ಡಿಕೆ ಶಿವಕುಮಾರ್ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆಗಳ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಆಂದ್ಲೆ ಜಗದೀಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಿ ಅವರಿಗೆ ಮುನ್ಸೂಚನೆಗಳನ್ನು ನೀಡಿದ್ದು, ಅವರ ಇಷ್ಟಾರ್ಥಗಳು ಈಡೇರಲಿವೆ ಎಂದು ಅರ್ಚಕ ಗಣೇಶ್ ನಾಯಕ್ ತಿಳಿಸಿದ್ದಾರೆ. ವಿಡಿಯೋ ನೋಡಿ.
ಕಾರವಾರ, ಡಿಸೆಂಬರ್ 19: ರಾಜ್ಯ ಕಾಂಗ್ರೆಸ್ನಲ್ಲಿ ಕುರ್ಚಿ ಕಾಳಗದ ಮಧ್ಯೆ ಇಂದು ಡಿಸಿಎಂ ಡಿಕೆ ಶಿವಕುಮಾರ್, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಆಂದ್ಲೆ ಗ್ರಾಮದಲ್ಲಿರುವ ಜಗದೀಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸದ್ಯ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ಡಿಕೆ ಶಿವಕುಮಾರ್ ಪೂಜೆ ಸಲ್ಲಿಸಿದ ಬಗ್ಗೆ ಅರ್ಚಕ ಗಣೇಶ್ ನಾಯಕ್ ಟವಿ9 ಜೊತೆಗೆ ಮಾತನಾಡಿದ್ದು, ದೇವಿ ಡಿ.ಕೆ. ಶಿವಕುಮಾರ್‌ಗೆ ಮೂರು ರೀತಿಯ ಸೂಚನೆಗಳನ್ನು ನೀಡಿದ್ದಾಳೆ. ಹಿಂದೆ ತಿಹಾರ್ ಜೈಲಿನಿಂದ ಬಿಡುಗಡೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆಯುವ ಕುರಿತು ದೇವಿ ಮುನ್ಸೂಚನೆ ನೀಡಿದ್ದಳು. ಈ ಬಾರಿಯೂ ಡಿ.ಕೆ. ಶಿವಕುಮಾರ್ ಅವರು ಕೇಳಿದ ದಿನಾಂಕದೊಳಗೆ ಅವರ ಬಯಕೆ ಈಡೇರುತ್ತದೆ ಎಂದು ದೇವಿ ಭರವಸೆ ನೀಡಿದ್ದಾಳೆ ಎಂದು ಅರ್ಚಕರು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
