ಲವರ್ ಜೊತೆ ರಾತ್ರಿ ಲಾಡ್ಜ್​ನಲ್ಲಿದ್ದ ಅಪ್ರಾಪ್ತ ಬಾಲಕಿ ಮನೆಗೆ ಬಂದಕೂಡಲೆ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಅಪ್ರಾಪ್ತ ಬಾಲಕಿಯು ಪುರುಷನೊಬ್ಬನೊಂದಿಗೆ ಲಾಡ್ಜ್‌ನಲ್ಲಿ ರಾತ್ರಿ ಕಳೆಯುತ್ತಾಳೆ. ಆದರೆ, ಅಲ್ಲಿಂದ ಹಿಂದಿರುಗಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ಕಾರಣವೇನೆಂಬುದರ ವಿವರ ಇಲ್ಲಿದೆ.

ಲವರ್ ಜೊತೆ ರಾತ್ರಿ ಲಾಡ್ಜ್​ನಲ್ಲಿದ್ದ ಅಪ್ರಾಪ್ತ ಬಾಲಕಿ ಮನೆಗೆ ಬಂದಕೂಡಲೆ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಸಾಂದರ್ಭಿಕ ಚಿತ್ರ
Follow us
|

Updated on: Sep 06, 2024 | 4:55 PM

ನವದೆಹಲಿ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯೊಂದರಲ್ಲಿ 19 ವರ್ಷದ ಯುವಕನ ಮೇಲೆ ಲೈಂಗಿಕ ಶೋಷಣೆಯ ಆರೋಪ ಹೊರಿಸಿ 17 ವರ್ಷದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ದುರಂತ ಘಟನೆಯ ಬಳಿಕ ಯುವಕ ಮತ್ತು ಇಬ್ಬರು ಲಾಡ್ಜ್ ನೌಕರರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಸೋಮವಾರ ಅಪ್ರಾಪ್ತ ಬಾಲಕಿ 19 ವರ್ಷದ ಯುವಕನೊಂದಿಗೆ ಬಲ್ಲಾರ್‌ಪುರದ ಲಾಡ್ಜ್‌ನಲ್ಲಿ ರಾತ್ರಿ ಕಳೆದಿದ್ದಾಳೆ. ಮರುದಿನ ಬೆಳಿಗ್ಗೆ ಮನೆಗೆ ಹೋದ ಬಳಿಕ ಆಕೆಯ ಮನೆಯವರು ಪ್ರಶ್ನಿಸಿದಾಗ ಯುವಕನಿಂದ ರಾತ್ರಿ ತನಗೆ ಲೈಂಗಿಕ ಕಿರುಕುಳ ಉಂಟಾಯಿತು ಎಂದು ಆರೋಪಿಸಿದ್ದಾಳೆ. ನಂತರ ಆಕೆಯ ಮನೆಯವರು ಸ್ಥಳೀಯ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದರು.

ಇದನ್ನೂ ಓದಿ: Crime News: ಮಗುವಿನ ಮೇಲೆ ಅತ್ಯಾಚಾರ, ಕೊಲೆ; ತನಗೆ ಗಲ್ಲು ಶಿಕ್ಷೆ ನೀಡಲು ಅಪರಾಧಿಯಿಂದ ನ್ಯಾಯಾಧೀಶರಿಗೆ ಮನವಿ

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು 19 ವರ್ಷದ ಯುವಕನನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬಂಧಿಸಿದ್ದಾರೆ. ಆದರೆ, ಈ ವಿಷಯ ಗೊತ್ತಾಗುತ್ತಿದ್ದಂತೆ ಗಾಬರಿಯಾದ ಆ ಬಾಲಕಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರಿಂದ ಆಕೆಯ ಕುಟುಂಬದವರು ದುಃಖದಲ್ಲಿ ಮುಳುಗಿದ್ದಾರೆ.

ಅಪ್ರಾಪ್ತ ಬಾಲಕಿಯ ಸಾವಿನ ಹಿನ್ನಲೆಯಲ್ಲಿ ಪೊಲೀಸರು ಲಾಡ್ಜ್ ಮಾಲೀಕ ಹಾಗೂ ಮ್ಯಾನೇಜರ್ ನನ್ನು ಬಂಧಿಸಿದ್ದಾರೆ. ಅಪ್ರಾಪ್ತರು ರೂಮಿನಲ್ಲಿ ಉಳಿದುಕೊಳ್ಳುವುದಕ್ಕೆ ಅನುಮತಿಸಿದ್ದಕ್ಕಾಗಿ ಅವರು ಆರೋಪವನ್ನು ಎದುರಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ
ಗಣೇಶ ಚತುರ್ಥಿಯ ಮಹತ್ವ, ಪೂಜೆಗಳನ್ನು ಹೇಗೆ ಮಾಡಬೇಕು? ಈ ವಿಡಿಯೋ ನೋಡಿ
ಗಣೇಶ ಚತುರ್ಥಿಯ ಮಹತ್ವ, ಪೂಜೆಗಳನ್ನು ಹೇಗೆ ಮಾಡಬೇಕು? ಈ ವಿಡಿಯೋ ನೋಡಿ
Nithya Bhavishya: ಗಣೇಶ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಗಣೇಶ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
ಫುಟ್ಬಾಲ್​ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
ಫುಟ್ಬಾಲ್​ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
181 ರನ್ ಸಿಡಿಸಿ ಕ್ರಿಕೆಟ್ ದೇವರ ದಾಖಲೆ ಮುರಿದ ಮುಶೀರ್ ಖಾನ್
181 ರನ್ ಸಿಡಿಸಿ ಕ್ರಿಕೆಟ್ ದೇವರ ದಾಖಲೆ ಮುರಿದ ಮುಶೀರ್ ಖಾನ್
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು