ಬಾಗಲಕೋಟೆ, ಜೂ.12: ಬಾಗಲಕೋಟೆ ಜಿಲ್ಲೆಯ ಮುಧೋಳ ಪೊಲೀಸ(Mudhol Police)ರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಕಲಿ ಆರ್ಎಂಡಿ ಗುಟ್ಕಾ ತಯಾರಿಕೆ ಮಾಡುವ ಜಾಲವನ್ನು ಪತ್ತೆ ಮಾಡಿದ್ದಾರೆ. ಮಹಾಂತೇಶ್ ಮೂಲಿಮನಿ ಎಂಬುವವರ ದೂರಿನ ಮೇಲೆ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು, ಆರ್ಎಂಡಿ ಪಾನ್ ಮಸಾಲಾ ಮತ್ತು ಎಂ ಗೋಲ್ಡ್ ಸೆಂಟೆಡ್ ಟೊಬ್ಯಾಕೋ ಹೆಸರಿನ ಪೌಚ್ ತಯಾರಿಕೆ ಮಾಡುತ್ತಿದ್ದವರ ದಾಳಿ ಮಾಡಿ, ಏಳು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮಹಮ್ಮದ ವಶೀಮ್ ಮುನೀರ, ಹಿಮಾಯತ, ಮಹ್ಮದ್, ವಿಕಾಸ್ ಚವ್ಹಾಣ, ಸಂತೋಷ ಬಳ್ಳೋಳ್ಳೆ, ಜಹೀರ , ಇಕ್ವಾಲ್
ಎಂಬ ಆರೋಪಿಗಳನ್ನ ವಶಕ್ಕೆ ಪಡೆದಿದ್ದು, ಬಂಧಿತರು ದೆಹಲಿ, ಹೈದ್ರಾಬಾದ್, ಬೆಳಗಾವಿ ಹಾಗೂ ನಿಪ್ಪಾಣಿ ಮೂಲದವರಾಗಿದ್ದಾರೆ. ಇವರಿಂದ ಸುಮಾರು 30 ಲಕ್ಷ ರೂ. ಮೌಲ್ಯದ ಎಂ ಗೋಲ್ಡ್ ಸೆಂಟೆಡ್ ಟೊಬ್ಯಾಕೋ ಹಾಗೂ ಆರ್ಎಂಡಿ ಪಾನ್ ಮಸಾಲಾ ಮತ್ತು ನಕಲಿಯಾಗಿ ತಯಾರಿಸಲು ಬಳಸುವ ಪ್ರಿಂಟೇಡ್ , ಕಟಿಂಗ್ ಮಶೀನ್ಗಳನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ:ನಕಲಿ ವೈದ್ಯಕೀಯ ಹಾವಳಿ ತಡೆಯಲು ಆರೋಗ್ಯ ಇಲಾಖೆ ದಿಟ್ಟ ಹೆಜ್ಜೆ; ತಪ್ಪಿದರೆ ಕಾನೂನು ಕ್ರಮ
ಕೋಲಾರ: ಶ್ರೀನಿವಾಸಪುರ ತಾಲೂಕಿನ ಗುಡಸವಾರಪಲ್ಲಿ ಗ್ರಾಮದ ಬಳಿ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳುವ ಭರದಲ್ಲಿ ಕೆರೆಗೆ ಹಾರಿದ್ದ ನಾಲ್ವರ ಪೈಕಿ ಗುರುವಲೋಳ್ಳಗಡ್ಡ ಗ್ರಾಮದ ನರಸಿಂಹ(45) ಎಂಬಾತ ಕೊನೆಯುಸಿರೆಳೆದಿದ್ದಾರೆ. ಇನ್ನುಳಿದ ಮೂವರು ಜೂಜುಕೋರರು ಈಜಿ ದಡ ಸೇರಿದ್ದಾರೆ. ಈ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇತ್ತ ಮೃತರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ