‘ಬಸವ ಪ್ರಶಸ್ತಿ ಪ್ರದಾನ ಮಾಡಲಿರುವ ಸಿಎಂ ಬೊಮ್ಮಾಯಿ; ಅಂದೇ ಪಂಚಮಸಾಲಿ ಮೀಸಲಾತಿಯ ಆಡಳಿತಾತ್ಮಕ ಘೋಷಣೆ ಸಾಧ್ಯತೆ’
ವರ್ಷಾಚರಣೆಗೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಬರುತ್ತಾರೆ. ಸಿಎಂ ಬೊಮ್ಮಾಯಿಗೆ ಅಂದು ಮತ್ತೊಮ್ಮೆ ಹಕ್ಕೊತ್ತಾಯ ಮಾಡ್ತೇವೆ. ಸಿಎಂ ಅಂದೇ ಮೀಸಲಾತಿಯ ಆಡಳಿತಾತ್ಮಕ ಘೋಷಣೆ ಸಾಧ್ಯತೆ ಇದೆ ಎಂದು ಕೂಡಲಸಂಗಮದಲ್ಲಿ ಬಸವ ಜಯಮೃತ್ಯುಂಜಯಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ: ಪಂಚಮಸಾಲಿ ಮೀಸಲಾತಿ ಹೋರಾಟದ ಪಾದಯಾತ್ರೆಯ ವರ್ಷಾಚರಣೆ ಜನವರಿ 14 ರಂದು ನಡೆಯಲಿದೆ. ಅದೇ ದಿನದಂದು ಈ ವರ್ಷದ ರಾಷ್ಟ್ರೀಯ ಬಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲಾಗುವುದು. ಜ.14ರಂದು ರಾಷ್ಟ್ರೀಯ ಬಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲಾಗುವುದು. ಕೂಡಲಸಂಗಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ದೇಗುಲಗಳನ್ನ ಕಾನೂನು ಕಟ್ಟುಪಾಡುಗಳಿಂದ ಮುಕ್ತಗೊಳಿಸುವ ವಿಚಾರವಾಗಿ ಕೂಡಲಸಂಗಮದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿ ಬಹಳ ಗೊಂದಲ ಇವೆ, ಈ ಬಗ್ಗೆ ನಮಗೆಲ್ಲ ಆತಂಕ ಇದ್ದೇ ಇದೆ. ಅನೇಕ ದಲಿತ, ಹಿಂದುಳಿದ ಸಮಾಜಗಳು ಮುಕ್ತ ಪ್ರವೇಶಕ್ಕೆ ತೊಂದರೆ ಆಗಬಹುದು. ಈಗಿನಂತೆ ಮುಕ್ತ ಪ್ರವೇಶಕ್ಕೆ ತೊಂದ್ರೆ ಆಗಬಹುದು ಎಂಬ ಅನುಮಾನ ಇದೆ. ಯಾವುದೂ ಸ್ಪಷ್ಟವಾಗಿ ಗೊತ್ತಿಲ್ಲ ಎಂದು ಜಯಮೃತ್ಯುಂಜಯ ಶ್ರೀ ಹೇಳಿದ್ದಾರೆ.
ಕೇವಲ ಹಿಂದೂ ಧಾರ್ಮಿಕ ದೇವಸ್ಥಾನಗಳು ಸ್ವತಂತ್ರ ಅಷ್ಟೇ ಅಲ್ಲ. ಅನೇಕ ಲಿಂಗಾಯತರ ಕ್ಷೇತ್ರ ಮುಜರಾಯಿ ಇಲಾಖೆಗೆ ಬರುತ್ತಿವೆ. ಇದರಿಂದಾಗಿ ನಮ್ಮ ಮೂಲ ಶರಣರ ವಿಚಾರಗಳಿಗೆ ಹಿನ್ನಡೆ ಆಗ್ತಿದೆ. ಏನೇ ಸ್ವತಂತ್ರಗೊಳಿಸಿದರೂ ಎಲ್ಲರಿಗೂ ಮುಕ್ತ ಪ್ರವೇಶ ಇರಬೇಕು ಎಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ವರ್ಷಾಚರಣೆಗೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಬರುತ್ತಾರೆ. ಸಿಎಂ ಬೊಮ್ಮಾಯಿಗೆ ಅಂದು ಮತ್ತೊಮ್ಮೆ ಹಕ್ಕೊತ್ತಾಯ ಮಾಡ್ತೇವೆ. ಸಿಎಂ ಅಂದೇ ಮೀಸಲಾತಿಯ ಆಡಳಿತಾತ್ಮಕ ಘೋಷಣೆ ಸಾಧ್ಯತೆ ಇದೆ ಎಂದು ಕೂಡಲಸಂಗಮದಲ್ಲಿ ಬಸವ ಜಯಮೃತ್ಯುಂಜಯಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನವರಿ 14 ರಂದು ಸಿಎಂ ಮೀಸಲಾತಿ ಘೋಷಣೆ ಮಾಡಬಹುದು ಮುಖ್ಯಮಂತ್ರಿಗಳು ಪಂಚಮಸಾಲಿಗೆ 2ಎ ಮೀಸಲಾತಿಯ ಆಡಳಿತಾತ್ಮಕ ಘೋಷಣೆ ಸಾಧ್ಯತೆ ಇದೆ. ಅಷ್ಟರ ಮಟ್ಟಿಗೆ ನಮ್ಮ ಹೋರಾಟ ಕಿಚ್ಚು ಗಮನ ಸೆಳೆದಿದೆ. ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಬಸವರಾಜ ಬೊಮ್ಮಾಯಿ ಅವರಂತೆ ಯಾವ ಮುಖ್ಯಮಂತ್ರಿಗಳು ಸ್ಪಂದಿಸಿಲ್ಲ. ಮೀಸಲಾತಿ ವಿಳಂಬದಿಂದ ಬಿಜೆಪಿಗೆ ಚುನಾವಣೆ ಹಿನ್ನೆಡೆ ಆಗಿದೆ. ಬೆಳಗಾವಿ ಲೋಕಸಭೆ, ವಿಧಾನಸಭೆ ಉಪ ಚುನಾವಣೆಗಳು, ಪರಿಷತ್ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿನ್ನೆಡೆ ಆಗಿದೆ. ಇದಕ್ಕೆ ಕಾರಣ ಪಂಚಮಸಾಲಿ ಮೀಸಲಾತಿ ಹೋರಾಟದ ಕಾವು, ಕಿಚ್ಚು ಪ್ರತಿಯೊಬ್ಬ ಯುವಕರಲ್ಲಿ ಮೂಡಿದೆ.
ಆ ಕಾರಣಕ್ಕೆ ಜನವರಿ 14 ರಂದು ಸಿಎಂ ಕೂಡಲಸಂಗಮಕ್ಕೆ ಬರ್ತಿದ್ದಾರೆ. ಆವತ್ತೆ ಮುಖ್ಯಮಂತ್ರಿಗಳು ಮೀಸಲಾತಿ ಘೋಷಣೆ ಮಾಡಬಹುದು. ಸಮಾಜದ ವಿಚಾರದಲ್ಲಿ ಹಿಂದಿನ ಸಿಎಂಗಳು ಸ್ಪಂದಿಸಿರಲಿಲ್ಲ. ಬೊಮ್ಮಾಯಿ ಅವರು ಸ್ಪಂದಿಸುತ್ತಿದ್ದಾರೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದವರು ಸರ್ವೆ ಮಾಡ್ತಿದ್ದಾರೆ. ಆ ಸರ್ವೆ ರಿಪೋರ್ಟ್ ಬಂದ್ರೆ ಯುಗಾದಿ ಒಳಗಾಗಿ ನಮಗೆ ಸಿಹಿ ಸುದ್ದಿಯನ್ನು ಸರ್ಕಾರ ಕೊಡಬಹುದು ಎಂದು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಸ್ವಾಮೀಜಿ ಹೇಳಿದ್ದಾರೆ.
ಸಂಸದ ಸುರೇಶ್, ಸಚಿವ ಅಶ್ವತ್ಥ್ ನಾರಾಯಣ ಜಟಾಪಟಿ ವಿಚಾರ; ವಿಜಯಾನಂದ ಕಾಶಪ್ಪನವರ ಪ್ರತಿಕ್ರಿಯೆ ಸಂಸದ ಸುರೇಶ್, ಸಚಿವ ಅಶ್ವತ್ಥ್ ನಾರಾಯಣ ಜಟಾಪಟಿ ವಿಚಾರವಾಗಿ ಕೂಡಲಸಂಗಮದಲ್ಲಿ ವಿಜಯಾನಂದ ಕಾಶಪ್ಪನವರ ಪ್ರತಿಕ್ರಿಯೆ ನೀಡಿದ್ದಾರೆ. ಮಾತನಾಡುವ ಸಮಯದಲ್ಲಿ ಬಾಯಿ ಕೂಡ ಹಿಡಿತದಲ್ಲಿರಬೇಕು. ಕಾಂಗ್ರೆಸ್ ಸಾಧನೆ ಏನು ಎಂದು ಆ ಜಿಲ್ಲೆಯ ಜನರಿಗೆ ಗೊತ್ತಿದೆ. ಪಕ್ಷದ ಬಗ್ಗೆ ಕೀಳಾಗಿ ಮಾತನಾಡಿದರೆ ಸಿಟ್ಟು ಬರುವುದು ಸಹಜ. ಅದಕ್ಕೆ ಪ್ರತ್ಯುತ್ತರ ಕೊಟ್ಟಿದ್ದಾರೆ, ಅಲ್ಲೇನು ಕೈ-ಕೈ ಮಿಲಾಯಿಸಿಲ್ಲ ಎಂದು ಕೂಡಲಸಂಗಮದಲ್ಲಿ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.
ಇದನ್ನೂ ಓದಿ: ‘ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕೊಡುವುದಾಗಿ ಹೇಳಿದ್ದೆ; ಮಾತು ಉಳಿಸಿಕೊಳ್ಳುತ್ತೇವೆ’
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ: ಸರ್ಕಾರಕ್ಕೆ ಲೈಫ್ಲೈನ್ ನೀಡಿದ್ದೇವೆ ಎಂದ ವಚನಾನಂದ ಸ್ವಾಮೀಜಿ