ಕರ್ತವ್ಯನಿರತ ಕಂಡಕ್ಟರ್ ಮೇಲೆ ಬಿಜೆಪಿ ಶಾಸಕನ ಬೆಂಬಲಿಗನ ದರ್ಪ

ಬಾಗಲಕೋಟೆ: ಬಿಜೆಪಿ ಶಾಸಕನ ಬೆಂಬಲಿಗ ಕರ್ತವ್ಯನಿರತ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಕಂಡಕ್ಟರ್ ಮೈತುಂಬಾ ರಕ್ತ ಸೋರ್ತಿದೆ. ತಲೆಗೊಂದು ದೊಡ್ಡ ಬ್ಯಾಂಡೇಜ್ ಬಿದ್ದಿದೆ. ಮೈಮೇಲೆ ಹಾಕಿರೋ ಖಾಕಿ ಶರ್ಟ್ ಕೂಡ ಕಿತ್ತೋಗಿದೆ. ನೋವಿನಲ್ಲೇ ನರಳಾಡ್ತಿದ್ದಾರೆ. ಒಂದ್ ಹೆಜ್ಜೆ ಇಡೋಕು ಆಗದೆ ಕಣ್ಣೀರಿಡ್ತಿದ್ದಾರೆ. ಕಂಡಕ್ಟರ್ ಮೇಲೆ ಬಿಜೆಪಿ ಶಾಸಕರ ಬೆಂಬಲಿಗನ ರೌಡಿಸಂ! ಅಂದ್ಹಾಗೆ ಹೀಗೆ ನೋವಿನಲ್ಲಿ ನರಳಾಡ್ತಿರೋ ಈತನ ಹೆಸರು ಮುರುಗೇಶ್ ಹುಲ್ಲಳ್ಳಿ. ವೃತ್ತಿಯಲ್ಲಿ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಆಗಿರೋ ಮುರುಗೇಶ್ ಟಿಕೆಟ್ […]

ಕರ್ತವ್ಯನಿರತ ಕಂಡಕ್ಟರ್ ಮೇಲೆ ಬಿಜೆಪಿ ಶಾಸಕನ ಬೆಂಬಲಿಗನ ದರ್ಪ
Follow us
ಸಾಧು ಶ್ರೀನಾಥ್​
|

Updated on: Feb 04, 2020 | 12:36 PM

ಬಾಗಲಕೋಟೆ: ಬಿಜೆಪಿ ಶಾಸಕನ ಬೆಂಬಲಿಗ ಕರ್ತವ್ಯನಿರತ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಕಂಡಕ್ಟರ್ ಮೈತುಂಬಾ ರಕ್ತ ಸೋರ್ತಿದೆ. ತಲೆಗೊಂದು ದೊಡ್ಡ ಬ್ಯಾಂಡೇಜ್ ಬಿದ್ದಿದೆ. ಮೈಮೇಲೆ ಹಾಕಿರೋ ಖಾಕಿ ಶರ್ಟ್ ಕೂಡ ಕಿತ್ತೋಗಿದೆ. ನೋವಿನಲ್ಲೇ ನರಳಾಡ್ತಿದ್ದಾರೆ. ಒಂದ್ ಹೆಜ್ಜೆ ಇಡೋಕು ಆಗದೆ ಕಣ್ಣೀರಿಡ್ತಿದ್ದಾರೆ.

ಕಂಡಕ್ಟರ್ ಮೇಲೆ ಬಿಜೆಪಿ ಶಾಸಕರ ಬೆಂಬಲಿಗನ ರೌಡಿಸಂ! ಅಂದ್ಹಾಗೆ ಹೀಗೆ ನೋವಿನಲ್ಲಿ ನರಳಾಡ್ತಿರೋ ಈತನ ಹೆಸರು ಮುರುಗೇಶ್ ಹುಲ್ಲಳ್ಳಿ. ವೃತ್ತಿಯಲ್ಲಿ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಆಗಿರೋ ಮುರುಗೇಶ್ ಟಿಕೆಟ್ ಕೊಡೋದ್ರಲ್ಲಿ ಬ್ಯುಸಿಯಾಗಿದ್ರು. ಹುನಗುಂದ ತಾಲ್ಲೂಕಿನ ಮರೋಳ ಗ್ರಾಮದ ಬಳಿ ಕೆಎಸ್​ಆರ್​ಟಿಸಿ ಬಸ್ ಹೋಗ್ತಿತ್ತಂತೆ.

ಈ ವೇಳೆ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್​ ಬೆಂಬಲಿಗ ಅಶೋಕ್ ಬಂಡರಗಲ್ ಬೆಂಬಲಿಗರು ಎಂಟ್ರಿ ಕೊಟ್ಟಿದ್ದಾರೆ. ಏಕಾಏಕಿ ಬಸ್​ನ್ನ ನಿಲ್ಲಿಸಿ ನಿರ್ವಾಹಕ ಮುರುಗೇಶ್ ಕಣ್ಣಿಗೆ ಖಾರದಪುಡಿ ಎರಚಿದ್ದಾರೆ. ಬಳಿಕ ಮುರುಗೇಶ್​​ ಅವರನ್ನ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಅಂತ ಕುಟುಂಬಸ್ಥರು ಆರೋಪಿಸ್ತಿದ್ದಾರೆ.

ಇನ್ನು, ಶಾಸಕ ದೊಡ್ಡನಗೌಡ ಪಾಟೀಲ್ ಬೆಂಬಲಿಗ ಅಶೋಕ್ ಬಂಡರಗಲ್ ರೌಡಿಶೀಟರ್ ಅಂತೆ. ಜೊತೆಗೆ ಮುರುಗೇಶ್ ಮೇಲೆ ದಾಳಿಯಾಗಿರೋದಕ್ಕೆ ಸಾಕ್ಷಿ ಎಂಬಂತೆ ಬಸ್​ನಲ್ಲಿ ಖಾರದಪುಡಿ ಎಲ್ಲೆಲ್ಲೂ ಚೆಲ್ಲಾಡಿದೆ. ಅಲ್ಲದೇ, ಹಲ್ಲೆಗೊಳಗಾಗಿರೋ ನಿರ್ವಾಹಕ ಮುರುಗೇಶ್ ಹುಲ್ಲಳ್ಳಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಜೊತೆಗೆ ಈ ಹಲ್ಲೆಗೆ ಹಳೆಯ ರಾಜಕೀಯ ದ್ವೇಷವೇ ಕಾರಣ ಎನ್ನಲಾಗಿದೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಬೇಕು ಅಂತ ಹಲ್ಲೆಗೊಳಗಾಗಿರೋ ಮುರುಗೇಶ್ ಪತ್ನಿ ಕಣ್ಣೀರಿಟ್ಟಿದ್ದಾರೆ. ಒಟ್ನಲ್ಲಿ ಶಾಸಕರ ಬೆಂಬಲಿಗ ಅಂದ್ಕೊಂಡು ಕರ್ತವ್ಯನಿರತ ನಿರ್ವಾಹಕನ ಮೇಲೆ ಹಲ್ಲೆ ಮಾಡಿರೋದು ಖಂಡನೀಯ.

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM