ಬಾಗಲಕೋಟೆ, ಸೆಪ್ಟೆಂಬರ್ 08: ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ದ ಬಸ್ ಚಾಲಕ ಕಮ್ ನಿರ್ವಾಹಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಲಕ ಕಮ್ ನಿರ್ವಾಹಕ ಶ್ರೀಶೈಲ್ ವಿಭೂತಿ (45) ಬೀಳಗಿಯಲ್ಲಿನ (Bilagi) ತಮ್ಮ ಮನೆಯಲ್ಲಿ ಶನಿವಾರ ತಡರಾತ್ರಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಬೀಳಗಿ ಕೆಎಸ್ಆರ್ಟಿಸಿ ಬಸ್ ಡಿಪೋ ಮ್ಯಾನೇಜರ್ ಮತ್ತು ಜಿಲ್ಲಾ ಕಂಟ್ರೋಲರ್ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಬೀಳಗಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶ್ರೀಶೈಲ್ ವಿಭೂತಿ 2022ರಲ್ಲಿ ಮೇಲಧಿಕಾರಿಗಳ ಕಿರುಕುಳದ ಬಗ್ಗೆ ಮಾತಾಡಿ ಕಣ್ಣೀರಿಟ್ಟಿದ್ದ ಹಳೇ ವಿಡಿಯೋ ವೈರಲ್ ಆಗಿತ್ತು.
ಚಾಮರಾಜನಗರ: ಚಾಮರಾಜನಗರ ವಿಭಾಗದ ನೌಕರರಿಗೆ ಮೇಲಾಧಿಕಾರಿಗಳು ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಘಟಕ ವ್ಯವಸ್ಥಾಪಕ ಕುಮಾರನಾಯ್ಕ ನಿರ್ವಾಹಕನ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: ಲವರ್ ಜೊತೆ ರಾತ್ರಿ ಲಾಡ್ಜ್ನಲ್ಲಿದ್ದ ಅಪ್ರಾಪ್ತ ಬಾಲಕಿ ಮನೆಗೆ ಬಂದಕೂಡಲೆ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಚಂದ್ರಶೇಖರ್ ಎಂಬುವರ ಚಾಲಕ ತಂದೆ ಮರಣ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ನಿರ್ವಾಹಕ ಚಂದ್ರಶೇಖರ್ ಕರ್ತವ್ಯಕ್ಕೆ ಗೈರಾಗಿದ್ದರು. ಗೈರಾದ ಹಿನ್ನಲೆ ನಿರ್ವಾಹಕನಿಗೆ ವಿಭಾಗ ವ್ಯವಸ್ಥಾಪಕ ನಿರ್ದೇಶಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಪ್ರತಿ ದಿನ 400 ಕಿಮೀ ಸಂಚಾರ ಮಾಡಲೇಬೇಕು ಎಂದು ತಾಕೀತು ಮಾಡಿದ್ದಾನೆ. ನಿಗದಿತ ಕಿಮೀ ಸಂಚರಿಸದಿದ್ದರೆ, ವೇತನ ಖಡಿತ ಮಾಡುವುದಾಗಿ ಧಮ್ಕಿ ಹಾಕಿದ್ದಾನೆ. ಚಾಮರಾಜನಗರ ಘಟಕ ವ್ಯವಸ್ಥಾಪಕನ ಕಿರುಕುಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:01 pm, Sun, 8 September 24