ಬಾಗಲಕೋಟೆ: ಕೆರೂರು ಘರ್ಷಣೆ (Clash) ವಿಚಾರ ಹಿನ್ನೆಲೆ ಚಾಕು ಇರಿತಕ್ಕೆ ಒಳಗಾದ ಹಿಂದು ಜಾಗರಣವೇದಿಕೆ ಜಿಲ್ಲಾ ಕಾರ್ಯದರ್ಶಿ ಅರುಣ ಕಟ್ಟಿಮನಿ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಾರೆ. ನಾನು ಯಂಡಿಗೇರಿ ಗ್ರಾಮಕ್ಕೆ ಹೊರಟಿದ್ದೆ. ಅದಕ್ಕಾಗಿ ಕೆರೂರು ಬಸ್ ನಿಲ್ದಾಣಕ್ಕೆ ಹೋಗಿದ್ದೆ. ಆಗ ಒಬ್ಬ ಹೆಣ್ಣುಮಗಳು ಬುರ್ಖಾ ಹಾಕಿಕೊಂಡು ನನ್ನ ಬಳಿ ಬಂದಳು. ನನ್ ಮಗನನ್ನ ಯಾಕೆ ಹೊಡೆದೆ ಅಂತ ಕೇಳಿದಳು. ನಿಮ್ ಮಗನನ್ನು ನಾನ್ಯಾಕೆ ಹೊಡಿಲಿ ಅಂತ ಹೇಳಿದೆ. ಆಗ ಆಕೆಯ ಮಗ ಹಿಂದೆಯಿಂದ ನನ್ನ ಮೇಲೆ ಹಲ್ಲೆ ಮಾಡೋಕೆ ಬಂದ. ಆಗ ಆತನ ತಾಯಿ ಎಳನೀರು ಕಡಿಯುವ ಮಚ್ಚು ತಂದು ಮಗನಿಗೆ ಕೊಟ್ಟಳು. ನನ್ನ ಭುಜ ಹಾಗೂ ತಲೆಗೆ ಆಕೆಯ ಮಗ ಹೊಡೆದ. ನಂತರ ಒಮ್ಮೆಲೆ 30 ಜನರು ದಾಳಿ ಮಾಡಿದರು. ತಲೆ ಒಡೆದು ತೀವ್ರ ರಕ್ತಸ್ರಾವವಾಯಿತು ಎಂದು ಅರುಣ ಕಟ್ಟಿಮನಿ ಹೇಳಿದರು.
ಇದನ್ನೂ ಓದಿ: ಬಾಗಲಕೋಟೆ: ಕೆರೂರಿನಲ್ಲಿ ಹಿಂದೂ-ಮುಸ್ಲಿಂ ಯುವಕರ ಘರ್ಷಣೆ, ಉದ್ವಿಗ್ನ ವಾತಾವರಣ, ಶಾಲೆಗಳಿಗೆ ರಜೆ
ನಾನು ಹಿಂದು ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿಯಾಗಿದ್ದು, ನಾನು ಅನೇಕ ಹಿಂದು ಧರ್ಮದ ಪರವಾಗಿ ಹೋರಾಟ ಮಾಡುತ್ತಾ ಬಂದವನು. ಹಿಂದೆ ಕನ್ಹಯ್ಯಾಲಾಲ್ ಹತ್ಯೆಯನ್ನು ಖಂಡಸಿ ಹೋರಾಟ ಮಾಡಿದ್ದೆ. ಹಿಂದು ಹೋರಾಟದಲ್ಲಿ ಗುರುತಿಸಿಕೊಂಡಿದ್ದಕ್ಕೆ ನನ್ನನ್ನು ಟಾರ್ಗೆಟ್ ಮಾಡಿದ್ದರು. ಇನ್ನು ಘಟನಾ ಸ್ಥಳದಲ್ಲಿ ಐದು ಪೊಲೀಸ್ ಸಿಬ್ಬಂದಿಗಳಿದ್ದರು.
ಇದನ್ನೂ ಓದಿ: ಬಾಗಲಕೋಟೆ ಕೆರೂರಿನಲ್ಲಿ ಹಿಂದೂ-ಮುಸ್ಲಿಂ ಯುವಕರ ನಡುವೆ ಘರ್ಷಣೆ ಪ್ರಕರಣ; ಯುವತಿಯರನ್ನು ಚೂಡಾಯಿಸಿದ್ದೇ ಗಲಾಟೆಗೆ ಕಾರಣ!
ಎಎಸ್ ಐ ಪಠಾಣ್, ಕಾನ್ಸ್ಟೇಬಲ್ಗಳಾದ ಚಂದ್ರಶೇಖರ್, ಮಲ್ಲು ಪೂಜಾರಿ, ರಮೇಶ್ ದೊಡ್ಡಮನಿ, ಶಶಿಕುಮಾರ ಮಸೂತಿ ಸ್ಥಳದಲ್ಲಿದ್ದರು. ಅವರಿಗೆ ಸರ್ ನನ್ನ ಮರ್ಡರ್ ಮಾಡುತ್ತಾರೆ ಅಂತ ಹೇಳಿದೆ. ಆದರೂ ಅವರು ಕೇರ್ ಮಾಡಲಿಲ್ಲ ಎಂದು ಅರುಣ ಕಟ್ಟಿಮನಿ ಹೇಳಿಕೆ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ಜುಲೈ 6ರಂದು ನಡೆದಿತ್ತು. ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಯಮನೂರ ಚುಂಗಿನ ಮೇಲೆ ಹಲ್ಲೆ ಮಾಡಲಾಗಿತ್ತು.