ಅಪ್ರಾಪ್ತ ಬಾಲಕನ ಮೇಲೆ ಅನೈಸರ್ಗಿಕ ಅತ್ಯಾಚಾರ, ಕೊಲೆ ಕೇಸ್​: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 14, 2023 | 10:16 PM

ಅಪ್ರಾಪ್ತ ಬಾಲಕನ ಮೇಲೆ ಅನೈಸರ್ಗಿಕ ಅತ್ಯಾಚಾರ ಮಾಡಿ ಮರ್ಮಾಂಗ ಕೊಯ್ದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಪೋಕ್ಸೊ ಕಾಯ್ದೆಯಡಿ 20 ವರ್ಷ ಕಠಿಣ ಮತ್ತು ಜೀವಾವಧಿ ಶಿಕ್ಷೆ ವಿಧಿಸಿ ಬಾಗಲಕೋಟೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ.

ಅಪ್ರಾಪ್ತ ಬಾಲಕನ ಮೇಲೆ ಅನೈಸರ್ಗಿಕ ಅತ್ಯಾಚಾರ, ಕೊಲೆ ಕೇಸ್​: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಪ್ರಾತಿನಿಧಿಕ ಚಿತ್ರ
Follow us on

ಬಾಗಲಕೋಟೆ: ಅಪ್ರಾಪ್ತ ಬಾಲಕನ ಮೇಲೆ ಅನೈಸರ್ಗಿಕ ಅತ್ಯಾಚಾರ ಮಾಡಿ ಮರ್ಮಾಂಗ ಕೊಯ್ದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಪೋಕ್ಸೊ ಕಾಯ್ದೆಯಡಿ 20 ವರ್ಷ ಕಠಿಣ ಮತ್ತು ಜೀವಾವಧಿ ಶಿಕ್ಷೆ (life imprisonment) ವಿಧಿಸಿ ಬಾಗಲಕೋಟೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸೈಯದ್ ಬಲೆಗೂರ ರೆಹಮಾನ್​ ಆದೇಶ ಹೊರಡಿಸಿದ್ದಾರೆ. ಮೂಲಕ 2018ರಲ್ಲಿ ಜಿಲ್ಲೆಯ ಬನಹಟ್ಟಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ತೆರೆ ಎಳೆಯಲಾಗಿದೆ. ಪ್ರಕರಣದಲ್ಲಿ ವಿಶೇಷ ಜಿಲ್ಲಾ ಸರಕಾರಿ ಅಭಿಯೋಜಕರಾಗಿ ಮಲ್ಲಿಕಾರ್ಜುನ ಹಂಡಿ ವಾದ ಮಂಡಿಸಿದ್ದಾರೆ.

ಸಾಬು ಪರಗೊಂಡ ಎಂಬಾತ ಬಾಲಕನ ಮೇಲೆ ವಿಕೃತಿ ಮೆರೆದಿದ್ದ. ಆತನ ವಿರುದ್ಧ ಅಪ್ರಾಪ್ತನ ತಂದೆ ಬನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೋರ್ಟ್​ಗೆ ಬನಹಟ್ಟಿ ಸಿಪಿಐ ಚಾರ್ಜ್ ಶೀಟ್​ ಸಲ್ಲಿಸಿದ್ದರು. ಐದು ವರ್ಷಗಳ ಕಾಲ ವಿಚಾರಣೆ ನಡೆದಿದ್ದು, ಒಟ್ಟು ಐದು ಸೆಕ್ಷನ್​ಗಳ ಅಡಿಯಲ್ಲಿ ಇಂದು ಶಿಕ್ಷೆಯ ತೀರ್ಪು ಪ್ರಕಟಣೆ ಮಾಡಲಾಗಿದೆ.

ಇದನ್ನೂ ಓದಿ: Bengaluru Double Murder: 10 ಸಾವಿರ ರೂಪಾಯಿಗೆ ಡೀಲ್ ಆಗಿತ್ತು ಒಂದು ಕೊಲೆ, ಆದರೆ ನಡೆದಿದ್ದು ಜೋಡಿ ಹತ್ಯೆ

302ರ ಪ್ರಕಾರ ಜೀವಾವಧಿ ಕಠಿಣ ಶಿಕ್ಷೆ 10 ಸಾವಿರ ದಂಡ. ಪೋಕ್ಸೊ ಕೇಸ್​ಯಡಿ 20 ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ. ದಂಡ. 363 ಸೆಕ್ಷನ್ ಪ್ರಕಾರ 4 ವರ್ಷ, 404 ಅಪರಾಧಕ್ಕೆ 3 ವರ್ಷ, 201 ಅಪರಾಧಕ್ಕೆ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಅಪ್ರಾಪ್ತನ ತಂದೆಗೆ 7 ಲಕ್ಷ ರೂ ಪರಿಹಾರ ಧನ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದೆ.

ಇದನ್ನೂ ಓದಿ: 7 ವರ್ಷ ಜೈಲಿನಲ್ಲಿದ್ದರೂ ಬುದ್ದಿಕಲಿಯದ ಆರೋಪಿ; ಹೊರ ಬಂದ ಕೆಲ ದಿನಗಳಲ್ಲೇ ಮತ್ತೇರಡು ಕೇಸ್​ ದಾಖಲು

ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಸವಾರ ಸಾವು

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಕಂಸಾಗರ ಗ್ರಾಮದ ಬಳಿ ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವಂತಹ ಘಟನೆ ನಡೆದಿದೆ. ಹೊಸದುರ್ಗ ಮೂಲದ ಲೋಹಿತ್(33), ನಾಗರಾಜ್(35) ಮೃತರು. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:04 pm, Fri, 14 July 23