಮಾಡಿದ್ದ ಯೋಧನ ಪತ್ನಿ, ನನ್ನ ಸಹೋದರಿಗೆ ಕಿರುಕುಳ ಕೊಡ್ತೀಯಾ ಎಂದು ಆಕ್ರೋಶಗೊಂಡಿದ್ದು, ಬಾಮೈದ ಧರಿಗೌಡ ದೂಳಪ್ಪನವರನಿಂದ ಯೋಧನ ಕೊಲೆ ಮಾಡಲಾಗಿದೆ. 2 ವರ್ಷದ ಹಿಂದೆಯಷ್ಟೇ ಯೋಧ ಕರಿಸಿದ್ದಪ್ಪ-ವಿದ್ಯಾ ಪ್ರೀತಿಸಿ ಮದುವೆಯಾಗಿದ್ದರು. ಘಟನಾ ಸ್ಥಳಕ್ಕೆ ಕೆರೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಇದನ್ನೂ ಓದಿ; Crime News: ಸೊಸೆಯ ತಲೆ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಅತ್ತೆ!
ಕೊಲೆಯ ಹಿಂದೆ ಅನೈತಿಕ ಸಂಬಂಧದ ಶಂಕೆ
ಯೋಧ ಕರಿಸಿದ್ದಪ್ಪ ಕಳಸದ(28) ಬೇರೆಯವರ ಜೊತೆ ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿದ್ದು, ಕೊಲೆಗೆ ಇದು ಕೂಡ ಕಾರಣವೆನ್ನಲಾಗುತ್ತಿದೆ. ಇದೇ ಕಾರಣಕ್ಕೆ ಪತಿ ಪತ್ನಿ ನಡುವೆ ಜಗಳವಾಗುತ್ತಿತ್ತು. ನಿನ್ನೆ ರಾತ್ರಿ ಊಟಕ್ಕೆ ಕೂಡವ ವೇಳೆ ಪತ್ನಿ ಮುನಿಸು ಕೊಂಡಿದ್ದು, ಮನೆಯಲ್ಲಿ ಎಲ್ರೂ ಊಟ ಮಾಡುವಾಗ ಪತ್ನಿ ವಿದ್ಯಾಶ್ರೀ ಹೊರಗೆ ಹೋಗಿದ್ದಾಳೆ. ಪತ್ನಿ ಹೊರಗೆ ಹೋಗಿದ್ದ ನೋಡಿ ಪತಿ ಕರಿಸಿದ್ದಪ್ಪ ಹಿಂದೆ ಬಂದಿದ್ದಾನೆ. ತನ್ನ ಸಹೋದರ ಧರಿಗೌಡಗೆ ಫೋನ್ ಮಾಡಿ ಕರೆಸಿದ್ದ ವಿದ್ಯಾಶ್ರೀ, ದಿಢೀರನೇ ಚಾಕುವಿನಿಂದ ಯೋಧನ ಕುತ್ತಿಗೆ ಸೇರಿ ಮೂರು ಕಡೆಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಯೋಧ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾನೆ. ಸದ್ಯ ಕೊಲೆಗೆ ಸಂಬಂಧಿಸಿದಂತೆ ಪತ್ನಿ ವಿದ್ಯಾಶ್ರೀ, ವಿದ್ಯಾಶ್ರೀ ಸಹೋದರ ಧರಿಗೌಡ ಮತ್ತು ಫಕೀರಗೌಡ, ಶಾಂತವ್ವ, ವಿದ್ಯಾಶ್ರೀ ತಂದೆ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ: ಬೈಕ್ ಸವಾರರು ಪಾರು
ಬೆಳಗಾವಿ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದಿರುವಂತಹ ಘಟನೆ ಬೆಳಗಾವಿ – ಬಾಗಲಕೋಟೆ ರಾಜ್ಯ ಹೆದ್ದಾರಿಯ ಸಿಂಧೋಳ್ಳಿ ಗ್ರಾಮದ ಬಳಿ ನಡೆದಿದೆ. ಭೀಕರ ಅಪಘಾತದ ದೃಶ್ಯ ರಸ್ತೆ ಬದಿ ಹೊಟೇಲ್ ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕೂದಳೆ ಅಂತರದಲ್ಲಿ ಪ್ರಾಣಾಪಾಯದಿಂದ ದ್ವಿಚಕ್ರ ವಾಹನ ಸವಾರರು ಪಾರಾಗಿದ್ದಾರೆ. ಬೆಳಗಾವಿಯಿಂದ ಜಮಖಂಡಿಗೆ ಹೋಗುತ್ತಿದ್ದ ಬಸ್ ಬೈಕ್‌ಗೆ ಡಿಕ್ಕಿಯಾಗಿದೆ. ಬೈಕ್ ಸವಾರರಾದ ಬಸವನಕುಡಚಿ ಗ್ರಾಮದ ಸುಬಾಸ್ ಬೆಡಕೆ, ಸುಧೀರ್ ಬೆಡಕೆಗೆ ಗಂಭೀರ ಗಾಯವಾಗಿದ್ದು, ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಿನ್ನೆ ಮಧ್ಯಾಹ್ನ ಘಟನೆ ನಡೆದಿದ್ದು, ಮಾರಿಹಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.