ಬೆಂಗಳೂರಿನಲ್ಲಿ ಮ್ಯಾನ್ ಹೋಲ್‌ಗೆ ಇಳಿದಿದ್ದ ವ್ಯಕ್ತಿ ಸಾವು ಕೇಸ್: ನಾಲ್ವರ ಬಂಧನ
ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮ್ಯಾನ್‌ಹೋಲ್‌ಗೆ ಇಳಿದ ಕಾರ್ಮಿಕನೊಬ್ಬ ಉಸಿರುಗಟ್ಟಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಸಾವಿರ ರೂ. ಹಣದ ಆಸೆ ತೋರಿಸಿ ಮ್ಯಾನ್ ಹೋಲ್‌ಗೆ ಇಳಿಸಿ ವ್ಯಕ್ತಿ ಸಾವಿಗೆ ನಾಲ್ವರು ಕಾರಣರಾಗಿದ್ದಾರೆ.

ಬೆಂಗಳೂರು, ಜುಲೈ 23: ಜುಲೈ 21 ರಂದು ಮ್ಯಾನ್ ಹೋಲ್‌ಗೆ ಇಳಿದಿದ್ದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನಪ್ಪಿದ್ದ (death) ಘಟನೆ ಬೆಂಗಳೂರಿನ (Bengaluru) ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಆ ವ್ಯಕ್ತಿಯ ಸಾವಿಗೆ ಕಾರಣವಾದವರು ನಾಲ್ಕು ಜನರು. ಸಾವಿರ ರೂ. ಹಣ ಕೊಟ್ಟು ಮ್ಯಾನ್ ಹೋಲ್‌ಗೆ ಇಳಿಸಿ ಆ ಸಾವಿಗೆ ಕಾರಣವಾದವರು ಇದೀಗ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ. ಆಶ್ರಯ ನಗರದ ನಿವಾಸಿಗಳಾದ ನಾಗರಾಜ್, ಆಂಥೋನಿ, ದೇವರಾಜ್ ಮತ್ತು ಆನಂದ್ ಬಂಧಿತರು.
ನಾಲ್ವರ ಬಂಧನ
ಮ್ಯಾನ್ ಹೋಲ್‌ಗೆ ಕಾರ್ಮಿಕರನ್ನ ಇಳಿಸಬಾರದೆಂಬ ಸುಪ್ರೀಂಕೋರ್ಟ್ ಕಾನೂನು ದೇಶದಲ್ಲಿ ದೊಡ್ಡ ಕ್ರಾಂತಿಗೆ ಕಾರಣವಾಗಿತ್ತು. ಆದರೂ ಇಂತ ಕೆಲಸಗಳು ಆಗಾಗ ನಡೆಯುತ್ತಿರುತ್ತವೆ. ಜುಲೈ 21 ರಂದು ಬೆಂಗಳೂರನ ಆರ್‌ಎಂಸಿ ಯಾರ್ಡ್ನ ಆಶ್ರಯ ನಗರದಲ್ಲಿ ಪುಟ್ಟಸ್ವಾಮಿ ಎಂಬಾತ ಹಣದ ಆಸೆಗೆ ಮ್ಯಾನ್ ಹೋಲ್‌ಗೆ ಇಳಿದು ತನ್ನ ಜೀವವನ್ನೇ ಕಳೆದುಕೊಂಡಿದ್ದ. ಈ ಕೇಸ್ ಸಂಬಂಧ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಮ್ಯಾನ್ಹೋಲ್ ದುರಂತ: ಓರ್ವ ಕಾರ್ಮಿಕ ಸಾವು
ಬಂಧಿತ ನಾಲ್ವರು ಆರೋಪಿಗಳು 1500 ನೀಡಿ ಪುಟ್ಟಸ್ವಾಮಿಯನ್ನ ಮ್ಯಾನ್ ಹೋಲ್‌ಗೆ ಇಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ಲೀನ್ ಮಾಡಲು ಹೇಳಿದ್ದರು. ಆದರೆ ಸುಮಾರು ಅರ್ಧ ಗಂಟೆ ಒಳಗಿದ್ದ ಪುಟ್ಟಸ್ವಾಮಿಗೆ ಉಸಿರುಗಟ್ಟಿದಂತಾಗಿ ಹೊರಬಂದಿದ್ದರು. ಬಳಿಕ ಮನೆಯಲ್ಲಿ ಮಲಗಿದ್ದ ಪುಟ್ಟಸ್ವಾಮಿ ಬೆಳಗ್ಗೆ ಆಗುವಷ್ಟರಲ್ಲಿ ಮೃತಪಟ್ಟಿದ್ದಾರೆ. ಇದು ಕಾನೂನು ಉಲ್ಲಂಘನೆ ಕೆಲಸದ ಜೊತೆಗೆ ವ್ಯಕ್ತಿಯೊಬ್ಬನ ಸಾವಿಗೂ ಕಾರಣವಾಗಿತ್ತು. ಹೀಗಾಗಿ ನಾಲ್ವರನ್ನೂ ಬಂಧಿಸಲಾಗಿದೆ.
ಸದ್ಯ ಆರ್‌ಎಂಸಿ ಯಾರ್ಡ್ ಪೊಲೀಸರು ನಾಲ್ವರನ್ನ ಜೈಲಿಗಟ್ಟಿದ್ದಾರೆ. ಆದರೆ ಹಣದ ಆಸೆಗೆ ಮ್ಯಾನ್ ಹೋಲ್‌ಗೆ ಇಳಿದು ಪುಟ್ಟಸ್ವಾಮಿ ಜೀವವನ್ನೇ ಕಳೆದುಕೊಂಡಿದ್ದಾರೆ.
ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ಸಾವು
ಬೆಂಗಳೂರಿನಲ್ಲಿ ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿರುವಂತ ಘಟನೆ ಇಂದು ಬೆಳಗ್ಗೆ 6 ಗಂಟೆಗೆ ನಡೆದಿದೆ. ಬೇಗೂರು ಠಾಣೆಯ ನಿಜಾಮುದ್ದಿನ್(44) ಮೃತ ಹೆಡ್ ಕಾನ್ಸ್ಟೇಬಲ್.
ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ
ನಿಜಾಮುದ್ದಿನ್ ಆಡುಗೋಡಿ ಪೊಲೀಸ್ ಕ್ವಾಟರ್ಸ್ನಲ್ಲಿ ವಾಸವಿದ್ದರು. ಮುಂಜಾನೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆ ನಿಜಾಮುದ್ದಿನ್ ಕೊನೆಯುಸಿರೆಳೆದಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:51 am, Wed, 23 July 25








