ಬಾಗಲಕೋಟೆ: ಭೂಮಿಯ ಮೇಲಿನ ವಿಸ್ಮಯ ನೋಡೋದೆ ಅದ್ಭುತ ಅಂದ ಮೇಲೆ ಆಕಾಶದಲ್ಲಿರುವ (Sky) ನಕ್ಷತ್ರ, ಧೂಮಕೇತು (Comet) ಸೇರಿದಂತೆ ಅನೇಕ ಕೌತುಕಗಳು ನೋಡೋದು ಇನ್ನೂ ಕುತೂಹಲ. ಸಾವಿರಾರು ವರ್ಷಗಳಿಗೊಮ್ಮೆ ಇಂತಹ ಅದ್ಭುತಗಳು ನಡೆಯುತ್ತಿದ್ದು ನೋಡೋದೆ ಪುಣ್ಯ ನೋಡಿದವರೇ ಧನ್ಯ. ಅಂತಹ ಅವಕಾಶ ಇದೀಗ ಜನರಿಗೆ ಮತ್ತೊಮ್ಮೆ ಸಿಕ್ಕಿದೆ. ಹೌದು ಈಗ ಜನರಿಗೆ ಹಸಿರು ಧೂಮಕೇತುವನ್ನು (Green Comet) ಬರಿಗಣ್ಣಿನಿಂದ ನೋಡುವ ಸದಾವಕಾಶ ದೊರೆತಿದೆ. ಪ್ರತಿದಿನ ಅಕಾಶ ಕಾಯದಲ್ಲಿ ಒಂದಿಲ್ಲೊಂದು ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ವಿಜ್ಞಾನಿಗಳು ಅವುಗಳ ಮೇಲೆ ನಿರಂತರ ಅಧ್ಯಯನ ಕೂಡಾ ಕೈಗೊಂಡಿರುತ್ತಾರೆ. ಹೀಗೆ ಕೆಲವೊಂದು ಅಧ್ಯಯನಗಳ ಪ್ರಕಾರ ಕೆಲವೊಂದು ಘಟನೆಗಳ ಬಗ್ಗೆ ವಿಜ್ಞಾನಿಗಳು ಮುನ್ಸೂಚನೆ ನೀಡುತ್ತಿರುತ್ತಾರೆ. ಭೂಮಂಡಲದಲ್ಲಿ ನಡೆಯುವ ಕೌತುಕಗಳ ಬಗ್ಗೆ ಮುಂಚಿತವಾಗಿಯೇ ವಿಜ್ಞಾನಿಗಳು ಅರಿತುಕೊಂಡಿರ್ತಾರೆ. ಹೀಗೆ ವಿಜ್ಞಾನಿಗಳು ಅರಿತುಕೊಂಡ ಕೌತುಕವೊಂದು ನಡೆದಿದ್ದು, ಇದು ಸುಮಾರು 50 ಸಾವಿರ ವರ್ಷಗಳಿಗೊಮ್ಮೆ ಮಾತ್ರ ನಡೆಯುತ್ತದೆ ಅನ್ನೋದೇ ವಿಶೇಷ.
ಹೌದು ಇದೇ ಫೆಬ್ರವರಿ 1, 2 ಹಾಗೂ 3 ರಂದು ಬೆಳಗ್ಗೆ 3 ಗಂಟೆಗೆ ಭೂಮಿಯ ಅತ್ಯಂತ ಸಮೀಪಕ್ಕೆ ಹಸಿರು ಧೂಮಕೇತುವೊಂದು ಬರಲಿದೆಯಂತೆ. ಹೀಗಾಗಿ ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ವಿಜ್ಞಾನ ಕಾಲೇಜು ಪ್ರಾಚಾರ್ಯರು ಸಾವಿರಾರು ವರ್ಷಗಳಿಗೊಮ್ಮೆ ಕಾಣುವ ಹಸಿರು ಧೂಮಕೇತು ನೋಡಲು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಸಲಹೆ ಕೊಟ್ಟಿದ್ದಾರೆ. ಬಾಗಲಕೋಟೆಯ (Bagalkot) ಬಸವೇಶ್ವರ ವಿದ್ಯಾವರ್ಧಕ ಸಂಘದ ವಿಜ್ಞಾನ ವಿದ್ಯಾಲಯದ ಪ್ರಾಚಾರ್ಯ ಸುಬ್ರಹ್ಮಣ್ಯ ಎಂ ಗಾಂವಕರ್ ಮಾಹಿತಿ ಹಂಚಿಕೊಂಡಿದ್ದಾರೆ.
ಫೆಬ್ರವರಿ 1, 2 ಹಾಗೂ 3 ರಂದು ರಾತ್ರಿ 3 ಗಂಟೆ ವೇಳೆ ಡ್ರಾಕೊ ನಕ್ಷತ್ರ ಪುಂಜದ ಬಳಿ ಹಸಿರು ಧೂಮಕೇತು ಕಾಣಲಿದೆಯಂತೆ. ಇದು 50 ಸಾವಿರ ವರ್ಷಕ್ಕೊಮ್ಮೆ ಕಾಣಿಸಲಿದೆ ಅನ್ನೋದು ಮತ್ತೊಂದು ವಿಶೇಷ. ಜೊತೆಗೆ ಈ ನಕ್ಷತ್ರ ಅದ್ಭುತ ದೃಶ್ಯವನ್ನು ಬರಿಗಣ್ಣಿನಿದ ಕೂಡಾ ನೋಡಬಹುದಂತೆ. ಈ ಅದ್ಭುತ ದೃಶ್ಯ ಪುನಃ 50 ಸಾವಿರ ವರ್ಷಗಳ ಬಳಿಕ ನೋಡೋಕೆ ಸಿಗಲಿದೆಯಂತೆ. ಹಾಗಾಗಿ ಈಗ ಸಿಕ್ಕಿರುವ ಅವಕಾಶವನ್ನು ಯಾರೂ ಮಿಸ್ ಮಾಡ್ಕೋಬೇಡಿ ಅಂತಾ ಪ್ರಾಚಾರ್ಯರು ಸಲಹೆ ನೀಡಿದ್ದಾರೆ.
ಇನ್ನು ಈ ಧೂಮಕೇತು ಸದ್ಯಕ್ಕೆ ಭೂಮಿಯಿಂದ ಸುಮಾರು 4 ಕೋಟಿ ಮೈಲು ದೂರದಲ್ಲಿರೋದರಿಂದ ಬರಿಗಣ್ಣಿಗೆ ಕಾಣಲಿದೆಯಂತೆ. ಉಳಿದಂತೆ ಈ ಧೂಮಕೇತು ಸಾಮಾನ್ಯವಾಗಿ ಭೂಮಿಯಿಂದ 12 ಕೋಟಿ ಮೈಲು ದೂರದಲ್ಲಿರುತ್ತದೆಯಂತೆ. ಈ ಬಗ್ಗೆ ಟಿವಿ 9 ಕನ್ನಡ ಡಿಜಿಟಲ್ ಜೊತೆ ಮಾತಾಡಿದ ಪ್ರಿನ್ಸಿಪಾಲರಾದ ಸುಬ್ರಹ್ಮಣ್ಯ ಗಾಂವಕರ್ ಅವರು ಮಾತನಾಡಿದ್ದಾರೆ.
“ಡ್ರಾಕೊ ನಕ್ಷತ್ರ ಪುಂಜದ ಬಳಿ ಫೆಬ್ರವರಿ 1, 2 ಹಾಗೂ 3 ರಂದು ರಾತ್ರಿ 3 ಗಂಟೆಗೆ ಹಸಿರು ಧೂಮಕೇತು ಮನುಷ್ಯರ ಬರಿಗಣ್ಣಿಗೆ ಕಾಣಿಸಲಿದೆ. ಸುಮಾರು 50 ಸಾವಿರ ವರ್ಷಗಳಿಗೊಮ್ಮೆ ಈ ಕೌತುಕ ಭೂಮಂಡಲದಲ್ಲಿ ಕಾಣಿಸುತ್ತದೆ. ಈ ಅದ್ಭುತ ದೃಶ್ಯ ಪುನಃ ಕಾಣಬೇಕೆಂದರೆ 50 ಸಾವಿರ ವರ್ಷಗಳವರೆಗೆ ಕಾಯಬೇಕು. ಸಾಮಾನ್ಯವಾಗಿ 12 ಕೋಟಿ ಮೈಲಿ ದೂರದಲ್ಲಿರುವ ಈ ಧೂಮಕೇತು ಸದ್ಯಕ್ಕೆ ಭೂಮಿಯಿಂದ ಕೇವಲ 4 ಕೋಟಿ ಮೈಲು ದೂರಕ್ಕೆ ಬಂದಿದೆ. ಹೀಗಾಗಿ ಇದು ಸದ್ಯ ಬರಿಗಣ್ಣಿಗೆ ಕಾಣೋಕೆ ಸಿಗ್ತಿದೆ. ಇನ್ನು ಇದನ್ನು ನೀಡಬೇಕೆಂದರೆ ಆಕಾಶದಲ್ಲಿ ಮೋಡಗಳು ಇರಬಾರದು. ಆಕಾಶ ಕ್ಲಿಯರ್ ಆಗಿರಬೇಕು ಅಂತಾರೆ ಪ್ರಾಚಾರ್ಯ ಸುಬ್ರಹ್ಮಣ್ಯ ಗಾಂವಕರ್. ಒಟ್ಟಿನಲ್ಲಿ ಆಕಾಶದ ಕೌತುಕ ನೋಡೋದೆ ಕುತೂಹಲ. ಸದ್ಯಕ್ಕಂತೂ ಹಸಿರು ಧೂಮಕೇತು ನೋಡುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಮಿಸ್ ಮಾಡದೇ ನೋಡಿ.
ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ