Bengaluru Double Murder: 10 ಸಾವಿರ ರೂಪಾಯಿಗೆ ಡೀಲ್ ಆಗಿತ್ತು ಒಂದು ಕೊಲೆ, ಆದರೆ ನಡೆದಿದ್ದು ಜೋಡಿ ಹತ್ಯೆ

ಏರೊನಿಕ್ಸ್ ಮೀಡಿಯಾ ನೆಟ್ ಕಂಪನಿಯ ಎಂಡಿ ಫಣೀಂದ್ರ ಹಾಗೂ ಸಿಇಒ ವಿನು ಕುಮಾರ್ ಹತ್ಯೆ ತನಿಖೆ ಕೈಗೊಂಡ ಪೊಲೀಸರಿಗೆ ಆರೋಪಿಗಳ ಒಳಸಂಚು ಒಂದೊಂದಾಗೆ ತೆರೆದುಕೊಳ್ಳುತ್ತಿದೆ. ಸದ್ಯ ಕೇವಲ 10 ಸಾವಿರ ರೂ,ಗೆ ಒಂದು ಕೊಲೆ ಡೀಲ್ ಆಗಿತ್ತು. ಆದರೆ ನಡೆದಿದ್ದು ಮಾತ್ರ ಜೋಡಿ ಕೊಲೆ ಆಗಿದೆ.

Bengaluru Double Murder: 10 ಸಾವಿರ ರೂಪಾಯಿಗೆ ಡೀಲ್ ಆಗಿತ್ತು ಒಂದು ಕೊಲೆ, ಆದರೆ ನಡೆದಿದ್ದು ಜೋಡಿ ಹತ್ಯೆ
ಎಂಡಿ ಫಣೀಂದ್ರ, ಸಿಇಒ ವಿನು ಕುಮಾರ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 14, 2023 | 4:23 PM

ಬೆಂಗಳೂರು: ಅಮೃತಹಳ್ಳಿಯಲ್ಲಿ ನಡೆದಿದ್ಸ ಏರೊನಿಕ್ಸ್ ಮೀಡಿಯಾ ನೆಟ್ ಕಂಪನಿಯ ಎಂಡಿ ಫಣೀಂದ್ರ ಹಾಗೂ ಸಿಇಒ ವಿನು ಕುಮಾರ್ ಹತ್ಯೆ (Double Murder Case) ತನಿಖೆ ಕೈಗೊಂಡ ಪೊಲೀಸರಿಗೆ ಆರೋಪಿಗಳ ಒಳಸಂಚು ಒಂದೊಂದಾಗೆ ತೆರೆದುಕೊಳ್ಳುತ್ತಿದೆ. ಅಸಲಿಗೆ ಕೊಲೆಗೂ ಮುನ್ನ ಏಳು ತಿಂಗಳ ತಂತ್ರ ಇದ್ದರೂ ಕಳೆದ ಒಂದು ತಿಂಗಳಲ್ಲಿ ನಡೆದಿದ್ದ ಆ ಷಡ್ಯಂತರ ಈಗ ಬಯಲಾಗಿದೆ. ಕೇವಲ 10 ಸಾವಿರಕ್ಕೆ ಡೀಲ್ ಆಗಿತ್ತು ಒಂದು ಕೊಲೆ. ಆದರೆ ನಡೆದಿದ್ದು ಜೋಡಿ ಕೊಲೆ. ಹತ್ಯೆ ಮಾಡಲು ಪಣತೊಟ್ಟವರು ಮೊದಲು ಸ್ಕೆಚ್ ಹಾಕಿದ್ದು ಪೊಲೀಸರಿಗೆ ಯಾವ ಕ್ಲ್ಯೂ ಸಹ ಬಿಟ್ಟು ಕೊಡದಂತೆ ಪ್ಲ್ಯಾನ್​ ಮಾಡಿದ್ದರು.

ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಹಾಗೂ ಎಎಪಿ ಮುಖಂಡ ಅರುಣ್ ಬಂಧಿಸಿದ್ದ ಅಮೃತಹಳ್ಳಿ ಪೊಲೀಸರು ವಿಚಾರಣೆಗೆಂದು ಎಂಟು ದಿನಗಳ ವಶಕ್ಕೆ ಪಡೆದಿದ್ದಾರೆ. ಈತನ ವಿಚಾರಣೆ ವೇಳೆ ಕೊಲೆಯ ಹಿಂದೆ ನಡೆದಿದ್ದ ಷಡ್ಯಂತರದ ಯೋಜನೆಗಳು ಈಗ ಬಯಲಾಗಿವೆ. ಮೊದಲಿಗೆ ಆರೋಪಿಗಳು ಪೊಲೀಸರಿಗೆ ಯಾವುದೇ ಕ್ಲ್ಯೂ ಬಿಡದಂತೆ ಹತ್ಯೆ ನಡೆಸುವ ತಂತ್ರ ಎಣೆದಿದ್ದರು. ಅದಕ್ಕೆ ಅರುಣ್ ಮನೆ ಹಾಗೂ ಬನ್ನೇರುಘಟ್ಟದ ಆತನ ಜಿ ನೆಟ್ ಕಂಪನಿಯ ಕಚೇರಿಯಲ್ಲಿ ಮೂರು ಬಾರಿ ಮಿಟಿಂಗ್ ಸಹ ಮಾಡಲಾಗಿತ್ತು. ಅದರಂತೆ ಹತ್ಯೆಗೂ ಮುನ್ನ ಹಾಗೂ ನಂತರ ಮಾಡಬೇಕಾದ ಕೆಲಸ ಹಾಗೂ ಪೊಲೀಸರಿಗೆ ಸಿಗದಂತೆ ಪರಾರಿ ಹಾಗೂ ತಲೆಮರೆಸಿಕೊಳ್ಳುವುದರ ಬಗ್ಗೆ ಈ ಚರ್ಚೆಗಳಲ್ಲಿ ನಿರ್ಧಾರವಾಗಿತ್ತು.

ಕೊಲೆ ನಡೆದ ದಿನ ಜೋಕರ್ ಫಿಲಿಕ್ಸ್ ತನ್ನ ಮೊಬೈಲ್​ಗಳನ್ನು ಮನೆಯಲ್ಲೇ ಬಿಟ್ಟು ಬಂದಿದ್ದ. ನಂತರ ಮತ್ತೋರ್ವ ಆರೋಪಿಯ ಮೊಬೈಲ್ ಅನ್ನು ಬಳಸಿ ಕ್ಯಾಬ್ ಬುಕ್ ಮಾಡಿದ್ದ. ಈ ಮೂಲಕ ಘಟನೆ ನಡೆದ ಸ್ಥಳದ ಹಿಂಬಾಗಲಿನಿಂದ ಹೊರಟವರು‌ ನಾಪತ್ತೆಯಾದ ಬಗ್ಗೆ ಯಾವುದೇ ಕ್ಲ್ಯೂ ಸಿಗಬಾರದು ಎನ್ನುವುದು ಷಡ್ಯಂತ್ರವಾಗಿತ್ತು.

ಇದನ್ನೂ ಓದಿ: ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಕೇಸ್; ಜಿ-ನೆಟ್​​ ಕಂಪನಿ ಮಾಲೀಕ, ಎಎಪಿ ಮುಖಂಡ ಅರುಣ್ ಅರೆಸ್ಟ್

ಹೀಗೆ ಕ್ಯಾಬ್ ಬುಕ್ ಮಾಡಿ ಏನು ಗೊತ್ತಿಲ್ಲ ಎಂಬಂತೆ ಮೆಜೆಸ್ಟಿಕ್​ಗೆ ತೆರಳಿದ ಆರೋಪಿಗಳು ರೈಲು ಮುಖಾಂತರ ಕುಣಿಗಲ್​ಗೆ ತೆರಳಿದ್ದರು. ಅಲ್ಲಿ ಅದಾಗಲೇ ಪೊಲೀಸರಿಗೆ ಅನುಮಾನ ಬಾರದ ಹಾಗೆ ಮತ್ತೊಂದು ತಂತ್ರ ಎಣೆದಿದ್ದ ಹೊಟೆಲ್ ರೂಂನ್ನು ಸಹ ಮೊದಲೇ ಬುಕ್ ಮಾಡಲಾಗಿತ್ತು. ರೂಂಗೆ ಬಂದ ಅವರ ಯೋಚನೆ ನಾಲ್ಕು‌ದಿನ ಅಲ್ಲೇ ಉಳಿಯುವುದಾಗಿತ್ತು. ನಂತರ ಶಿವಮೊಗ್ಗ ಕಡೆ ತೆರಳುವ ಚಿಂತನೆ ಮಾಡಿದ್ದರು.

ಕಾರಣ ಅದಾಗಲೇ ಪೊಲೀಸರ ಸಿಕ್ಕ ಮಾಹಿತಿ ಬೆನ್ನತ್ತಿ‌ ಶಿವಮೊಗ್ಗದಲ್ಲಿ ತಲಾಶ್ ನಡೆಸಿರುತ್ತಾರೆ. ನಮ್ಮ ಬಗ್ಗೆ ಯಾವುದೇ‌ ಸುಳಿವು ಸಿಗದೇ ವಾಪಾಸ್ ಆಗಿರುತ್ತಾರೆ. ಅದಾದ ಬಳಿಕ ಹೊದರೆ ನಮಗೆ ಯಾವುದೇ ಸಮಸ್ಯೆ ಆಗೊಲ್ಲ ಎನ್ನುವುದು ಜೊಡಿ ಕೊಲೆ‌‌ ಹಂತಕರ ಯೋಜನೆಯಾಗಿತ್ತು. ಆದರೆ ಆರಂಭದಲ್ಲಿ ಎಲ್ಲಾ ಅಂದಕೊಂಡಂತೆ ನಡೆದ ಖುಷಿಗೆ ಹಂತಕರು ಮಾಡಿದ ಅದೊಂದು ಎಡವಟ್ಟು ಅಡಗಿದ್ದವ ಬುಡಕ್ಕೆ ಬೆಂಕಿ ಹಚ್ಚಿಸಿತ್ತು.

ಜೊಡಿ ಕೊಲೆ‌ ನಡೆದ ಬಳಿಕ ಈಶಾನ್ಯ ವಿಭಾಗದ ಡಿಸಿಪಿ ಲಕ್ಷಿ ಪ್ರಸಾದ್ ನಿರ್ದೇಶನದಲ್ಲಿ ತಯಾರಾದ ಎಸಿಪಿ ರಂಗಪ್ಪ ನೇತೃತ್ವದ 40 ಜನರ ವಿವಿಧ ತಂಡ ಆರೋಪಿಗಳ ಹೆಜ್ಜೆ ಗುರುತು ಪತ್ತೆಗೆ ಮುಂದಾಗಿತ್ತು. ಒಂದೊಂದು ತಂಡ ಒಂದೊಂದು ಆಯಾಮದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವಲ್ಲಿ ನಿರತವಾಗಿತ್ತು. ಅದರಂತೆ ಒಂದು ತಂಡ ಆರೋಪಿಗಳ ಮೊಬೈಲ್ ಹಾಗೂ ನೆಟ್ವರ್ಕ್ ಗಳ ಆಧರಾದಲ್ಲಿ ಪರಿಶೀಲನೆ, ಮತ್ತೊಂದು ತಂಡ ಘಟನಾ ಸ್ಥಳದಲ್ಲಿ‌ ಸಿಸಿಟಿವಿ ಸಂಗ್ರಹ ಮತ್ತು ಪರಿಶೀಲನೆ, ಮಗದೊಂದು ತಂಡ ಹೈ ವಿಟ್ನೆಸ್​ಗಳಿಂದ ಮಾಹಿತಿ ಸಂಗ್ರಹ ಹಾಗೂ ಇನ್ನೊಂದು ತಂಡ ಸಿಕ್ಕ ಮಾಹಿತಿಗಳ ಮುಖಾಂತರ ಆರೋಪಿಗಳ ಪ್ರೋಫೈಲ್ ಮಾಹಿತಿಗಳ ಸಂಗ್ರಹ ಮಾಡುವುದು ಹೀಗೆ ಹಲವು ಮಾದರಿಯಲ್ಲಿ ಪತ್ತೆಗೆ ಬಲೆ ಬೀಸಿದ್ದರು.

ಈ ನಡುವೆ ಕೊಲೆಗೂ ಮುನ್ನ ಧೈರ್ಯಕ್ಕಾಗಿ ಎಣ್ಣೆ ಹೊಡೆದಿದ್ದ ಗ್ಯಾಂಗ್ ಜೊಡಿ ಕೊಲೆ ಬಳಿಕ ಆದ ಕೆಲಸದ ಸಂತೋಷಕ್ಕೆ ಕುಣಿಗಲ್ ಬಾರ್ ಒಂದರಲ್ಲಿ ಪಾರ್ಟಿ ಮಾಡುತಿದ್ದರು. ಈ ನಡುವೆ ಎಣ್ಣೆ ಮತ್ತಿನಲ್ಲಿ ಜೋಕರ್ ಫಿಲಿಕ್ಸ್ ಹತ್ಯೆ ಮಾಡಿದ ಸುದ್ದಿ ಪ್ರಸಾರವಾದ ಸಂಗತಿಯನ್ನು ಇನ್ಸ್ಟಾಗ್ರಾಮ್​ನ ಸ್ಟೇಟಸ್​ನಲ್ಲಿ ಹಂಚಿಕೊಂಡಿದ್ದ. ಇದರ ಬೆನ್ನಲ್ಲೇ ಆಕ್ಯ್ಟೀವ್ ಆದ ಖಾಕಿ ಕುಣಿಗಲ್​ನ ಬಾರ್​ನಲ್ಲಿ ಕುಳಿತಿದ್ದ ಹಂತಕರ ಎಡೆಮುರಿ ಕಟ್ಟಿತ್ತು.

ಇದನ್ನೂ ಓದಿ: ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಕೇಸ್​: ಹತ್ಯೆ ಹಿಂದಿದೆಯಾ ಜಿ-ನೆಟ್​​ ಕಂಪನಿ ಮಾಲೀಕನ ಕೈವಾಡ?

ಪ್ರಕರಣದ ಮೂವರು ಆರೋಪಿಗಳ ಬಂಧಿಸಿದ್ದ ಅಮೃತಹಳ್ಳಿ ಪೊಲೀಸರಿಗೆ ನಾಲ್ಕನೇ ಆರೋಪಿ ಅರುಣ್ ಬಗೆಗಿನ ಸಾಕ್ಷಿ ಸಂಗ್ರಹ ಆರಂಭದಲ್ಲಿ ಕಷ್ಟ ಸಾಧ್ಯವಾಗಿತ್ತು. ಕಾರಣ ಆರೋಪಿಗಳು ಹತ್ಯೆಗೂ ಮುನ್ನ ನಡೆಸಿದ್ದ ಆ ಒಂದು ತಿಂಗಳ ಷಡ್ಯಂತರ ಕೊಲೆ ಮಾಡಲು ಜೊಕರ್ ಫಿಲಿಕ್ಸ್ ನ ಹಳೆ ದ್ವೇಷವನ್ನೇಲ್ಲಾ ಮುಂದಿಟ್ಟಿದ್ದ ಅರುಣ್ ಆತನ ಪ್ರೇರೇಪಿಸಿದ್ದನಂತೆ. ಏನೆ ಆದರೂ ನಾನು ನೊಡಿಕೊಳ್ಳುತ್ತೇನೆ ನೀನು ಕೆಲಸ ಮುಗಿಸು ಎಂದಿದ್ದನಂತೆ.

ನಂತರ ಕೊಲೆ ಮಾಡಲು ಮಾರಕಾಸ್ತ್ರ ಮತ್ತು ಹತ್ತು ಸಾವಿರ ಹಣ ಸಹ ನೀಡಿ ಕಳುಹಿಸಿದ್ದನಂತೆ. ಕೊನೆಗೆ ಕೊಲೆ ನಡೆಸಲು ನಿರ್ಧಾರವಾದ ದಿನ ಏನು ಗೊತ್ತಿಲ್ಲದವನಂತೆ ಹತ್ಯೆಗೂ‌ ಮುನ್ನ ಡೆಲ್ಲಿಗೆ ಹಾರಿದ್ದನಂತೆ. ಇತ್ತ ಕೊಲೆ ನಡೆದ ಬಳಿಕ ಪೊಲೀಸರಿಗೆ ಆತನ ಪಾತ್ರದ ಸುಳಿವು ಸಿಗುತಿದ್ದಂತೆ ಆತನ ಭೇಟೆ ಆರಂಭಿಸಿದ್ದರು. ಆದರೆ ಆರಂಭದಲ್ಲಿ ಅರುಣ್ ನನಗೂ ಈ ಕೊಲೆಗೂ ಏನು ಸಂಬಂಧವಿಲ್ಲ ಜೊತೆಗೆ ನನಗೆನೂ ಗೊತ್ತಿಲ್ಲ ಎಂದಿದ್ದನಂತೆ. ನಂತರ ಹಲವು ಆಯಾಮದ ವಿಚಾರಣೆ ವೇಳೆ ಜೊಕಲ್ ಫಿಲಿಕ್ಸ್ ಕೊಲೆ ಮಾಡಲು ಯೋಚಿಸಿದ್ದಾಗ ನಾನೇ ಆತನಿಗೆ ಬೇಡ ಈ ರೀತಿ ಮಾಡಬೇಡ ಅಂತ ಬುದ್ದಿ ಹೇಳಿದ್ದೆ ಅಂತ ಹೇಳಿದ್ದಾನೆ.

ಆದರೆ ಪೊಲೀಸರು ಸಾಕ್ಷಿ ಸಮೇತ ಅಸಲಿ ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಕಾನ್ಸಪರೆಸಿ, ಪ್ರವೋಕಿಂಗ್ ಕೆಲಸ ಹಾಗೂ ಹಣ ನೀಡಿರೊ ಸಂಗತಿ ಬಯಲಾದಾಗ ಆತ ಸಹ ಕೊಲೆಯಲ್ಲಿ ಭಾಗಿಯಾದ ಸಂಗತಿ ಒಪ್ಪಿಕೊಂಡಿದ್ದಾನೆ.. ಸದ್ಯ ಕೊರ್ಟ್ ಅನುಮತಿ ಪಡೆದ ಎಂಟು ದಿನ ಅರುಣ್ ವಶಕ್ಕೆ ಪಡೆದ ಅಮೃತಹಳ್ಳಿ ಪೊಲೀಸರು ವಿಚಾರಣೆ ಮುಂದುವರೆಸಿದ್ದು, ಕೊಲೆಯ ಹಿಂದಿದ್ದ ಷಡ್ಯಂತ್ರದ ಹಲವು ಆಯಾಮ ಒಂದೊಂದಾಗೆ ತೆರೆದುಕೊಳ್ಳುತ್ತಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’