ರಬಕವಿಯಲ್ಲಿ 25 ಬೆರಳುಗಳು ಇರೋ ಅಪರೂಪದ ಮಗು ಜನನ
ಬಾಗಲಕೋಟೆ (Bagalkote) ಜಿಲ್ಲೆಯ ರಬಕವಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗುವಿಗೆ 12 ಕಾಲ್ಬೆರಳುಗಳು ಹಾಗೂ 13 ಕೈ ಬೆರಳುಗಳು ಸೇರಿ ಒಟ್ಟು 25 ಬೆರಳುಗಳಿರುವ ಅಪರೂಪದ ಘಟನೆ ನಡೆದಿದೆ. ಅಚ್ಚರಿಯ ಮಗು ಜನನದ ಹಿನ್ನೆಲೆ ಕುಟುಂಬದಲ್ಲಿ ಹರ್ಷ ಮನೆ ಮಾಡಿದೆ.
ಬಾಗಲಕೋಟೆ, ಜು.20: ಎರಡು ತಲೆ, ನಾಲ್ಕು ಕಾಲುಗಳಿರುವ ಮಕ್ಕಳು ಜನಿಸಿರುವುದನ್ನು ನೋಡಿದ್ದೇವೆ. ಅದರಂತೆ ಇದೀಗ ಅಚ್ಚರಿ ಎಂಬಂತೆ 25 ಬೆರಳುಗಳು ಇರುವ ಅಪರೂಪದ ಮಗುವೊಂದು ಜನನವಾಗಿದೆ. ಹೌದು, ಬಾಗಲಕೋಟೆ(Bagalkote) ಜಿಲ್ಲೆಯ ರಬಕವಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗುವಿಗೆ, 12 ಕಾಲ್ಬೆರಳುಗಳು ಹಾಗೂ 13 ಕೈ ಬೆರಳುಗಳಿವೆ. 25 ಬೆರಳಿನ ಮಗು ಕಂಡು ಒಮ್ಮೆ ವೈದ್ಯರೇ ಆಶ್ಚರ್ಯಗೊಂಡಿದ್ದಾರೆ. ಭಾರತಿ ಕೊಣ್ಣೂರು ( 35) ಎಬುವವರು ಈ ಮಗುವಿಗೆ ಜನ್ಮ ನೀಡಿದ್ದಾರೆ. ಅಚ್ಚರಿಯ ಮಗು ಜನನದ ಹಿನ್ನೆಲೆ ಕುಟುಂಬದಲ್ಲಿ ಹರ್ಷ ಮನೆ ಮಾಡಿದೆ. 25 ಬೆರಳು ಇರುವುದು ಅತ್ಯಂತ ಅಪರೂಪ ಘಟನೆಗಳಲ್ಲೊಂದು. ಬಲಗೈಗೆ 6 ಬೆರಳು ಎಡಗೈಗೆ 7 ಬೆರಳು, ಎರಡು ಕಾಲಿನಲ್ಲಿ 6 ಬೆರಳುಗಳಿವೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್ಕುಮಾರ್

