ಬಾಗಲಕೋಟೆ, ಜುಲೈ 14: ಎಸಿಪಿ (ACP) ಮತ್ತು ಡಿಸಿಪಿ (DCP) ಅಂತ ಹೇಳಿಕೊಡು ಇನ್ಸಪೆಕ್ಟರ್, ಬೀಟ್ ಪೊಲೀಸರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ವ್ಯಕ್ತಿಯ ವಿರುದ್ಧ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ (Banhatti Police Station) ಎಫ್ಐಆರ್ ದಾಖಲಾಗಿದೆ. ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಆರೋಪಿ, ವಿಕಲಚೇನ ಅಪ್ಪು ಹಿರೇಮಠ ಬನಹಟ್ಟಿ ಠಾಣೆ ಪೊಲೀಸರಿಗೆ ಕರೆ ಮಾಡಿ “ನಾನು ಡಿಸಿಪಿ, ನೀವು ಸರಿಯಾಗಿ ಕರ್ತವ್ಯ ಮಾಡುತ್ತಿಲ್ಲ. ನಿಮ್ಮ ವ್ಯಾಪ್ತಿಯಲ್ಲಿ ಅನೇಕ ಕಾನೂನು ಬಾಹಿರ ದಂದೆ ನಡೆಯುತ್ತಿವೆ. ನಿಯಂತ್ರಣ ಮಾಡುತ್ತಿಲ್ಲ. ನಿಮ್ಮ ವಿರುದ್ಧ ಕ್ರಮ ಕೈಗೊಳುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದನು. ನಂತರ ಇಂತಿಷ್ಟು ಹಣ ಫೋನ್ ಪೇ ಮಾಡಿ ಎಂದು ಬೇಡಿಕೆ ಇಟ್ಟಿದ್ದನು.”
ಈತನ ಜಾಲ ಪತ್ತೆಹಚ್ಚಿದ ಪೊಲೀಸರು ಆರೋಪಿ ಅಪ್ಪು ಹಿರೇಮಠನನ್ನು ಠಾಣೆಗೆ ಎತ್ತಾಕೊಂಡು ಬಂದಿದ್ದಾರೆ. ಆಗ, ಈತ ವಿಕಲಚೇತನ ವ್ಯಕ್ತಿ ಎಂದು ತಿಳಿದಿದೆ. ಬಳಿಕ ಪೊಲೀಸರು ಅಪ್ಪು ಹಿರೇಮಠನನ್ನು ವಿಚಾರಣೆ ನಡೆಸಿದಾಗ ಈ ಹಿಂದೆ ಜಮಖಂಡಿ, ಬೆಳಗಾವಿ, ಶಿವಮೊಗ್ಗದಲ್ಲೂ ಇದೇ ಮಾದರಿ ಕೃತ್ಯವೆಸಗಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಬೆಳಗಾವಿ, ಜಮಖಂಡಿ, ಶಿವಮೊಗ್ಗದಲ್ಲೂ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರಿಗೆ ತಿಳಿದಿದೆ. ನಂತರ ಪೊಲೀಸರು ವಿಕಲಚೇತನ ಅಪ್ಪು ಹಿರೇಮಠಗೆ ಅನುಕಂಪದ ಹಿನ್ನೆಲೆಯಲ್ಲಿ ನೊಟೀಸ್ ಕೊಟ್ಟು ಕಳುಹಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ ಜಿಲ್ಲೆಯಲ್ಲಿ ಮೌಢ್ಯಾಚರಣೆ: ಭಕ್ತರಿಗೆ ಕೊಡಲಿ ಏಟು, ಪೂಜಾರಿ ಅರೆಸ್ಟ್
ತಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಅಂತ ಹೇಳಿ ರಾಮಯ್ಯ ಎಂಬ ವ್ಯಕ್ತಿ ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಜಯಶ್ರೀ ಅವರಿಗೆ 7 ಲಕ್ಷ ರೂ. ವಂಚಿಸಿದ್ದನು. ಈ ಸಂಬಂಧ ಬೆಂಗಳೂರಿನ ಸಿಸಿಬಿಯಲ್ಲಿ ದೂರು ದಾಖಲಾಗಿದೆ.
ಜಯಶ್ರೀ ಮತ್ತು ಶಾಸಕ ಹೆಚ್ವೈ ಮೇಟಿ ಅಳಿಯ ರಾಜ್ಕುಮಾರ್ ಮಧ್ಯೆ ಡಿಹೆಚ್ಒ ಕುರ್ಚಿಗಾಗಿ ತಿಕ್ಕಾಟ ನಡೆದಿತ್ತು. ಈ ಮಧ್ಯೆ ಡಿಹೆಚಒ ಜಯಶ್ರೀ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಇದನ್ನು ತಡೆ ನೀಡುವಂತೆ ಜಯಶ್ರೀ ಅವರಿಗೆ ಬೆಂಗಳೂರಿನ ವಿಧಾನಸೌಧಕ್ಕೆ ಭೇಟಿ ನೀಡಿ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದರು.
ಈ ವಿಧಾನಸೌಧ ಬಳಿ ರಾಮಯ್ಯ ಎಂಬ ವ್ಯಕ್ತಿ ಜಯಶ್ರೀ ಅವರಿಗೆ ಪರಿಚಯವಾಗಿದ್ದನು. ಆತ ನಾನು ಸಿಎಂ ಸಿದ್ದರಾಮಯ್ಯ ಆಪ್ತ, ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ ಅಂತ 7 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:53 am, Sun, 14 July 24