ಬೈಕ್‌ಗಳ ನಡುವೆ ಮುಖಾಮುಖಿ: ಮೂವರು ಸ್ಥಳದಲ್ಲೇ ದುರ್ಮರಣ
ಬಾಗಲಕೋಟೆ: ರಬಕವಿ ಬನಹಟ್ಟಿ ತಾಲೂಕಿನ ಮಹಲಿಂಗಪುರ-ರನ್ನಬೆಳಗಲಿಯ ಮಾರ್ಗ ಮಧ್ಯೆ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ. ಗೋವಿಂದ ಕುಂಬಾಳಿ(22), ಮೆಹಬೂಬಸಾಬ್ ಜಕಾಚರೆ(50), ಮಹ್ಮದ್ ಇಲಿಯಾಸ್ ಅತ್ತಾರ(36) ಮೃತ ದುರ್ದೈವಿಗಳು. ಎರಡು ಬೈಕ್ಗಳು ಡಿಕ್ಕಿಯಾಗಿ ಸವಾರರು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಸವಾರರ ಮೇಲೆ ಅಪರಿಚಿತ ವಾಹನ ಹರಿದು ಹೋದ ಶಂಕೆ ವ್ಯಕ್ತವಾಗಿದೆ. ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಮೃತರನ್ನು ರನ್ನಬೆಳಗಲಿ ಹಾಗು ಬನಹಟ್ಟಿ ಮೂಲದವರೆಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ […]
ಬಾಗಲಕೋಟೆ: ರಬಕವಿ ಬನಹಟ್ಟಿ ತಾಲೂಕಿನ ಮಹಲಿಂಗಪುರ-ರನ್ನಬೆಳಗಲಿಯ ಮಾರ್ಗ ಮಧ್ಯೆ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ. ಗೋವಿಂದ ಕುಂಬಾಳಿ(22), ಮೆಹಬೂಬಸಾಬ್ ಜಕಾಚರೆ(50), ಮಹ್ಮದ್ ಇಲಿಯಾಸ್ ಅತ್ತಾರ(36) ಮೃತ ದುರ್ದೈವಿಗಳು.
ಎರಡು ಬೈಕ್ಗಳು ಡಿಕ್ಕಿಯಾಗಿ ಸವಾರರು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಸವಾರರ ಮೇಲೆ ಅಪರಿಚಿತ ವಾಹನ ಹರಿದು ಹೋದ ಶಂಕೆ ವ್ಯಕ್ತವಾಗಿದೆ. ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಮೃತರನ್ನು ರನ್ನಬೆಳಗಲಿ ಹಾಗು ಬನಹಟ್ಟಿ ಮೂಲದವರೆಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಮಹಲಿಂಗಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Published On - 12:25 pm, Fri, 17 January 20