Bagalkot: ಎರಡನೇ ಮದುವೆ ಆದ ಹಿನ್ನೆಲೆ, ಪನಿಷ್ಮೆಂಟ್ ನಿವೃತ್ತಿ ಹೊಂದಿದ್ದ ಜಡ್ಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

| Updated By: ಸಾಧು ಶ್ರೀನಾಥ್​

Updated on: May 20, 2022 | 10:00 PM

ಚಿತ್ತಾಪುರ ನ್ಯಾಯಾಲಯದಲ್ಲಿ ಜಡ್ಜ್ ಆಗಿದ್ದ ಮಾನಪ್ಪ ತಳವಾರ ಅವರು ಮನೆಯಲ್ಲಿ ಗುಂಡು ಹಾರಿಸಿಕೊಂಡು ಅಸುನೀಗಿದ್ದಾರೆ.

Bagalkot: ಎರಡನೇ ಮದುವೆ ಆದ ಹಿನ್ನೆಲೆ, ಪನಿಷ್ಮೆಂಟ್ ನಿವೃತ್ತಿ ಹೊಂದಿದ್ದ ಜಡ್ಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಕಡ್ಡಾಯ ನಿವೃತ್ತಿ ಹೊಂದಿದ್ದ ಜಡ್ಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
Follow us on

ಬಾಗಲಕೋಟೆ: ಕಡ್ಡಾಯ ನಿವೃತ್ತಿ ಹೊಂದಿದ್ದ ಜಡ್ಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬಾಗಲಕೋಟೆಯ ನವನಗರದ ಸೆಕ್ಟರ್ ನಂ.16ರಲ್ಲಿ ನಡೆದಿದೆ. ನ್ಯಾ. ಮಾನಪ್ಪ ತಳವಾರ(53) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಚಿತ್ತಾಪುರ ನ್ಯಾಯಾಲಯದಲ್ಲಿ ಜಡ್ಜ್ ಆಗಿದ್ದ ಮಾನಪ್ಪ ತಳವಾರ ಅವರು ಮನೆಯಲ್ಲಿ ಗುಂಡು ಹಾರಿಸಿಕೊಂಡು ಅಸುನೀಗಿದ್ದಾರೆ. ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮಾನಪ್ಪ ತಳವಾರ ಕಳೆದ ಮೂರು ವರ್ಷದಿಂದ ಕಡ್ಡಾಯ ನಿವೃತ್ತಿ ಮೇಲಿದ್ದರು. ಮೃತ ಜಡ್ಜ್ ಗೆ ಇಬ್ಬರು ಪತ್ನಿಯರು ಇದ್ದಾರೆ. ಮೊದಲ ಪತ್ನಿ ಬೆಂಗಳೂರಲ್ಲಿ ಜಡ್ಜ್ ಆಗಿದ್ದಾರೆ. ಎರಡನೇ ಪತ್ನಿ ಜೊತೆ ನವನಗರದಲ್ಲಿ ಮಾನಪ್ಪ ತಳವಾರ ನೆಲೆಸಿದ್ದರು. ಎರಡನೇ ಮದುವೆ ಆದ ಹಿನ್ನೆಲೆ ಪನಿಷ್ಮೆಂಟ್ ನಿವೃತ್ತಿ ಪಡೆದರು. ಮಾನಪ್ಪ ತಳವಾರ ಮೂಲತಃ ಬಾಗಲಕೋಟೆ ತಾಲ್ಲೂಕಿನ ಹಿರೆಶೆಲ್ಲಿಕೇರಿ ಗ್ರಾಮದವರು.

Also Read:

ಮಳೆಯಿಂದ ಜಲಧಾರೆ: ಕನ್ಯೆ ನೋಡಲು ಹೋಗಿ, ವಾಪಸು ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ

ಬೈಕ್​ಗಳ ನಡುವೆ ಡಿಕ್ಕಿ -ಇಬ್ಬರೂ ಬೈಕ್ ಸವಾರರು ಕೊನೆಯುಸಿರು:

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಸಿಗೇಹಳ್ಳಿ ಬಳಿ ಬೈಕ್​ಗಳ ನಡುವೆ ಡಿಕ್ಕಿಯಾಗಿ ಇಬ್ಬರು ಅಸುನೀಗಿದ್ದಾರೆ. ಇಬ್ಬರೂ ಬೈಕ್ ಸವಾರರು ಮೃತಪಟ್ಟಿದ್ದಾರೆ, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ತುರುವೇಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Also Read: ಧಾರವಾಡ ಕೇಂದ್ರ ಕಾರಾಗೃಹಕ್ಕೆ ನ್ಯಾ. ಬಿ. ವೀರಪ್ಪ ಭೇಟಿ: ವೀರ ಸಾವರ್ಕರ್ ಪುಸ್ತಕ ಎಲ್ಲಿ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

 

Published On - 9:39 pm, Fri, 20 May 22