ಬಾಗಲಕೋಟೆ, ಜು.19: ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಣ ವಂಚನೆ(Bagalkot Tourism Department Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ(ಗುರುವಾರ)ಯಷ್ಟೇ ಪ್ರಕರಣದ ಕಿಂಗ್ ಪಿನ್ ಐಡಿಬಿಐ ಬ್ಯಾಂಕ್ ಸೇಲ್ಸ್ ಎಕ್ಸಿಕ್ಯೂಟಿವ್ ಸೂರಜ್ ಸಗರ ಎಂಬುವವರನ್ನು ಬಂಧಿಸಲಾಗಿತ್ತು. ಇತ, ಐಡಿಬಿಐ ಬ್ಯಾಂಕ್ನಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಮೂರು ಖಾತೆಯಿಂದ ತನ್ನ ಸ್ನೇಹಿತರ ಅಕೌಂಟ್ಗಳಿಗೆ ಹಣ ವರ್ಗಾವಣೆ ಮಾಡಿ ಕ್ಯಾಶ್ ಪಡೆದುಕೊಳ್ಳುತ್ತಿದ್ದ. ಇದೀಗ ಸೂರಜ್ ಸಗರ ವಂಚನೆಗೆ ಸಾತ್ ನೀಡಿದ ಹಿನ್ನೆಲೆ ಆರು ಜನರನ್ನು ಅರೆಸ್ಟ್ ಮಾಡಲಾಗಿದೆ.
ಆರೋಪಿ ಸೂರಜ್ ಸಗರ, ಐಡಿಬಿಐ ಬ್ಯಾಂಕ್ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ. 2021ರಿಂದ 2024 ರವರೆಗೆ ಬರೋಬ್ಬರಿ 54 ಬಾರಿ ಹಣ ವರ್ಗಾವಣೆ ಮಾಡಿದ್ದಾನೆ. ಈ ಮೂಲಕ ಒಟ್ಟು 2 ಕೋಟಿ 47 ಲಕ್ಷ 73 ಸಾವಿರ 999 ರೂಪಾಯಿ ವಂಚಿಸಿದ್ದಾನೆ. ಇದೀಗ ಹಣ ಹಾಕಿಸಿಕೊಂಡ ಸ್ನೇಹಿತರಿಗೂ ಖಾಕಿ ಅರೆಸ್ಟ್ ಮಾಡಿದ್ದು, ಕಿರಣ್ ಜಿಂಗಾಡಿ, ಮಹೇಶ್ ಜಾಲವಾದಿ, ಶರಣಪ್ಪ ಬಸಣಗೌಡರ, ಅರುಣ್ ನಾಯ್ಕರ್, ಪ್ರವೀಣ್ ವೇಟಾಲ್ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ:ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆ ಹಣ ವಂಚನೆ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್
ಈ ಕುರಿತು ಮಾತನಾಡಿದ್ದ ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆ ಡಿಡಿ ಗೋಪಾಲ ಹಿತ್ತಲಮನಿ, ‘ ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್ ಕೆ ಪಾಟಿಲ್ ಸೂಚನೆ ಮೇರೆಗೆ, ಮೇಲಾಧಿಕಾರಿಗಳಿಂದ ಇಲಾಖೆಗೆ ಸಂಬಂಧಿಸಿದ ಖಾತೆಯ ಹಣ ಪರಿಶೀಲನೆಗೆ ಸೂಚನೆ ಬಂತು. ಆ ಪ್ರಕಾರ ನಾನು ಐಡಿಬಿಐ ಬ್ಯಾಂಕ್ಗೆ ಹೋಗಿ ಖಾತೆಯ ಬ್ಯಾಲೆನ್ಸ್ ವಿವರ ಕೊಡಿ ಎಂದು ಕೇಳಿದೆ. ಆಗ ಎಕ್ಷೆಲ್ ಸೀಟ್ ಮೂಲಕ ಸ್ಟೇಟ್ ಮೆಂಟ್ ಕೊಟ್ರು. ಎಕ್ಷೆಲ್ ಸೀಟ್ನಲ್ಲಿ 1 ಕೋಟಿ 63 ಲಕ್ಷ ಬ್ಯಾಲೆನ್ಸ್ ಇತ್ತು. ಎಕ್ಷೆಲ್ ಸೀಟ್ ಮೂಲಕ ಸ್ಟೇಟ್ ಮೆಂಟ್ ಕೊಡುವ ಪದ್ದತಿ ಬ್ಯಾಂಕಿಂಗ್ ಸೆಕ್ಟರ್ನಲ್ಲಿ ಇಲ್ಲ. ಹೀಗಾಗಿ ಅನುಮಾನ ಬಂದು ಮಾರನೆ ದಿನ ಪುನಃ ಬ್ಯಾಂಕ್ಗೆ ಹೋಗಿ ಲೇಡಿ ಕ್ಲರ್ಕ್ ಬಳಿ ಅದೇ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಿ ಎಂದೆ, ಆಗ ಚೆಕ್‌ಮಾಡಿದಾಗ 2915 ರೂ. ಮಾತ್ರ ಇತ್ತು. ಬಳಿಕ ಮೂರು ಖಾತೆ ಚೆಕ್ ಮಾಡಿದಾಗ ಅಕ್ರಮ ಕಂಡುಬಂದಿದೆ. ನಂತರ ಡಿಸಿ ಸೂಚನೆ ಮೇರೆಗೆ ಸಿಇಎನ್ ಠಾಣೆಯಲ್ಲಿ ಎಫ್ ಐ ಆರ್ ಮಾಡಿದ್ದೇನೆ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:05 pm, Fri, 19 July 24