ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿ ತೆರವು: ಬಿಜೆಪಿಯ ಮಾಜಿ ಎಂಎಲ್​ಎ ವಿರುದ್ಧ ಸ್ವಪಕ್ಷದ ಎಂಎಲ್​​ಸಿಯಿಂದ ಪರೋಕ್ಷ ಆರೋಪ

ಬಾಗಲಕೋಟೆಯ ಟ್ರಾಫಿಕ್ ಸರ್ಕಲ್​​​ನಿಂದ ಛತ್ರಪತಿ ಶಿವಾಜಿ ಮಹರಾಜ್​ ಪ್ರತಿಮೆ ತೆರವುಗೊಳಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಸ್ವಪಕ್ಷದ ಎಎಲ್​ಸಿ ಪಿ.ಹೆಚ್. ಪೂಜಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದು ಸಮಾಜದ ಬಗ್ಗೆ ಮಾತನಾಡುತ್ತೀರಿ, ನಿಮ್ಮ ಬಗ್ಗೆ ಹೇಳುತ್ತಾ ಹೋದರೆ ಬಹಳ ಇದೆ. ಆರ್​ಎಸ್​ಎಸ್ ಮೆರವಣಿಗೆ ವೇಳೆ ಹಿಂದು ಕಾರ್ಯಕರ್ತರು ಘೋಷಣೆ ಹಾಕುವ ಸಂದರ್ಭದಲ್ಲಿ, ಅಧಿಕಾರ ದುರುಪಯೋಗ ಮಾಡಿಕೊಂಡು ಕಾರ್ಯಕರ್ತರ ‌ಮೇಲೆ ಅಟ್ರಾಸಿಟಿ ಪ್ರಕರಣ ಹಾಕಿದ್ದನ್ನು ಜನ ಮರೆತಿಲ್ಲ ಎಂದರು.

ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿ ತೆರವು: ಬಿಜೆಪಿಯ ಮಾಜಿ ಎಂಎಲ್​ಎ ವಿರುದ್ಧ ಸ್ವಪಕ್ಷದ ಎಂಎಲ್​​ಸಿಯಿಂದ ಪರೋಕ್ಷ ಆರೋಪ
ಎಂಎಲ್​ಸಿ ಪಿಹೆಚ್​​ ಪೂಜಾರ್​
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ವಿವೇಕ ಬಿರಾದಾರ

Updated on:Aug 21, 2023 | 8:05 AM

ಬಾಗಲಕೋಟೆ: ನಗರದ ಟ್ರಾಫಿಕ್ ಸರ್ಕಲ್​​​ನಿಂದ ಛತ್ರಪತಿ ಶಿವಾಜಿ ಮಹರಾಜ್​ (Shivaji Maharaj) ಪ್ರತಿಮೆ ತೆರವುಗೊಳಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ (Veeranna Charantimath) ವಿರುದ್ಧ ಸ್ವಪಕ್ಷದ ಎಎಲ್​ಸಿ ಪಿ.ಹೆಚ್​​.ಪೂಜಾರ್ (PH Poojar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದು ಸಮಾಜದ ಬಗ್ಗೆ ಮಾತನಾಡುತ್ತೀರಿ, ನಿಮ್ಮ ಬಗ್ಗೆ ಹೇಳುತ್ತಾ ಹೋದರೆ ಬಹಳ ಇದೆ. ಆರ್​ಎಸ್​ಎಸ್ ಮೆರವಣಿಗೆ ವೇಳೆ ಹಿಂದು ಕಾರ್ಯಕರ್ತರು ಘೋಷಣೆ ಹಾಕುವ ಸಂದರ್ಭದಲ್ಲಿ, ಅಧಿಕಾರ ದುರುಪಯೋಗ ಮಾಡಿಕೊಂಡು ಕಾರ್ಯಕರ್ತರ ‌ಮೇಲೆ ಅಟ್ರಾಸಿಟಿ ಪ್ರಕರಣ ಹಾಕಿದ್ದನ್ನು ಜನ ಮರೆತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮರಸ್ಯದಿಂದ ನಡೆಯುವ ರಾಜಕಾರಣ ‌ಮಾಡಬೇಕಾಗಿದೆ. ಹಿಂದು ಬಾಂಧವರಲ್ಲಿ ವಿಷಬೀಜ ಬಿತ್ತುವುದು ಶೋಭೆ ತರುವುದಿಲ್ಲ. ಮೇಲಿಂದ ‌ಮೇಲೆ ನಾನು ಹಿಂದು ನಾನು‌ ಹಿಂದು ಅಂತ ಹೇಳಿದರೆ ಹಿಂದು ಆಗುವುದಿಲ್ಲ ಎಂದು ಗರಂ ಆದರು.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶಿವಾಜಿ ಮಹಾರಾಜರು ನಮ್ಮ ಆರಾಧ್ಯ ದೈವ. ಯುಗಪುರುಷ ಅಂತ ಕರಿತಿವಿ. ಪ್ರತಿಯೊಬ್ಬ ಹಿಂದು ಶಿವಾಜಿ ಮಹಾರಾಜರ ಬಗ್ಗೆ ಶ್ರದ್ಧೆ ಇಟ್ಟುಕೊಂಡಿದ್ದಾರೆ. ಅವರ ಚಿತ್ರಗಳನ್ನು ನೋಡಿದಾಗ ಕ್ಷಾತ್ರತೇಜ ನಿರ್ಮಾಣವಾಗುತ್ತದೆ. ಅಂತವರ ಮೂರ್ತಿ ತೆರವು ಮಾಡಿದ್ದನ್ನು ಉಗ್ರವಾಗಿ ಖಂಡಿಸಿಸುತ್ತೇನೆ. ನಾವು ಯಾವ ರೀತಿ ಸಮಾಜಕ್ಕೆ ಸ್ಪಂದನೆ ಮಾಡುತ್ತೇವೆ ಜನ ಗಮನಿಸುತ್ತಾರೆ. ನಗರದಲ್ಲಿನ ಮಾರುತಿ ದೇವಸ್ಥಾನ ಕಾಮಗಾರಿ ನಿಲ್ಲಿಸಿದ್ದು ಯಾರು? ಯಾಕೆ ನಿಲ್ಲಿಸಿದಿರಿ ಏನು ಕಾರಣ? ಅಲ್ಲಿ ದೇವಸ್ಥಾನದ ಕೆಲಸ ಬಂದ್ ಮಾಡಿಸಲು ಏನು ಉದ್ದೇಶ ಎಂದು ಪ್ರಶ್ನಿಸಿದರು.

ಸರಕಾರ ಸಾಮರಸ್ಯಕ್ಕೆ ಭಂಗ ತರುವಂತ‌ ಕೆಲಸ‌ ಮಾಡಬಾರದಾಗಿತ್ತು. ಶಿವಾಜಿ ಪ್ರತಿಮೆಯನ್ನು ಗಲ್ಲಿ ಗಲ್ಲಿಗಳಲ್ಲೂ ಸ್ಥಾಪನೆ ಮಾಡಬೇಕು. ಪ್ರತಿಯೊಬ್ಬರೂ ಅವರಿಂದ ಸ್ಪೂರ್ತಿ ಪಡೆಯಬೇಕು. ಮೇಲಿನ ಅಧಿಕಾರಿಗಳಿಗೆ ನಾನು ಮಾತನಾಡಿದ್ದೇನೆ. ಬರುವಂತ‌ ದಿವಸದಲ್ಲಿ ಪಾರ್ಟಿ ವರಿಷ್ಟರಿಗೂ ವಿಶೇಷ ವರದಿ ಕೊಟ್ಟು, ಶಿವಾಜಿ‌ ಜೊತೆಗೆ ಬಸವೇಶ್ವರ ಮೂರ್ತಿಯನ್ನು ಸ್ಥಾಪನೆ ಮಾಡಲು ಒತ್ತಾಯ ಮಾಡುತ್ತೇನೆ. ಮುಖ್ಯಮಂತ್ರಿಗಳಲ್ಲೂ ಕೂಡ ಒತ್ತಡ ಹಾಕುವ ಪ್ರಾಮಾಣಿಕ ಪ್ರಯತ್ನ ಮಾಡುವವನಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಅನುಮತಿಯಿಲ್ಲದೆ ಸ್ಥಾಪಿಸಿದ್ದ ಶಿವಾಜಿ ಪುತ್ಥಳಿಯನ್ನು ಹಿಂದೂ ಕಾರ್ಯಕರ್ತರ ಪ್ರತಿಭಟನೆ ನಡುವೆಯೇ ತೆರವುಗೊಳಿಸಿದ ಬಾಗಲಕೋಟೆ ನಗರಸಭೆ

ಅವಶ್ಯಕತೆ ಬಿದ್ದರೆ ವಿಧಾನಪರಿಷತ್​​ನಲ್ಲೂ ಕೂಡ ಸಂಘಟನಾತ್ಮಕ ಚರ್ಚೆ ಮಾಡುವ ಉದ್ದೇಶ ನನ್ನಲ್ಲಿದೆ. ಪೂಜ್ಯನೀಯ ವ್ಯಕ್ತಿ, ಪ್ರಾತಃಸ್ಮರಣೀಯ ವ್ಯಕ್ತಿ ಶಿವಾಜಿ ಮಹಾರಾಜ. ಅವರನ್ನು ಅಪಚಾರ‌ ಮಾಡುವಂತಹ ಚಿಂತನೆ ಮನಸಲ್ಲಿ ಯಾರಿಗಾದರೂ ಕಿಂಚಿತ್ ಬಂದರೂ ‌ಕೂಡ. ಆತ ಹಿಂದುವೆ ಅಲ್ಲ. ಇಂತಹ ವಿಚಾರ ಬಲವಾಗಿ ನಂಬಿದವನು ನಾನು. ನಾನು ಸಂಘಪರಿವಾರದ‌ ಮನೆತನದಲ್ಲಿ‌ ಹುಟ್ಟಿಬಂದ ವ್ಯಕ್ತಿ. ನಾನು ಹಿಂದು ವಿಚಾರಧಾರೆಯನ್ನು ಪ್ರತಿಪಾದನೆ ಮಾಡುತ್ತಾ ಬಂದಂತವನು ಎಂದು ತಿಳಿಸಿದರು.

ಶಿವಾಜಿ‌ ಮಹಾರಾಜ, ರಾಣಾ ಪ್ರತಾಪಸಿಂಹ, ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅಭಿಮಾನಿ‌ ನಾನು. ಮೂರ್ತಿ ತೆಗೆದ ಸಂದರ್ಭ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ, ನಾನು (ಪಿಹೆಚ್​ ಪೂಜಾರ್​) ಹಿಂದು ವಿರೋಧಿ ಎಂಬ ವಿಷಬೀಜ ಬಿತ್ತುವ ಪ್ರಯತ್ನ ಮಾಡಲಾಗಿದೆ. ನಾನು ಮತ್ತು ಮರಾಠಾ ಸಮಾಜದ ರಾಜ್ಯ ಉಪಾಧ್ಯಕ್ಷ ಡಾ ಶೇಖರ್‌ ಮಾನೆ ಮೂರ್ತಿ ಪ್ರತಿಷ್ಠಾಪನೆಗೆ ಭಂಗ ತಂದಿದ್ದೇವೆ. ತೆರವುಗೊಳಿಸುವಲ್ಲಿ ನಾವು ಪೊಲೀಸರು ಇತರೆ ಅಧಿಕಾರಿಗಳ ಜೊತೆ ‌ಮಾತಾಡಿದ್ದೇವೆ ಎಂಬ ಆರೋಪ ಮಾಡುವುದು. ಇದು ಖಂಡನೀಯ. ಇದು ವ್ಯಕ್ತಿಯ ಹತಾಶೆ ಸ್ವಭಾವ ತೋರಿಸುತ್ತದೆ ಎಂದು ವಾಗ್ದಾಳಿ ಮಾಡಿದರು.

ಆಣೆ ಪ್ರಮಾಣಕ್ಕೆ ನಾನು ಸಿದ್ದನಿದ್ದೇನೆ. ತುಳಸಿಗೇರಿ ಹನುಮಂತ ಹಾಗೂ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಬರಲು ನಾನು ಸಿದ್ದನಿದ್ದೇನೆ. ನಾನು ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆಗೆ ಅಡ್ಡಿಯಾಗಲಿ, ತೆರವು ಮಾಡಿಸುವದರಲ್ಲಿ ಯಾವುದೇ ಅಧಿಕಾರಿಗಳ‌ ಜೊತೆ ಮಾತಾಡಿದ್ದಾಗಲಿ, ಅದರಲ್ಲಿ ಸಣ್ಣ ಪಾತ್ರವಿದ್ದರೂ ಕೂಡ ತುಳಸಿಗೇರಿ ಹನುಮಂತನ ಸಾಕ್ಷಿಯಾಗಿ ಹೇಳುತ್ತೇನೆ ಇಂದೇ ಎಮ್​ಎಲ್​ಸಿ ಸ್ಥಾನಕ್ಕೆ ರಾಜೀನಾಮೆ ಕೊಡುವೆ. ಅಂತಹ ಕೆಲಸ‌ ಮಾಡುವವನು‌ ನಾನಲ್ಲ. ನೀವು ತಯಾರಾಗಿ ಬನ್ನಿ. ಒಂದು ವೇಳೆ ಸಾಬೀತು ಮಾಡದಿದರೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಸವಾಲು ಸ್ವೀಕಾರ‌ ಮಾಡಿ. ನಾನು ಪಂಥಾಹ್ವಾನ ಕೊಟ್ಟಿದ್ದೇನೆ ಎಂದು ಸವಾಲು ಹಾಕಿದರು.

ಸಮಾಜ ಒಡೆಯುವಂತಹ ಇಂತಹ ನೀಚ ಕೃತ್ಯ ನಮ್ಮ ಬಾಗಲಕೋಟೆಯಲ್ಲಿ ಎಂದೂ ಆಗಿರಲಿಲ್ಲ. ಇದಕ್ಕೆ ಸಂಬಂಧಿಸಿದವರು ಎಚ್ಚರಗೊಳ್ಳಬೇಕು ಎಂದು ಪರೋಕ್ಷವಾಗಿ ವೀರಣ್ಣ ಚರಂತಿಮಠ ಅವರಿಗೆ ಎಚ್ವರಿಕೆ ನೀಡಿದರು. ಇಂತಹ ಪ್ರಯತ್ನ ಇಂದೆ ಕೊನೆಯಾಗಬೇಕು. ವ್ಯಕ್ತಿಯ ಚಾರಿತ್ರ್ಯದ ಬಗ್ಗೆ‌ ಬೊಟ್ಟು ಮಾಡುವುದಕ್ಕಿಂತ ಮೊದಲು, ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:02 am, Mon, 21 August 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್