ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಮಾತೃ ವಿಯೋಗ

ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಅವರ ತಾಯಿ ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಂದು ಕೊನೆಯುಸೆರೆಳೆದಿದ್ದಾರೆ.

ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಮಾತೃ ವಿಯೋಗ
ಸುಶಿಲಾಬಾಯಿ
Edited By:

Updated on: Jan 15, 2024 | 9:17 PM

ಬಾಗಲಕೋಟೆ, (ಜನವರಿ 15): ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಅವರ ತಾಯಿ ನಿಧನರಾಗಿದ್ದಾರೆ. ಅನಾರೋಗ್ಯದಿಂದದಾಗಿ ಚಿಕಿತ್ಸೆ ಪಡೆಯುತ್ತಿದ್ದ ನಿರಾಣಿ ಅವರ ತಾಯಿ ಸುಶಿಲಾಬಾಯಿ(78) ಇಂದು (ಜನವರಿ 15) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಹತ್ತು ದಿನಗಳಿಂದ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗಿಲ್ಲ.

ಪತಿ‌ ರುದ್ರಪ್ಪ ನಿರಾಣಿ, ಐವರು ಗಂಡು ಮಕ್ಕಳು,ಇಬ್ಬರು ಹೆಣ್ಣು‌ಮಕ್ಕಳು, ಐವರು ಸೊಸೆಯಂದಿರು 14 ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬಸವಹಂಚಿನಾಳ ಗ್ರಾಮದಲ್ಲಿ‌ ‌ನೆಲೆಸಿದ್ದರು. ಇನ್ನು ನಾಳೆ (ಜನವರಿ 16) ಮದ್ಯಾಹ್ನ 1 ಗಂಟೆಗೆ ಸ್ವಗ್ರಾಮ ಬಸವಹಂಚಿನಾಳ‌ದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಸುಶಿಲಾಬಾಯಿ ಕೃಷಿಪ್ರಧಾನ ಕುಟುಂಬದ ನಿರಾಣಿ ಪರಿವಾರದ ಮನೆಯೊಡತಿಯಾಗಿದ್ದರು. ಇದೀಗ ಅವರ ಅಗಲಿಕೆಯಿಂದ ನಿರಾಣಿ ಅವರ ಅಪಾರ ಬಂಧು ಬಳಗ ದುಃಖದಲ್ಲಿ‌ ಮುಳುಗಿದೆ.