ಚಾಲಕ ಸಮೇತ ಅಕ್ಕಿ ಲಾರಿ ಕಿಡ್ನ್ಯಾಪ್ ಮಾಡಿದ್ದ ಅಂತಾರಾಜ್ಯ ದರೋಡೆಕೋರರ ಬಂಧನ: ಲಾಕ್​​ ಆಗಿದ್ದೇಗೆ ಗೊತ್ತಾ?

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪೊಲೀಸರು ಚಾಲಕ ಸೇರಿ ಅಕ್ಕಿ ಲಾರಿ ದರೋಡೆ ಪ್ರಕರಣದಲ್ಲಿ 8 ಅಂತಾರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೈದಾಪುರದಲ್ಲಿ ಚಾಲಕನನ್ನು ಅಪಹರಿಸಿ, 25 ಟನ್ ಅಕ್ಕಿಯನ್ನು ಮಾರಾಟ ಮಾಡಲಾಗಿತ್ತು. ದರೋಡೆಕೋರರ ಪತ್ತೆಗೆ ಪೊಲೀಸರ ರೋಚಕ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ಚಾಲಕ ಸಮೇತ ಅಕ್ಕಿ ಲಾರಿ ಕಿಡ್ನ್ಯಾಪ್ ಮಾಡಿದ್ದ ಅಂತಾರಾಜ್ಯ ದರೋಡೆಕೋರರ ಬಂಧನ: ಲಾಕ್​​ ಆಗಿದ್ದೇಗೆ ಗೊತ್ತಾ?
ದರೋಡೆಕೋರರನ್ನು ಬಂಧಿಸಿದ ಮಹಾಲಿಂಗಪುರ ಪೊಲೀಸರು
Edited By:

Updated on: Jan 24, 2026 | 7:22 PM

ಬಾಗಲಕೋಟೆ, ಜನವರಿ 24: ಅಕ್ಕಿ (Rice) ಸಾಗಾಟ ಮಾಡುತ್ತಿದ್ದ ಚಾಲಕ ಸೇರಿದಂತೆ ಲಾರಿ ಅಪಹರಿಸಿದ್ದ 8 ಜನ ಅಂತಾರಾಜ್ಯ ದರೋಡೆಕೋರರನ್ನು (Robbers) ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಪೊಲೀಸರು ರೋಚಕ ಕಾರ್ಯಾಚರಣೆ ನಡೆಸುವ ಮೂಲಕ ದರೋಡೆಕೋರರ ಹೆಡೆಮುರಿ ಕಟ್ಟಿದ್ದಾರೆ. ವಿಜಯಪುರ ಮೂಲದ ಜಾಕೀರ್ ಮಕಾಂದಾರ್, ಸಚಿನ್ ನಾಯ್ಕೊಡಿ, ಅರ್ಪಾತ್ ತಾಳಿಕೋಟಿ, ಸಂತೋಷ್​ ಕಾಂಬಳೆ, ಫಯಾಜ್ ಮಕಾಂದಾರ್, ಜಮಖಂಡಿಯ ಸಂಜು ಕಡಕೋಳ, ವಿಶ್ವನಾಥ ಲಗಳಿ, ಜಮಖಂಡಿ ತಾಲ್ಲೂಕಿನ ಮೈಗೂರು ಗ್ರಾಮದ ಸಂಗಮೇಶ್ ಕಾಂಬಳೆ ಬಂಧಿತರು. 3 ಲಕ್ಷ 90 ಸಾವಿರ ರೂ ಹಣ, ಸ್ಕಾರ್ಪಿಯೋ, ಇನ್ನೋವಾ ಮತ್ತು ಲಾರಿ ಜಪ್ತಿ ಮಾಡಲಾಗಿದೆ.

ನಡೆದದ್ದೇನು?

ಜನವರಿ 10ರ ರಾತ್ರಿ 12.45ಕ್ಕೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಸೈದಾಪುರ ಬಳಿ ಘಟನೆ ನಡೆದಿದೆ. ಸ್ಕಾರ್ಪಿಯೋ ಕಾರಿನಲ್ಲಿ ವಿಜಯಪುರ ಗ್ಯಾಂಗ್​​ ಬಂದಿದ್ದು, ಇನ್ನೋವಾ ಕಾರಿನಲ್ಲಿ ಜಮಖಂಡಿ ಗ್ಯಾಂಗ್​​ ಬಂದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಕೊಲ್ಲಾಪುರಕ್ಕೆ ಹೊರಟಿದ್ದ (MH 09 UC 8190) ನಂಬರಿನ ಲಾರಿಯನ್ನ ಸೈದಾಪುರ ಬಳಿ ಅಡ್ಡಗಟ್ಟಿದ ದರೋಡೆಕೋರರು ಚಾಲಕನನ್ನು ಥಳಿಸಿ‌ದ್ದಾರೆ. ಅಷ್ಟೇ ಅಲ್ಲದೆ ಚಾಲಕನ ಕಣ್ಣಿಗೆ ಬಟ್ಟೆ ಕಟ್ಟಿ ಕಿಡ್ನ್ಯಾಪ್​​ ಮಾಡಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಕೊಪ್ಪಳದಿಂದ ದುಬೈಗೆ ಕಳ್ಳ ಸಾಗಾಟ? ‘ಟಿವಿ9’ ವರದಿ ಬೆನ್ನಲ್ಲೇ ನಾಲ್ವರ ವಿರುದ್ಧ ಎಫ್​ಐಆರ್

ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ 6 ಲಕ್ಷ 12 ಸಾವಿರ 500 ರೂ ಮೌಲ್ಯದ 25 ಟನ್​​​ ಅಕ್ಕಿಯನ್ನು​ ಒಬ್ಬರಿಗೆ ಮಾರಾಟ ಮಾಡಿದ್ದಾರೆ. ಅಕ್ಕಿ ಮಾರಾಟದಿಂದ ಬಂದ ಹಣ ತೆಗೆದುಕೊಂಡು ದರೋಡೆಕೋರರು ಪರಾರಿ ಆಗಿದ್ದಾರೆ. ಸದ್ಯ ಲಾರಿ ಚಾಲಕ ಬಾಬಾಸಾಬ ರಾಮದುರ್ಗ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ದರೋಡೆಕೋರರು ಲಾಕ್​​ ಆಗಿದ್ದೇಗೆ?

ಇನ್‌ಸ್ಟಾಗ್ರಾಮ್​ ವಾಯ್ಸ್​​ ಕಾಲ್​ ಆಧಾರವಾಗಿಟ್ಟುಕೊಂಡು ಮಹಾಲಿಂಗಪುರ ಪೊಲೀಸರು ರೋಚಕ ಕಾರ್ಯಾಚರಣೆ ಮಾಡಿದ್ದಾರೆ. ದರೋಡೆಕೋರರ ಪರಿಚಿತರಿಂದ ಅವರಿಗೆ ಮೆಸೇಜ್​ ಕಳುಹಿಸಲಾಗಿದೆ. ಬಳಿಕ ಐಡಿಪಿಆರ್, ಇಂಟರ್ನೆಟ್ ಆಪರೇಟ್ ಸ್ಥಳ ಗುರುತಿಸಿ ದರೋಡೆಕೋರರ ಕೈಗೆ ಕೋಳ ತೊಡಿಸಲಾಗಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ರೇಷನ್ ಅಕ್ಕಿಗೆ ಕನ್ನ; ಖಡಕ್ ವಾರ್ನಿಂಗ್ ಕೊಟ್ಟ ಆಹಾರ ಇಲಾಖೆ

ಇನ್ನು ಅಕ್ಕಿ ಕಳ್ಳ ಸಾಗಾಣಿಕೆ ಮೂಲಕ ಸಾಗಾಟ ಮಾಡಲಾಗುತ್ತಿತ್ತಾ ಅಥವಾ ಕಾನೂನುಬದ್ಧ ಆಗಿತ್ತಾ, ಪಡಿತರ ಅಕ್ಕಿನಾ, ರೈಸ್ ಸ್ಮಗ್ಲಿಂಗ್ ಮಾಫಿಯಾನಾ ಎಂದು ಪೊಲೀಸರು‌ ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:15 pm, Sat, 24 January 26