AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bagalkot Crime; ಜಮೀನು ವಿಚಾರಕ್ಕೆ ನಾಲ್ವರು ಸಹೋದರರ ಹತ್ಯೆ, 9 ಆರೋಪಿಗಳು ಅರೆಸ್ಟ್, ಉಳಿದವರಿಗಾಗಿ ತಲಾಶ್

ಮೂರು ಎಕರೆ 21 ಗುಂಟೆ ಜಾಗದ ವಿಷ್ಯಕ್ಕೆ ಜಿದ್ದಿಗೆ ಬಿದ್ದಿದ್ದಾರೆ. ಇಲ್ಲಿಂದ ಶುರುವಾದ ದ್ವೇಷ ಈಗ ದೊಡ್ಡ ದುರಂತಕ್ಕೆ ಕಾರಣವಾಗಿದೆ. ಯಾಕಂದ್ರೆ, ನಿನ್ನೆ ರಾತ್ರಿ ಆಸ್ತಿಗಾಗಿ ನಾಲ್ವರ ಹೆಣಗಳು ಉರುಳಿವೆ. ಪುಟಾಣಿ ಕುಟುಂಬದ ಸದಸ್ಯರು ಮುದರಡ್ಡಿ ಕುಟುಂಬದ ನಾಲ್ವರು ಸಹೋದರನನ್ನ ಕಲ್ಲು, ಕೋಲು ಹಾಗೂ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ.

Bagalkot Crime; ಜಮೀನು ವಿಚಾರಕ್ಕೆ ನಾಲ್ವರು ಸಹೋದರರ ಹತ್ಯೆ, 9 ಆರೋಪಿಗಳು ಅರೆಸ್ಟ್, ಉಳಿದವರಿಗಾಗಿ ತಲಾಶ್
ಜಮೀನು ವಿಚಾರಕ್ಕೆ ನಾಲ್ವರು ಸಹೋದರರ ಹತ್ಯೆ; 9 ಆರೋಪಿಗಳು ಅರೆಸ್ಟ್, ಉಳಿದವರಿಗಾಗಿ ತಲಾಶ್
TV9 Web
| Updated By: ಆಯೇಷಾ ಬಾನು|

Updated on: Aug 29, 2021 | 10:08 AM

Share

ಬಾಗಲಕೋಟೆ: ಮಧುರಖಂಡಿಯಲ್ಲಿ ನಾಲ್ವರು ಸಹೋದರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 9 ಆರೋಪಿಗಳನ್ನು ವಶಕ್ಕೆ ಪಡೆದು ಜಮಖಂಡಿ ಗ್ರಾಮೀಣ ಪೊಲೀಸರು ವಿಚಾರಣೆ ನಡೆಸುತ್ತಿದ್ದು 12 ಆರೋಪಿಗಳ ಹೆಸರು ಪತ್ತೆ ಹಚ್ಚಿದ್ದಾರೆ. ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಪುಟಾಣಿ ಮನೆತನದ ನಂದೀಶ್, ನಾಗಪ್ಪ, ಪರಪ್ಪ, ಶಿವಾನಂದ, ಈರಪ್ಪ, ಶಂಕರ್, ಅಂಬವ್ವ, ರುಕ್ಮವ್ವ, ಮಾಲಾಶ್ರೀ, ಸುನಂದಾ ಹಾಗೂ ಪ್ರೇಮಾ ನಿಡೋಣಿ, ಚನ್ನಬಸಪ್ಪ ನಿಡೋಣಿ ಸೇರಿದಂತೆ ಒಟ್ಟು 12 ಮಂದಿ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.

ಹತ್ಯೆ ನಡೆದ ಸ್ಥಳದಲ್ಲಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಗಾಗಿ ನಿಯೋಜಿಸಲಾಗಿದೆ. ಬ್ಯಾರಿಕೇಡ್ ಹಾಕಿ ಸ್ಪಾಟ್‌ಗೆ ಯಾರೂ ಬರದಂತೆ ತಡೆ ಹಿಡಿಯಲಾಗಿದೆ. ಜಮಖಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಸಹೋದರರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

ಕುಟುಂಬಸ್ಥರ ಆಕ್ರಂದನ ಮೃತರ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಾಲ್ವರು ಮಕ್ಕಳನ್ನ ಕಳೆದುಕೊಂಡು ಹೆತ್ತ ತಾಯಿ ಗೋಳಾಡುತ್ತಿದ್ದಾರೆ. ಕೊಲೆಯಾಗಿರುವ ಮಲ್ಲಪ್ಪನ ಪತ್ನಿ ಭಾರತಿ ಕೊಲೆ ನಡೆದ ವೇಳೆ ಹಲ್ಲೆಯಾದರೂ ಬದುಕುಳಿದಿದ್ದ ಗಂಡನನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದಾರೆ. ತಂದೆ, ಚಿಕ್ಕಪ್ಪ, ದೊಡ್ಡಪ್ಪನ ಕಳೆದುಕೊಂಡು ಮಕ್ಕಳು ಗೋಳಾಡಿದ್ದಾರೆ. ಕೊಲೆ ಸುದ್ದಿ ಕೇಳಿ ಮೃತರ ಮನೆಯತ್ತ ಜನರು ಆಗಮಿಸುತ್ತಿದ್ದಾರೆ.

ಘಟನೆ ವಿವರ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧರಖಂಡಿ ಗ್ರಾಮದ ಮುದರಡ್ಡಿ ಹಾಗೂ ಪುಟಾಣಿ ಎಂಬ ಎರಡು ಕುಟುಂಬಗಳು ವಾಸವಿದ್ವು.. ಪ್ರಾರಂಭದಲ್ಲಿ ಚೆನ್ನಾಗಿಯೇ ಇದ್ರು. ಆದ್ರೆ, ಕೆಲ ವರ್ಷಗಳ ಹಿಂದೆ ಎರಡು ಕುಟುಂಬದ ಮಧ್ಯೆ ಆಸ್ತಿ ವಿಚಾರಕ್ಕೆ ಕಿರಿಕ್ ಆಗಿದೆ. ಅದು ಕೂಡ ಮೂರು ಎಕರೆ 21 ಗುಂಟೆ ಜಾಗದ ವಿಷ್ಯಕ್ಕೆ ಜಿದ್ದಿಗೆ ಬಿದ್ದಿದ್ದಾರೆ. ಇಲ್ಲಿಂದ ಶುರುವಾದ ದ್ವೇಷ ಈಗ ದೊಡ್ಡ ದುರಂತಕ್ಕೆ ಕಾರಣವಾಗಿದೆ. ಯಾಕಂದ್ರೆ, ನಿನ್ನೆ ರಾತ್ರಿ ಆಸ್ತಿಗಾಗಿ ನಾಲ್ವರ ಹೆಣಗಳು ಉರುಳಿವೆ. ಪುಟಾಣಿ ಕುಟುಂಬದ ಸದಸ್ಯರು ಮುದರಡ್ಡಿ ಕುಟುಂಬದ ನಾಲ್ವರು ಸಹೋದರನನ್ನ ಕಲ್ಲು, ಕೋಲು ಹಾಗೂ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ.. ಮೃತರನ್ನ ಮಲ್ಲಪ್ಪ, ಬಸಪ್ಪ, ಈಶ್ವರ, ಹಾಗೂ ಹಣಮಂತ ಎಂದು ಗುರ್ತಿಸಲಾಗಿದೆ.

ಇನ್ನು, ಈ ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿತ್ತು. ಆದ್ರೆ, ಅಂದುಕೊಂಡ ಸಮಯಕ್ಕೆ ಕೇಸ್ ಇತ್ಯರ್ಥವಾಗದೇ ಉಳಿದಿತ್ತು. ಇಷ್ಟೇ ಅಲ್ಲ, ಗ್ರಾಮದ ಹಿರಿಯರು ಕೂಡ ಈ ಕುಟುಂಬಗಳ ನಡುವಿನ ವಿವಾದ ಬಗೆ ಹರಿಸುವ ಪ್ರಯತ್ನ ಮಾಡಿದ್ರು. ಹೀಗಿದ್ರೂ ಆಸ್ತಿ ವಿವಾದ, ದ್ವೇಷದ ಜ್ವಾಲೆಯಾಗಿ ಹಬ್ಬಿತ್ತು. ಆಸ್ತಿ ಹಂಚಿಕೆ ಮಾಡದಿದ್ದಕ್ಕೆ ಪುಟಾಣಿ ಕುಟುಂಬದವರು ಬೇಜಾನ್ ತಲೆಕೆಡಿಸಿಕೊಂಡಿದ್ರು. ಕೊನೆಗೆ ಇನ್ನೊಂದು ಹೆಜ್ಜೆ ಮುಂದೆ ಇಟ್ಟ ಪುಟಾಣಿ ಕುಟುಂಬಸ್ಥರು, ನಿನ್ನೆ ಇಡೀ ದಿನ ಸಹೋದರರನ್ನು ಫಾಲೋ ಮಾಡಿ ಸಹೋದರರು ಬೇರೆಬೇರೆ ಕಡೆ ಇರುವುದನ್ನ ಗಮನಿಸಿ ಹತ್ಯೆ ಜಮೀನಿನಲ್ಲಿದ್ದ ಅಣ್ಣ ಹನುಮಂತ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಬಳಿಕ ಅಣ್ಣನ ಹತ್ಯೆ ಸುದ್ದಿ ಕೇಳಿ ಸಹೋದರರು ಒಬ್ಬೊಬ್ಬರಾಗಿ ಜಮೀನಿಗೆ ಬರುತ್ತಿದ್ದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ. ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ, ನಾಲ್ವರನ್ನ ಕೊಚ್ಚಿ ಕೊಲೆ ಮಾಡಿದ್ದಾರೆ. ವಿಷ್ಯ ಗೊತ್ತಾಗ್ತಿದ್ದಂತೆ ಸ್ಪಾಟ್ಗೆ ಬಂದ ಪೊಲೀಸರು ಕೊಲೆ ಭೀಕರತೆ ಕಂಡು ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ನಾಲ್ವರು ಸೋದರರ ಕೊಲೆ; ವಿಜಯಪುರದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ; ಪ್ರಕರಣ ದಾಖಲು