Viral Video: ಹಾವನ್ನು ಇಡಿಯಾಗಿ ನುಂಗಿ ಮತ್ತೆ ಹೊರಹಾಕಿದ ಬೃಹತ್ ನಾಗರಹಾವು; ಮೈ ಜುಮ್ಮೆನಿಸುವ ವಿಡಿಯೋ ವೈರಲ್
Shocking Video: ದೊಡ್ಡ ಗಾತ್ರದ ನಾಗರಹಾವೊಂದು ಇಡೀ ಹಾವನ್ನು ನುಂಗಿ, ಮತ್ತೆ ಬಾಯಿಯಿಂದ ಹೊರತೆಗೆಯುತ್ತಿರುವ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ 1,12,000 ವೀಕ್ಷಣೆಗಳನ್ನು ಗಳಿಸಿದೆ.
ಪ್ರಕೃತಿ ಹಲವು ಕೌತುಕ, ಅಚ್ಚರಿ, ವಿಸ್ಮಯಗಳ ಆಗರ. ಬೃಹತ್ ನಾಗರಹಾವೊಂದು ಹಾವನ್ನು ನುಂಗಿ ಮತ್ತೆ ಆ ಇಡೀ ಹಾವನ್ನು ಹೊರಹಾಕುವ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಸೃಷ್ಟಿಸಿದೆ. ಎಕ್ಸ್(ಟ್ವಿಟರ್)ನಲ್ಲಿ 1,12,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿರುವ ಈ ವಿಡಿಯೋ ವೀಕ್ಷಕರನ್ನು ವಿಚಲಿತಗೊಳಿಸಿದೆ.
ಅನೇಕ ಜನರು ಹಾವುಗಳ ಭಯವನ್ನು ಹೊಂದಿದ್ದರೂ, ಆನ್‌ಲೈನ್‌ನಲ್ಲಿ ನಾಗರಹಾವಿನ ವೀಡಿಯೊಗಳನ್ನು ನೋಡಲು ಕುತೂಹಲಭರಿತರಾಗಿರುತ್ತಾರೆ. ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡ ಈ ವಿಡಿಯೋ ಕ್ಲಿಪ್ ಜನರನ್ನು ಅಚ್ಚರಿಗೊಳಿಸಿದೆ. ಈ ವಿಡಿಯೋದಲ್ಲಿ ದೊಡ್ಡ ನಾಗರಹಾವು ಸಣ್ಣ ಹಾವೊಂದನ್ನು ನುಂಗಿದ್ದು, ನಂತರ ಬಲವಂತವಾಗಿ ತನ್ನ ಬಾಯಿಯಿಂದ ಸಂಪೂರ್ಣವಾಗಿ ಜೀವಂತ ಹಾವನ್ನು ಹೊರಹಾಕುವುದನ್ನು ತೋರಿಸುತ್ತದೆ.
Someone is full… 😳 pic.twitter.com/X9JQcCb62H
— Wow Terrifying (@WowTerrifying) May 13, 2024
ಇದನ್ನೂ ಓದಿ: Shocking Video: ನಾಯಿಯನ್ನು ಹಗ್ಗದಲ್ಲಿ ಕಟ್ಟಿ ಟೆರೇಸ್‌ನಿಂದ ನೇತಾಡಿಸಿದ ಯುವಕ; ಶಾಕಿಂಗ್ ವಿಡಿಯೋ ವೈರಲ್
ಈ ವಿಡಿಯೋ ನೋಡಿದ ನೆಟ್ಟಿಗರು ಬಹುಶಃ ಹಾವಿನ ಹೊಟ್ಟೆ ತುಂಬಿರಬಹುದು. ಹಾಗಾಗಿಯೇ ಅದು ಆ ಹಾವನ್ನು ವಾಪಾಸ್ ಬಾಯಿಯಿಂದ ಹೊರಹಾಕಿದೆ ಎಂದಿದ್ದಾರೆ. ಇನ್ನೊಬ್ಬರು, ಸುತ್ತಲೂ ಜನರು ನೆರೆದಿದ್ದರಿಂದ ಈ ರೀತಿ ಮಾಡಿರಬಹುದು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ