58 ವರ್ಷದ ರಾಯಚೂರು ನಿವಾಸಿ 187 ನಾಣ್ಯಗಳನ್ನು ನುಂಗಿದ್ದು ಏಕೆ? ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ವೃದ್ಧ

| Updated By: ಆಯೇಷಾ ಬಾನು

Updated on: Nov 28, 2022 | 2:57 PM

ಟಿವಿ9 ಜೊತೆ ಮಾತನಾಡಿದ ದ್ಯಾಮಣ್ಣ ಕಟ್ಟಿಮನಿ ಅವರು ತಾವು ನಾಣ್ಯ ನುಂಗಿದ ಕಾರಣ ಬಿಚ್ಚಿಟ್ಟಿದ್ದಾರೆ. ನಾನು ಕಳೆದ ಮಳೆಗಾಲದಲ್ಲಿ ನಾಣ್ಯ ನುಂಗೋದಕ್ಕೆ ಶುರು ಮಾಡಿದೆ ಎಂದಿದ್ದಾರೆ.

58 ವರ್ಷದ ರಾಯಚೂರು ನಿವಾಸಿ 187 ನಾಣ್ಯಗಳನ್ನು ನುಂಗಿದ್ದು ಏಕೆ? ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ವೃದ್ಧ
ದ್ಯಾಮಣ್ಣ ಕಟ್ಟಿಮನಿ
Follow us on

ಬಾಗಲಕೋಟೆ: ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಸಂತೆಕೆಲ್ಲೂರು ಗ್ರಾಮದ ನಿವಾಸಿಯಾದ 58 ವರ್ಷದ ದ್ಯಾಮಣ್ಣ ಕಟ್ಟಿಮನಿ ಬರೊಬ್ಬರಿ 187 ನಾಣ್ಯಗಳನ್ನು ನುಂಗಿ(Man Swallows 187 Coins) ಆಸ್ಪತ್ರೆ ಸೇರಿದ್ದರು. ಸದ್ಯ ತಜ್ಞವೈದ್ಯರಾದ ಈಶ್ವರ ಕಲಬುರ್ಗಿ, ಪ್ರಕಾಶ್ ಕಟ್ಟಿಮನಿ ಸೇರಿದಂತೆ ನಾಲ್ವರ ತಂಡ ಶಸ್ತ್ರಚಿಕಿತ್ಸೆ ಮಾಡಿ ನಾಣ್ಯಗಳನ್ನು ಹೊರತೆಗೆದಿದ್ದಾರೆ. ಆದ್ರೆ ದ್ಯಾಮಣ್ಣನವರು ಇಷ್ಟೊಂದು ನಾಣ್ಯ ನುಂಗಿದ್ದು ಏಕೆ? ಎಂಬ ಮಾಹಿತಿಯನ್ನು ಅವರೇ ಬಿಚ್ಚಿಟ್ಟಿದ್ದಾರೆ.

ಟಿವಿ9 ಜೊತೆ ಮಾತನಾಡಿದ ದ್ಯಾಮಣ್ಣ ಕಟ್ಟಿಮನಿ ಅವರು ತಾವು ನಾಣ್ಯ ನುಂಗಿದ ಕಾರಣ ಬಿಚ್ಚಿಟ್ಟಿದ್ದಾರೆ. ನಾನು ಕಳೆದ ಮಳೆಗಾಲದಲ್ಲಿ ನಾಣ್ಯ ನುಂಗೋದಕ್ಕೆ ಶುರು ಮಾಡಿದೆ. ಜನರ‌ ಬಳಿ ಭಿಕ್ಷೆ ಬೇಡಿ ನಾಣ್ಯ ಸಂಗ್ರಹ ಮಾಡಿಕೊಳ್ಳುತ್ತಿದ್ದೆ. ನಂತರ ಆ ನಾಣ್ಯಗಳನ್ನು ನುಂಗಿ ನೀರು ಕುಡಿಯುತ್ತಿದ್ದೆ. ದಿನಕ್ಕೆ ಎರಡು ಮೂರು ಅಂತ ನಾಣ್ಯ ನುಂಗುತ್ತಿದ್ದೆ ಎಂದು ವಿವರಿಸಿದ್ದಾರೆ.

ಈ ವೇಳೆ ಯಾತಕ್ಕೆ ನಾಣ್ಯ ನುಂಗುತ್ತಿದ್ದಿರಿ ಎಂಬ ಪ್ರಶ್ನೆಗೆ ದ್ಯಾಮಣ್ಣ ಅಚ್ಚರಿಯ ಉತ್ತರ ನೀಡಿದ್ದಾರೆ. ಬೆಳಿಗ್ಗೆ ಮಲವಿಸರ್ಜನೆ ವೇಳೆ ನಾಣ್ಯ ಆಚೆ ಹೋಗುತ್ತವೆ ಅಂತ ನುಂಗುತ್ತಿದ್ದೆ. ಆದರೆ ಎಲ್ಲ ನಾಣ್ಯಗಳು ಹೊಟ್ಟೆಯಲ್ಲೇ ಇದ್ದವು. ನಾಣ್ಯ ನುಂಗೋದಕ್ಕೆ ಭಿಕ್ಷೆ ಬೇಡುತ್ತಿದ್ದೆ ಎಂದು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ದ್ಯಾಮಣ್ಣ ತಿಳಿಸಿದ್ದಾರೆ. ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆ ವೈದ್ಯರಿಂದ ಲ್ಯಾಪ್ರೊಟಮಿ, ಗ್ಯಾಸ್ಟ್ರೊಟಮಿ ಶಸ್ತ್ರಚಿಕಿತ್ಸೆ ಮೂಲಕ‌ ನಾಣ್ಯ ಹೊರಕ್ಕೆ ತರಲಾಗಿದೆ.

ಇದನ್ನೂ ಓದಿ: ಬಾಗಲಕೋಟೆ: ವೃದ್ಧನ ಹೊಟ್ಟೆಯಲ್ಲಿದ್ದ 187 ಕಾಯಿನ್​ಗಳನ್ನು ಹೊರತೆಗೆದ HSK ಆಸ್ಪತ್ರೆ ವೈದ್ಯರು

ದ್ಯಾಮಣ್ಣ ಕಳೆದ ಮಂಗಳವಾರ ಹೊಟ್ಟೆನೋವು ಅಂತಾ ಬಾಗಲಕೋಟೆ ನಗರದ ಕುಮಾರೇಶ್ವರ ಖಾಸಗಿ ಆಸ್ಪತ್ರೆಗೆ ಬಂದಿದ್ರು. ಈ ವೇಳೆ ವೈದ್ಯರು ಎಕ್ಸರೇ, ಸ್ಕ್ಯಾನಿಂಗ್ ಮಾಡಿದ್ದು ರಿಪೋರ್ಟ್ ನೋಡಿ ಶಾಕ್ ಆಗಿದ್ದಾರೆ. ದ್ಯಾಮಣ್ಣನ ಹೊಟ್ಟೆಯಲ್ಲಿ ರಾಶಿ ರಾಶಿ ನಾಣ್ಯಗಳು ಕಂಡಿವೆ. ತಡಮಾಡದೇ ತಜ್ಞವೈದ್ಯರಾದ ಈಶ್ವರ ಕಲಬುರ್ಗಿ, ಪ್ರಕಾಶ್ ಕಟ್ಟಿಮನಿ ಸೇರಿದಂತೆ ನಾಲ್ವರ ತಂಡ ಶಸ್ತ್ರಚಿಕಿತ್ಸೆ ಆರಂಭಿಸಿದೆ. ಸತತ 2 ಗಂಟೆಗಳ ಕಾಲ ಆಪರೇಷನ್ ಮಾಡಿ ನಾಣ್ಯಗಳೆಲ್ಲವನ್ನೂ ಹೊರತೆಗೆದಿದ್ದಾರೆ.

ದ್ಯಾಮಣ್ಣನ ಹೊಟ್ಟೆಯಲ್ಲಿ 5 ರೂಪಾಯಿಯ 56 ನಾಣ್ಯಗಳು, 2 ರೂಪಾಯಿಯ 51 ನಾಣ್ಯಗಳು ಹಾಗೇ 1 ರೂಪಾಯಿಯ 80 ಕಾಯಿನ್​ಗಳು ಪತ್ತೆಯಾಗಿವೆ. ಈ ನಾಣ್ಯಗಳೆಲ್ಲಾ ಬರೋಬ್ಬರಿ 1 ಕೆಜಿ ತೂಗುತ್ತವೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ