ಲಾರಿ ಡಿಕ್ಕಿ: ಕೂಡಲಸಂಗಮಕ್ಕೆ ತೆರಳುತ್ತಿದ್ದ ಬಾಲಕರಿಬ್ಬರ ದುರ್ಮರಣ

ಲಾರಿ ಡಿಕ್ಕಿ: ಕೂಡಲಸಂಗಮಕ್ಕೆ ತೆರಳುತ್ತಿದ್ದ ಬಾಲಕರಿಬ್ಬರ ದುರ್ಮರಣ

ಬಾಗಲಕೋಟೆ: ಹಿಂಬದಿಯಿಂದ ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಬಾಲಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುನಗುಂದ ತಾಲೂಕಿನ ಬೆಳಗಲ್ ಕ್ರಾಸ್ ಬಳಿ ನಡೆದಿದೆ. ಇದ್ದಲಗಿ ಗ್ರಾಮದ ಜಾವೇದ್(10), ಫೈಸಲ್(7) ಮೃತ ದುರ್ದೈವಿಗಳು.

ಬೈಕ್​ನಲ್ಲಿ ಇಬ್ಬರ ಮಕ್ಕಳ ಜೊತೆ ತಾಯಿ ಸಲ್ಮಾ ಅನಗವಾಡಿ ಕೂಡಲಸಂಗಮಕ್ಕೆ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಲಾರಿ ಡಿಕ್ಕಿಯೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸಲ್ಮಾಗೂ ಗಾಯಗಳಾಗಿದ್ದು, ಹುನಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Click on your DTH Provider to Add TV9 Kannada