ಲೋಕಸಭೆ ಚುನಾವಣೆ ಟಿಕೆಟ್ಗಾಗಿ ಟೆಂಪಲ್ ರನ್: ಬಾದಾಮಿ ಬನಶಂಕರಿ ಮೊರೆ ಹೋದ ಆಕಾಂಕ್ಷಿಗಳು
ಇನ್ನೇನು ಕೆಲ ತಿಂಗಳಲ್ಲಿ ಲೋಕಸಭೆ ಚುನಾವಣೆ ಬರುತ್ತಿದೆ. ಹಾಗಾಗಿ ಟಿಕೆಟ್ಗಾಗಿ ಈಗಿಂದಲೇ ಆಕಾಂಕ್ಷಿಗಳು ಕಸರತ್ತು ಶುರು ಮಾಡಿದ್ದಾರೆ. ಅದರಲ್ಲೂ ಇಂದು ಎರಡು ಪಕ್ಷದ ಪ್ರಭಾವಿ ಆಕಾಂಕ್ಷಿಗಳು ಟಿಕೆಟ್ಗಾಗಿ ದೇವರ ಮೊರೆ ಹೋಗಿದ್ದರು. ಕೆಎಸ್ ಈಶ್ವರಪ್ಪ ಮತ್ತು ವೀಣಾ ಕಾಶಪ್ಪನವರ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿ ದೇವಿಗೆ ಪೂಜೆ ಮಾಡಿ ಟಿಕೆಟ್ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಬಾಗಲಕೋಟೆ, ಅಕ್ಟೋಬರ್ 20: ಇನ್ನೇನು ಕೆಲ ತಿಂಗಳಲ್ಲಿ ಲೋಕಸಭೆ ಚುನಾವಣೆ (Lok Sabha election) ಬರುತ್ತಿದೆ. ಹಾಗಾಗಿ ಟಿಕೆಟ್ಗಾಗಿ ಈಗಿಂದಲೇ ಆಕಾಂಕ್ಷಿಗಳು ಕಸರತ್ತು ಶುರು ಮಾಡಿದ್ದಾರೆ. ಅದರಲ್ಲೂ ಇಂದು ಎರಡು ಪಕ್ಷದ ಪ್ರಭಾವಿ ಆಕಾಂಕ್ಷಿಗಳು ಟಿಕೆಟ್ಗಾಗಿ ದೇವರ ಮೊರೆ ಹೋಗಿದ್ದರು. ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿ ದೇವಿಗೆ ಪೂಜೆ ಮಾಡಿ ಟಿಕೆಟ್ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವಿಗೆ ಕೈ ಮುಗಿದು ಸೀರೆ ಅರ್ಪಿಸಿ ಪತ್ನಿ ಮಕ್ಕಳ ಜೊತೆ ಮಾಜಿ ಡಿಸಿಎಮ್ ಕೆಎಸ್ ಈಶ್ವರಪ್ಪ ವಿಶೇಷ ಪೂಜೆ ಮಾಡಿದರೆ, ಇನ್ನೊಂದು ಕಡೆ ಟಿಕೆಟ್ ಆಕಾಂಕ್ಷಿ ವೀಣಾ ಕಾಶಪ್ಪನವರ ಅವರು ದೇವಿಗೆ ಪೂಜೆ ಸಲ್ಲಿಸಿ ಸಾವಿರಾರು ಮಹಿಳೆಯರಿಗೆ ಉಡಿ ತುಂಬಿದ್ದಾರೆ.
ಲೋಕಸಭೆ ಚುನಾವಣೆಗೆ ಕೆಲತಿಂಗಳ ಬಾಕಿ ಉಳಿದಿವೆ. ಇದರಿಂದ ಬಿಜೆಪಿ ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಟಿಕೆಟ್ ಫೈಟ್ ಶುರುವಾಗಿದೆ. ಟಿಕೆಟ್ಗಾಗಿ ಆಕಾಂಕ್ಷಿಗಳು ದೇವರ ಮೊರೆ ಹೋಗಿದ್ದಾರೆ. ತಮ್ಮ ಮಗ ಕಾಂತೇಶ ಅವರಿಗಾಗಿ ಹಾವೇರಿ ಲೋಕಸಭೆ ಟಿಕೆಟ್ಗಾಗಿ ಮಾಜಿ ಡಿಸಿಎಮ್ ಕೆ ಎಸ್ ಈಶ್ವರಪ್ಪ ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಇಂದು ಬನಶಂಕರಿ ದೇವಿ ಸನ್ನಿಧಾನಕ್ಕೆ ಬಂದ ಈಶ್ವರಪ್ಪ ಪತ್ನಿ ಮಗ ಕೆಇ ಕಾಂತೇಶ್ ಜೊತೆ ಪೂಜೆ ಮಾಡಿದರು.
ಇದನ್ನೂ ಓದಿ: ಡಿಕೆಶಿ ಜೈಲಿಗೆ ಹೋಗೋದನ್ನ ಸಿದ್ದರಾಮಯ್ಯ ಬಯಸ್ತಾರೆ ಎಂದ ಕೆಎಸ್ ಈಶ್ವರಪ್ಪ; ಇಲ್ಲಿದೆ ವಿಡಿಯೋ
ಬನಶಂಕರಿ ತಾಯಿಗೆ ವಿಶೇಷ ಪೂಜೆ ಮಾಡಿ ದೇವಿಗೆ ಸೀರೆ ಅರ್ಪಿಸಿದರು. ಬಳಿಕ ಮಾತಾಡಿದ ಈಶ್ವರಪ್ಪ ನನ್ನ ಮಗನಿಗೆ ಹಾವೇರಿ ಲೋಕಸಭೆ ಟಿಕೆಟ್ ಕೇಳಿದ್ದೇವೆ. ಹಾವೇರಿ ಟಿಕೆಟ್ ಕೊಟ್ಟರೆ ನಿಂತು ಜಯ ಸಾಧಿಸುತ್ತೇವೆ. ಇಲ್ಲದಿದ್ದರೆ ಪಕ್ಷದ ಪರ ಕೆಲಸ ಮಾಡೋದಾಗಿ ಹೇಳಿದರು. ಜೊತೆಗೆ ಮಗನಿಗೆ ಹಾವೇರಿ ಟಿಕೆಟ್ ಸಿಗಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಪೂಜೆ ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದರು. ಕೆ.ಇ ಕಾಂತೇಶ್ ಮಾತಾಡಿ ಹಾವೇರಿ ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಬೇರೆ ಕ್ಷೇತ್ರದ ಬಗ್ಗೆ ಯಾವುದೇ ಬೇಡಿಕೆ ಇಟ್ಟಿಲ್ಲ. ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದರು.
ಇದನ್ನೂ ಓದಿ: Double confusion: 1 ಪೋಸ್ಟ್ -2 ಅಧಿಕಾರಿಗಳು: ಇದು ಬಾಗಲಕೋಟೆ ನಗರಸಭೆಯಲ್ಲಿ ‘ಕಿಸ್ಸಾ ಕುರ್ಸಿ ಕಾ’ ಕಥೆ-ವ್ಯಥೆ
ಇದು ಒಂದು ಕಡೆ ಆದರೆ, ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಪ್ರಬಲ ಆಕಾಂಕ್ಷಿ ವೀಣಾ ಕಾಶಪ್ಪನವರ ಕೂಡ ಪೂಜೆ ಸಲ್ಲಿಸಿದರು. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಪತ್ನಿಯೂ ಆಗಿರುವ ವೀಣಾ, ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಬಿಜೆಪಿಯ ಗದ್ದಿಗೌಡರ ವಿರುದ್ಧ ಪರಾಜಿತಗೊಂಡಿದ್ದರು. ಇದೀಗ ಮತ್ತೆ ವೀಣಾ ಕಾಶಪ್ಪಯ ಎರಡನೇ ಬಾರಿ ಪ್ರಯತ್ನ ಆರಂಭ ಮಾಡಿದ್ದಾರೆ. ಇದರಿಂದ ನವರಾತ್ರಿ ಶುಭಘಳಿಗೆಯಲ್ಲಿ ಅವರು ಕೂಡ ಬನಶಂಕರಿ ತಾಯಿಗೆ ಪೂಜೆ ಸಲ್ಲಿಸಿದರು. ಜೊತೆಗೆ ಬನಶಂಕರಿ ತಾಯಿ ಸನ್ನಿಧಾನದಲ್ಲಿ ಒಂದುವರೆ ಸಾವಿರ ಮಹಿಳೆಯರಿಗೆ ಉಡಿತುಂಬಿದರು.
ನಾನು ಕಳೆದ ಬಾರಿ ನಮ್ಮ ಇಬ್ಬರೇ ಶಾಸಕರು ಇದ್ದಾಗಲೇ ಅಷ್ಟೊಂದು ಮತ ಕೊಟ್ಟಿದ್ದಾರೆ. ಈಗ ನಮ್ಮ ಪಕ್ಷದ ಶಾಸಕರು ಐದು ಜನರಿದ್ದು ಮತ್ತಷ್ಟು ಬಲವಿದೆ. ದೇವಿಗೆ ಲೋಕ ಕಲ್ಯಾಣಕ್ಕಾಗಿ ಬರ ನಿವಾರಣೆಗಾಗಿ ಪೂಜೆ ಜೊತೆಗೆ ಪ್ರಮುಖವಾಗಿ ನಾನು ಲೋಕಸಭೆ ಆಕಾಂಕ್ಷಿಯಾಗಿದ್ದು ನನಗೂ ಟಿಕೆಟ್ ಸಿಗಲಿ ಎಂದು ಬನಶಂಕರಿ ತಾಯಿಯಲ್ಲಿ ಕೋರಿಕೊಂಡಿರೋದಾಗಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.