ನಿಮಗೆ ಮಾನವೀಯತೆ ಇಲ್ಲವೇ? ತೇರದಾಳ ಶಾಸಕ ಸಿದ್ದು ಸವದಿ ವಿರುದ್ಧ ಜೈನಮುನಿ ಆಕ್ರೋಶ

ಜೈನಮುನಿ‌ ಕುಲರತ್ನಭೂಷಣ ಮಹಾರಾಜ ಚಾತುರ್ಮಾಸ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಕಟಣಿಯಲ್ಲಿದ್ದಾರೆ. ಆದ್ರೆ ಬೆಟ್ಟದಲ್ಲಿ ಮರಗಿಡಗಳನ್ನು ಕಿತ್ತೆಸೆದಿರುವ ವಿಷಯ ತಿಳಿಯುತ್ತಿದ್ದಂತೆ ವಾಟ್ಸಾಪ್ ಮೂಲಕ ತೇರದಾಳ ಶಾಸಕ ಸಿದ್ದು ಸವದಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ನಿಮಗೆ ಮಾನವೀಯತೆ ಇಲ್ಲವೇ? ತೇರದಾಳ ಶಾಸಕ ಸಿದ್ದು ಸವದಿ ವಿರುದ್ಧ ಜೈನಮುನಿ ಆಕ್ರೋಶ
ಭದ್ರಗಿರಿ ಬೆಟ್ಟದಲ್ಲಿ ತಮದಡ್ಡಿ ಸಂಸತ್ರಸ್ತರಿಗೆ ಪುನರ್ವಸತಿ ಕೇಂದ್ರ ನಿರ್ಮಾಣ ಮಾಡಲು ಬೆಟ್ಟದಲ್ಲಿ ಮರಗಿಡಗಳನ್ನು ಕಿತ್ತೆಸೆಯುತ್ತಿರುವುದು
Edited By:

Updated on: Aug 06, 2021 | 8:46 AM

ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ತಮದಡ್ಡಿ ಸಂಸತ್ರಸ್ತರಿಗೆ ಪುನರ್ವಸತಿ ಕೇಂದ್ರ ನಿರ್ಮಾಣ ಮಾಡಲು ಬೆಟ್ಟದಲ್ಲಿ ಮರಗಿಡಗಳನ್ನು ಕಿತ್ತೆಸೆದಿರುವುದಕ್ಕೆ ಜೈನಮುನಿ‌ ಕುಲರತ್ನಭೂಷಣ ಮಹಾರಾಜರು ಅಸಮಾಧಾನಗೊಂಡಿದ್ದಾರೆ. ತೇರದಾಳ ಶಾಸಕ ಸಿದ್ದು ಸವದಿ ವಿರುದ್ಧ ಜೈನಮುನಿ ಆಕ್ರೋಶ ಹೊರ ಹಾಕಿದ್ದಾರೆ.

ಜೈನಮುನಿ‌ ಕುಲರತ್ನಭೂಷಣ ಮಹಾರಾಜ ಚಾತುರ್ಮಾಸ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಕಟಣಿಯಲ್ಲಿದ್ದಾರೆ. ಆದ್ರೆ ಬೆಟ್ಟದಲ್ಲಿ ಮರಗಿಡಗಳನ್ನು ಕಿತ್ತೆಸೆದಿರುವ ವಿಷಯ ತಿಳಿಯುತ್ತಿದ್ದಂತೆ ವಾಟ್ಸಾಪ್ ಮೂಲಕ ತೇರದಾಳ ಶಾಸಕ ಸಿದ್ದು ಸವದಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಗಿಡಗಳನ್ನು ಉರುಳಿಸಿದ್ದು ಬೇಸರ ತರಿಸಿದೆ. ಶಾಸಕ ಸಿದ್ದು ಸವದಿ ವರ್ತನೆಯಿಂದ ಬೇಸರವಾಗಿದೆ. ಸಿದ್ದು ಸವದಿ ಅವರಿಗೆ ಮಾನವೀಯತೆ ಎಲ್ಲಿದೆ? ಗಿಡಮರ ಬೆಳೆಸಿದ ಜಾಗಬಿಟ್ಟು ಬೇರೆಡೆ ಸಂತ್ರಸ್ತರಿಗೆ ಜಾಗ ಕೊಡಿ ಎಂದು ಜೈನಮುನಿ‌ ಮನವಿ ಮಾಡಿಕೊಂಡಿದ್ದಾರೆ.

ಜೈನಮುನಿಗಳು ಶಾಪ ಕೊಡೋದಿಲ್ಲ. ಆದರೆ ನಿಮ್ಮ ವರ್ತನೆಯಿಂದ ನೀವು ಮಾಡಿದ ಕರ್ಮ ನಿಮಗೆ ತಟ್ಟದೆ ಇರೋದಿಲ್ಲ. ಇಂತಹ ನೀಚತನದಿಂದ ಭಾರತದ ನಾಗರೀಕತೆ ಹಾಳಾಗಿ ಹೋಗುತ್ತಿದೆ. ಸಸ್ಯ ಸಂಪತ್ತು ಹಾಳು‌ ಮಾಡೋದು ಸರಿಯಲ್ಲ. ಇಂತಹ ನಾಲಾಯಕ್ ಕೆಲಸ‌ ಮಾಡೋದು ಸರಿಯಲ್ಲ. ಕಲ್ಲು ಮುಳ್ಳು ಇರುವ ಗುಡ್ಡದಲ್ಲಿ ಮರಗಳ ಬೆಳೆಸಿದ್ದೇವೆ. ನಿಮಗೆ ಮಾನವೀಯತೆ ಇಲ್ಲವೇ ಎಂದು ಜೈನಮುನಿ ಆಕ್ರೋಶ ಹೊರ ಹಾಕಿದ್ದಾರೆ.

ನಾವು ಚಾತುರ್ಮಾಸದಲ್ಲಿ ಇದ್ದೀವಿ ಅದಕ್ಕೆ ಸುಮ್ಮನೆ ಇದ್ದೀವಿ. ಇಲ್ಲದಿದ್ದರೆ ನಾವು ಹೋರಾಟ ಮಾಡುತ್ತಿದ್ದೆವು. ಪ್ರತಿಭಟನೆ ಮಾಡುತ್ತಿದಂತಹ ಹೆಣ್ಣು‌ಮಕ್ಕಳ ಮೇಲೆ ಹಲ್ಲೆ ಮಾಡಲಾಗಿದೆ. ಅವರು ಆಸ್ಪತ್ರೆ ಸೇರಿದ್ದಾರೆ. ನೀತಿ ಧರ್ಮ ನಿಮ್ಮ ಹತ್ತಿರ ಇದೆಯಾ? ಸಿದ್ದು ಸವದಿ ಬಂದು ಗಿಡ ಹಾಕಿದ್ದರು. ಈಗ ಅವರೇ ಜೆಸಿಬಿ ಮೂಲಕ ಕಿತ್ತೆಸೆಯುತ್ತಿದ್ದಾರೆ. ಇದು ಅವರಿಗೆ ನಾಚಿಕೆ ಆಗಬೇಕು. ಇದೇ ಜಾಗದಲ್ಲಿ ಸಾಕಷ್ಟು ಜಾಗ ಖಾಲಿ ಇದೆ. ಅಲ್ಲಿ ಸಂತ್ರಸ್ತರಿಗೆ ಜಾಗ ಕೊಡಿ ಎಂದಿದ್ದಾರೆ.

ಇದನ್ನೂ ಓದಿ: ಜಲಾಶಯಗಳು ತುಂಬಲು ಒಂದೆರಡು ಅಡಿ ನೀರು ಸಾಕು; ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ

ಪುನರ್ವಸತಿ ಕೇಂದ್ರ ಜಾಗ ತೆರವು ವಿರೋಧಿಸಿ ಹಳಿಂಗಳಿ ಗ್ರಾಮಸ್ಥರು, ಜೈನಮುನಿಗಳಿಂದ ಪ್ರತಿಭಟನೆ