ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಗೆ ಮಾಡಿಸಿದ ಕಾರ್ಯಕರ್ತರಿಗೆ ಗಿಫ್ಟ್; ಸಿದ್ದರಾಮಯ್ಯ ಕ್ಷೇತ್ರದಲ್ಲಿ ಬಂಪರ್ ಆಫರ್!
5 ಸಾವಿರ ಸದಸ್ಯತ್ವ ಮಾಡಿಸಿದ್ರೆ ಮೊದಲ ಬಹುಮಾನವಾಗಿ ಫ್ರಿಡ್ಜ್ ನೀಡಲಾಗುತ್ತದೆ. ಮೂರು ಸಾವಿರ ಸದಸ್ಯತ್ವ ಮಾಡಿಸಿದರೆ ಎಲ್ಇಡಿ ಟಿವಿ ಹಾಗೂ ಎರಡು ಸಾವಿರ ಸದಸ್ಯತ್ವ ಮಾಡಿಸಿದರೆ ಮೊಬೈಲ್ ಗಿಫ್ಟ್ ನೀಡಲಾಗುತ್ತಿರುವ ಬಗ್ಗೆ ತಿಳಿದುಬಂದಿದೆ.
ಬಾಗಲಕೋಟೆ: ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಗೆ ಮಾಡಿಸಿದ ಕಾರ್ಯಕರ್ತರಿಗೆ ಪ್ರೈಜ್ ನೀಡುವ ಮೂಲಕ ಮಾಜಿ ಸಿಎಂ ಹಾಗೂ ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಬಂಪರ್ ಆಫರ್ ಘೋಷಿಸಲಾಗಿದೆ. ಬ್ಲಾಕ್ ಕಾಂಗ್ರೆಸ್ನಿಂದ ಫ್ರಿಡ್ಜ್, LED ಟಿವಿ, ಮೊಬೈಲ್ ಗಿಫ್ಟ್ ಕೊಡುವ ಬಗ್ಗೆ ಮಾಹಿತಿ ಲಭಿಸಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದಲ್ಲಿ ಬಂಪರ್ ಆಫರ್ ನೀಡಲಾಗಿದೆ. 5 ಸಾವಿರ ಸದಸ್ಯತ್ವ ಮಾಡಿಸಿದ್ರೆ ಮೊದಲ ಬಹುಮಾನವಾಗಿ ಫ್ರಿಡ್ಜ್ ನೀಡಲಾಗುತ್ತದೆ. ಮೂರು ಸಾವಿರ ಸದಸ್ಯತ್ವ ಮಾಡಿಸಿದರೆ ಎಲ್ಇಡಿ ಟಿವಿ ಹಾಗೂ ಎರಡು ಸಾವಿರ ಸದಸ್ಯತ್ವ ಮಾಡಿಸಿದರೆ ಮೊಬೈಲ್ ಗಿಫ್ಟ್ ನೀಡಲಾಗುತ್ತಿರುವ ಬಗ್ಗೆ ತಿಳಿದುಬಂದಿದೆ. ಮಾರ್ಚ್ 1ರಿಂದ ಆರಂಭವಾಗಿರುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ, ಮಾರ್ಚ್ 31ರ ವರೆಗೆ ನಡೆಯಲಿದೆ.
ಕಾಂಗ್ರೆಸ್ನ ಈ ಸದಸ್ಯತ್ವ ಅಭಿಯಾನ ವಿವಾದಕ್ಕೆ ಕಾರಣವಾಗಿದೆ. ಹೆಚ್ಚು ಸದಸ್ಯರ ನೋಂದಣಿ ಮಾಡಿಸಿದವರಿಗೆ ಬಹುಮಾನ ಎಂಬ ಅಭಿಯಾನ ಟೀಕೆಗೆ ಗುರಿಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಡಿಜಿಟಲ್ ಸದಸ್ಯತ್ವಕ್ಕೆ ಟೀಕೆ ವ್ಯಕ್ತವಾಗಿದೆ. ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ನೋಂದಣಿಗೆ ಬಹುಮಾನ ಘೋಷಣೆ ಮಾಡಲಾಗಿದೆ. ಫ್ರಿಡ್ಜ್, LED ಟಿವಿ, ಮೊಬೈಲ್ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಬಹುಮಾನದ ಆಸೆಗೆ ಸದಸ್ಯತ್ವ ಪಡೆದವರಿಗೂ ಕಾರ್ಯಕರ್ತರಿಂದ ಉಡುಗೊರೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಡಿಜಿಟಲ್ ಸದಸ್ಯತ್ವ ಪಡೆದರೆ ಕಾರ್ಯಕರ್ತರಿಂದ ಕಾಣಿಕೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಯಚೂರು ಜಿಲ್ಲೆಗೆ MSIL ಬಾರ್‌ಗಳು ಬೇಕೆಂದು ಪಟ್ಟು
ಇತ್ತ ರಾಯಚೂರು ಜಿಲ್ಲೆಗೆ MSIL ಬಾರ್‌ಗಳು ಬೇಕೆಂದು ಪಟ್ಟು ಹಿಡಿಯಲಾಗಿದೆ. ರಾಯಚೂರಿನ ಕೆಡಿಪಿ ಸಭೆಯಲ್ಲಿ ಶಾಸಕರಿಂದ ಬೇಡಿಕೆ ಕೇಳಿಬಂದಿದೆ. ಶಾಸಕ ಬಸನಗೌಡ ದದ್ದಲ್‌ರಿಂದ ಬಾರ್ ಬೇಕೆಂದು ಪಟ್ಟು ಹಿಡಿದು ಬೇಡಿಕೆ ಕೇಳಿಬಂದಿದೆ. ರಾಯಚೂರು ಗ್ರಾಮೀಣ ಶಾಸಕ ಆಗಿರುವ ಬಸನಗೌಡ ದದ್ದಲ್, ಸಚಿವ ಮುನೇನಕೊಪ್ಪ ನೇತೃತ್ವದ ಸಭೆಯಲ್ಲಿ ಬಾರ್‌ಗೆ ಬೇಡಿಕೆ ಇಟ್ಟಿದ್ದಾರೆ.
ಅವಧಿಗೆ ಮೊದಲೇ ಕರ್ನಾಟಕದಲ್ಲಿ ಚುನಾವಣೆ ಬರುವ ಸಾಧ್ಯತೆ: ಮಧು ಬಂಗಾರಪ್ಪ ಹೇಳಿಕೆ
ಅವಧಿಗೆ ಮೊದಲೇ ರಾಜ್ಯದಲ್ಲಿ ಚುನಾವಣೆ ಬರುವ ಸಾಧ್ಯತೆ ಇದೆ. ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಿದೆ. ಈ ಕುರಿತು ಈಗಾಗಲೇ ರಾಹುಲ್ ಗಾಂಧಿ ಉತ್ತರ ನೀಡಿದ್ದಾರೆ ಎಂದು ಶಿವಮೊಗ್ಗದಲ್ಲಿ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಶನಿವಾರ ಹೇಳಿಕೆ ನೀಡಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಎಚ್ಚರಿಕೆಯಿಂದ ಮಾತಾಡಬೇಕು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರಿಗೆ ಸಮಸ್ಯೆಯಾಗಿಲ್ಲ. ಬಿಜೆಪಿ ಸರ್ಕಾರದಲ್ಲಿ ಜಾರಿ ಮಾಡಿದ ಕಾನೂನಿನಿಂದ ಸಮಸ್ಯೆ ಎಂದು ಇದೇ ವೇಳೆ ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಮಾಜಿ ಶಾಸಕ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ಬಗರ್‌ಹುಕುಂ ರೈತರಿಗೆ ಸಂಕಷ್ಟ ಎದುರಾಗಿದೆ. 11 ಸಾವಿರ ರೈತರು ಸಾಗುವಳಿ ಹಕ್ಕು ಪತ್ರಕ್ಕಾಗಿ ಪರದಾಡ್ತಿದ್ದಾರೆ. ರೈತರಿಗೆ ಅರಣ್ಯ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಕೂಡಲೇ ಅರಣ್ಯ ಹಕ್ಕು ಕಾಯ್ದೆ ಬದಲಾವಣೆ ಮಾಡಬೇಕು. ಬಿ.ಎಸ್. ಯಡಿಯೂರಪ್ಪ ಕೂಡ 2012ರ ಅರಣ್ಯ ಹಕ್ಕು ಕಾನೂನು ವಿರುದ್ಧ ಧ್ವನಿ ಎತ್ತಿದ್ದಾರೆ. ಇದು ರೈತರಿಗೆ ಮಾರಕ ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಸಿಎಂ ಆಗಿದ್ದಾಗ ಈ ಕಾನೂನು ಜಾರಿ ಮಾಡಲಾಗಿತ್ತು. ಈ ಬಗ್ಗೆ ಸಿಎಂ ಬೊಮ್ಮಾಯಿ ಜತೆ ಬಿಎಸ್‌ವೈ ಚರ್ಚಿಸಬೇಕು. ರೈತರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕಾಗಿದೆ. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಮಧು ಬಂಗಾರಪ್ಪ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಅವಧಿಗೆ ಮೊದಲೇ ಕರ್ನಾಟಕದಲ್ಲಿ ಚುನಾವಣೆ ಬರುವ ಸಾಧ್ಯತೆ: ಮಧು ಬಂಗಾರಪ್ಪ ಹೇಳಿಕೆ
ಇದನ್ನೂ ಓದಿ: ಯಡಿಯೂರಪ್ಪರನ್ನು ಹಾಡಿಹೊಗಳಿದ ಕಾಂಗ್ರೆಸ್ ನೂತನ ಎಂಎಲ್ಸಿ ಮಂಜುನಾಥ್ ಭಂಡಾರಿ: ಮಧು ಬಂಗಾರಪ್ಪ ಸೇರಿ ಹಲವರಿಗೆ ಅಚ್ಚರಿ
Published On - 6:28 pm, Sat, 12 March 22