ಬಾಗಲಕೋಟ: ಜಿಲ್ಲೆಯ ಇಳಕಲ ನಗರದಲ್ಲಿ ನಡೆಯಬೇಕಿದ್ದ, ಸರ್ವಧರ್ಮ ಸೌಹಾರ್ದ ಭಾವೈಕ್ಯತಾ ಸಮಾವೇಶ, (Sarvadharma samavesha) ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದಾರ್ಶನಿಕರ ಮೆರವಣಿಗೆಯನ್ನು ಇಳಕಲ್ (Ilkal) ತಾಲೂಕು ತಹಶೀಲ್ದಾರ್ ಬಸವರಾಜ ಮೇಳವಂಕಿ ರದ್ದು ಪಡಿಸಿದ್ದಾರೆ. ಇದರಿಂದ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸಮಾವೇಶ ಇಳಕಲ್ ನಗರದ ಕಂಠಿ ಸರ್ಕಲ್ನಲ್ಲಿ ಇಂದು (ನ. 27) ಸಂಜೆ ನಡೆಯಬೇಕಿತ್ತು. ಇನ್ನೂ ಮೆರವಣಿಗೆ ಮಧ್ಯಾಹ್ನ 2 ಗಂಟೆಯಿಂದ ಆರಂಭವಾಗಬೇಕಿತ್ತು. ಆದರೆ ಮೆರವಣಿಗೆಯನ್ನು ರದ್ದುಪಡಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದಾರ್ಶನಿಕರ ಮೆರವಣಿಗೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ದಾರ್ಶನಿಕರ ಭಾವಚಿತ್ರದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಇರಿಸಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಇದರಿಂದ ಕಾನೂನು ಸುವ್ಯಸ್ಥೆಗೆ ದಕ್ಕೆ ಆಗಬಾರದೆಂದು ಮೆರವಣಿಗೆ ಪರವಾನಿಗೆ ರದ್ದು ಮಾಡಲಾಗಿದೆ.
ಇನ್ನೂ ಸಂಘಟಕರು ಕಂಠಿ ಸರ್ಕಲ್ನಲ್ಲಿ ಮುಖ್ಯ ವೇದಿಕೆ ಸಜ್ಜುಗೊಳಿಸುತ್ತಿದ್ದರು, ಸಮಾವೇಶ ರದ್ದು ಆದೇಶ ಹೊರಡಿಸಿದ ಬೆನ್ನಲ್ಲೇ ಅಧಿಕಾರಿಗಳು ವೇದಿಕೆ ತೆರವುಗೊಳಿಸಲು ಸೂಚಿಸಿದ್ದಾರೆ. ಸ್ಥಳದಲ್ಲಿ ಕೆಎಸ್ಆರ್ಪಿ ತುಕಡಿ ಸೇರಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರದ್ದು ಆದೇಶ ವಿರೋಧಿಸಿ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಕಂಟಿ ವೃತ್ತದ ಬಳಿ ಧರಣಿ ಕೂತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Sun, 27 November 22