RSS ಕಾರ್ಯಕರ್ತರ ಮೇಲೆ ಎಫ್‌ಐಆರ್ ಪ್ರಕರಣ: ದೂರು ದಾಖಲಿಸಿದ್ದ ಕಾಂಗ್ರೆಸ್​ ಕಾರ್ಯಕರ್ತನ ಉಚ್ಛಾಟನೆ

| Updated By: ಸಾಧು ಶ್ರೀನಾಥ್​

Updated on: Oct 22, 2021 | 11:33 AM

ಜಾತಿ ನಿಂದನೆ, ಅಶ್ಲೀಲ ಪದ ಬಳಕೆ ಮಾಡಿದ್ದಾಗಿ ಫಕೀರಪ್ಪ ಮಾದರ ನಾಲ್ವರು ಆರ್ ಎಸ್ ಎಸ್ ಕಾರ್ಯಕರ್ತರ ವಿರುದ್ಧ ದೂರು ನೀಡಿದ್ದರು. ಬಿಜೆಪಿ ಪಕ್ಷದ ಆಂತರಿಕ ಕಲಹದಲ್ಲಿ ಮೂಗುತೂರಿಸಿದ್ದಕ್ಕಾಗಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಾಜು ಮನ್ನಿಕೇರಿ ಅವರು ಫಕೀರಪ್ಪರನ್ನು ಉಚ್ಛಾಟನೆ ಮಾಡಿದ್ದರು.

RSS ಕಾರ್ಯಕರ್ತರ ಮೇಲೆ ಎಫ್‌ಐಆರ್ ಪ್ರಕರಣ: ದೂರು ದಾಖಲಿಸಿದ್ದ ಕಾಂಗ್ರೆಸ್​ ಕಾರ್ಯಕರ್ತನ ಉಚ್ಛಾಟನೆ
RSS ಕಾರ್ಯಕರ್ತರ ಮೇಲೆ ಎಫ್‌ಐಆರ್ ಪ್ರಕರಣ: ದೂರು ದಾಖಲಿಸಿದ್ದ ಕಾಂಗ್ರೆಸ್​ ಕಾರ್ಯಕರ್ತನ ಉಚ್ಛಾಟನೆ
Follow us on

ಬಾಗಲಕೋಟೆ: ಆರ್​ಎಸ್​ಎಸ್ ಕಾರ್ಯಕರ್ತರ ಮೇಲೆ ಪೊಲೀಸ್​ ದೂರು (ಎಫ್‌ಐಆರ್) ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ದಾಖಲಿಸಿದ್ದ ಪಕ್ಷದ ಕಾರ್ಯಕರ್ತನನ್ನು ಕಾಂಗ್ರೆಸ್ ಪಕ್ಷ ಉಚ್ಚಾಟನೆ ಮಾಡಿದೆ. ಫಕೀರಪ್ಪ ಮಾದರ ಉಚ್ಚಾಟಿಸಿತ ಕಾಂಗ್ರೆಸ್ ಪಕ್ಷದ ಸದಸ್ಯ. ಇವರು ಕಲಾದಗಿ ಬ್ಲಾಕ್ ಪರಿಶಿಷ್ಟ ಜಾತಿ (ಎಸ್‌ಸಿ) ವಿಭಾಗದ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್‌ಗೆ ಮುಜುಗರ ತಂದ ಆರೋಪದ ಮೇರೆಗೆ ಉಚ್ಛಾಟನೆಗೊಂಡಿದ್ದಾರೆ.

ಅಕ್ಟೋಬರ್ 17ರಂದು ಬಾಗಲಕೋಟೆಯಲ್ಲಿ RSS ಪಥಸಂಚಲನ ನಡೆಸಿತ್ತು. ಈ ವೇಳೆ ತನ್ನನ್ನು ನಿಂದಿಸಿದ್ದಾರೆಂದು ಫಕೀರಪ್ಪ ದೂರು ಬಾಗಲಕೋಟೆಯ ಶಹರ ಠಾಣೆಗೆ ದೂರು ನೀಡಿದ್ದರು. ಈ ವೇಳೆ ತಮ್ಮ ವಿರುದ್ಧ ಜಾತಿ ನಿಂದನೆ, ಅಶ್ಲೀಲ ಪದ ಬಳಕೆ ಮಾಡಿದ್ದಾಗಿ ಫಕೀರಪ್ಪ ಮಾದರ ನಾಲ್ವರು ಆರ್ ಎಸ್ ಎಸ್ ಕಾರ್ಯಕರ್ತರ ವಿರುದ್ಧ ದೂರು ನೀಡಿದ್ದರು. ಬಿಜೆಪಿ ಪಕ್ಷದ ಆಂತರಿಕ ಕಲಹದಲ್ಲಿ ಮೂಗುತೂರಿಸಿದ್ದಕ್ಕಾಗಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಾಜು ಮನ್ನಿಕೇರಿ ಅವರು ಫಕೀರಪ್ಪರನ್ನು ಉಚ್ಛಾಟನೆ ಮಾಡಿದ್ದರು.

ಆರ್ ಎಸ್ ಎಸ್ ಕಾರ್ಯಕರ್ತರಾದ ಸಂತೋಷ ಹೊಕ್ರಾಣಿ, ಬಸವರಾಜ ಕಟಗೇರಿ, ಅಶೋಕ ಮುತ್ತಿನಮಠ, ರಾಜು ಗೌಳಿ ವಿರುದ್ಧ‌ ಬಾಗಲಕೋಟೆ ಶಹರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಪ್ರಭಾವದಿಂದ ದೂರು ನೀಡಲಾಗಿತ್ತು ಎಂಬ ಮಾಹಿತಿಯಿದೆ.

Also Read:
ಭಾರತದಲ್ಲಿ ಕೊವಿಡ್‌ಗೆ 50 ಲಕ್ಷ ಜನ ಬಲಿ, ಆದ್ರೆ 100 ಕೋಟಿ ಡೋಸ್ ನೀಡಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

Haveri ಜಿಲ್ಲೆಯ ಹಲವೆಡೆ ಹಳ್ಳ ಕೊಳ್ಳಗಳು ಭರ್ತಿ| HaveriRain |TV9 Kannada

(​​complaint against rss member congress member dismissed from the party in bagalkot)

Published On - 11:24 am, Fri, 22 October 21